ದಾವಣಗೆರೆ :
ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಜಿಲ್ಲಾ ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಜನಜಾಗೃತಿ ಜಾಥಾ ನಡೆಸಿದರು.ಜಾಥಾಕ್ಕೆ ಡಿಹೆಚ್‍ಒ ಡಾ.ತ್ರಿಪುಲಾಂಭ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಹಾಗೂ ಅಂಧತ್ವ ನಿಯಂತ್ರಣಾಧಿಕಾರಿ ಸರೋಜಾಬಾಯಿ.ಜೆ.ಎಂ. ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನೇತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಭುದೇವ ಹಾಗೂ ಡಾ.ಸಂಗೀತಾ, ಗ್ಲಾಕೋಮ ರೋಗವು ಸದ್ದಿಲ್ಲದೆ ಕಣ್ಣಿನ ದೃಷ್ಟಿಯನ್ನು ಕುಂದಿಯುತ್ತದೆ, ಗ್ಲಾಕೋಮಾವನ್ನು ಪ್ರಾಥಮಿಕ ಹಂತದಲ್ಲೆ ತಪಾಸಣೆ ಮತ್ತು ಚಿಕಿತ್ಸೆ ಮಾಡಿಸಿಕೊಳ್ಳುವುದರ ಮೂಲಕ ಸಾರ್ವಜನಿಕರು ತಮ್ಮ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ|| ವಿಶ್ವನಾಥ್, ಜಿಲ್ಲೆಯ ನೇತ್ರ ತಜ್ಞರುಗಳಾದ ಡಾ. ನಾಗವೇಣಿ, ಡಾ.ಸೀತಾರಾಮ್, ಡಾ.ದ್ರಾಕ್ಷಾಯಿಣಿ, ಡಾ.ಚೇತನಾ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಡಾ|| ಶಮ್‍ಷದ್ದ ಬೇಗಂ, ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಸಹನಾ, ನೇತ್ರ ತಜ್ಞರಾದ ಡಾ.ರವೀಂದ್ರನಾಥ, ಡಾ|| ಚಂದ್ರಶೇಖರ, ಡಾ.ಚಿನ್ಮಯ, ಡಾ.ಶಾಂತಲಾ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
