ಹರಪನಹಳ್ಳಿ:
ಮರಳಿ ಬಾರದ ಅಮೂಲ್ಯ ಜೀವನವನ್ನು ಹುಮ್ಮಸ್ಸಿನಿಂದ ಅತಿವೇಗದ ಚಾಲನೆಮಾಡಿ ಕಳೆದುಕೊಳ್ಳಬೇಡಿ ಎಂದು ಡಿವೈಎಸ್‍ಪಿ ನಾಗೇಶ್ ಐತಾಳ್ ಹೇಳಿದರು.
ಪಟ್ಟಣದ ತರಳಬಾಳು ಶಾಲೆಯ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ರಸ್ತೆ ಸಂಚಾರಿ ಜಾಗೃತಿ ಸಪ್ತಾಹ -19 ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಅವರು. ಕೊಳ್ಳಲಾಗದ್ದು ಜೀವ ಅಂತಹ ಅಮೂಲ್ಯವಾದ ಜೀವವನ್ನು ನಿಮ್ಮ ಮನಸಂತೋಷಕ್ಕಾಗಿ ಅತಿವೇಗದ ಚಾಲನೆಯಿಂದ ಕಳೆದುಕೊಳ್ಳಬೇಡಿ. ಸಂಚಾರ ನಿಯಮದಂತೆ ವೇಗದ ಮಿತಿಯನ್ನು ಪಾಲಿಸಿ, ಅತಿವೇಗದಿಂದ ಪ್ರಾಣಕ್ಕೆ ಹಾನಿ. ಪರವಾನಿಗೆ ಇಲ್ಲದೇ ವಾಹನ ಚಾಲನೆಮಾಡಿದರೆ ವಾಹನ ಮಾಲೀಕನೇ ಹೊಣೆಗಾರನಾಗುತ್ತಾನೆ ಎನ್ನುವುದನ್ನು ಮರೆಯಬೇಡಿ. ನಿಮ್ಮ ಜೀವ ನಿಮ್ಮ ಕೈಯಲ್ಲಿ ಸುರಕ್ಷಿತವಾಗಿರಲು ಹಲ್ಮೆಟ್ ಧರಿಸುವುದು ಕಡ್ಡಾಯ. ನಿಮ್ಮ ಕುಟುಂಭ ನಿಮ್ಮನ್ನು ಕಾಯುತ್ತಿರುತ್ತದೆ ಎಂಬುದನ್ನು ನೀವು ಮರೆಯಬಾರದು ಎಂದರು.
ಮುಖ್ಯೋಪಾದ್ಯಾಯ ನಂಜಪ್ಪ ಮಾತನಾಡಿ. ಸಂಚಾರದ ನಿಯಮಗಳು ದಿನನಿತ್ಯ ಜಾರಿಯಲ್ಲಿರುತ್ತವೆ. ಅವುಗಳ ಸರಿಯಾದ ಪಾಲನೆಯಿಲ್ಲದೆ ಅಪಘಾತಗಳು ಉಂಟಾಗುತ್ತವೆ. ಮನುಷ್ಯನಜೀವ ಬಹಳ ಅಮೂಲ್ಯವಾಗಿದೆ. ರಸ್ತೆ ಸಂಚಾರದ ನಿಯಮಗಳ ಉಲ್ಲಂಘನೆಯಿಂದ ಸಂಭವಿಸುವ ಅಪಘಾತಗಳಿಗೆ ಮನುಷ್ಯ ಬಲಿಯಾಗುತ್ತಾನೆ ಎಂದರು.
ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು ವಾಹನದಟ್ಟಣೆಯೂ ಅಧಿಕವಾಗಿದೆ ಅದರಲ್ಲಿಯೂ ಶಾಲಾ ಪೂರ್ವ ಹಾಗೂ ಮುಕ್ತಾಯದ ಅವಧಿಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು ಕಿಕ್ಕಿರುದಿರುತ್ತವೆ ಈ ಹಿನ್ನಲೆಯಲ್ಲಿ ರಸ್ತೆಯಲ್ಲಿ ಅಳವಡಿಸಿರುವ ಸಂಚಾರಿ ಚಿಹ್ನೆಗಳನ್ನು ಅನುಸರಿಸಿ ಜಾಗೃತೆ ವಹಿಸುವಮತೆ ಮಕ್ಕಳಿಗೆ ತಿಳಿಸಿದರು.
ತರಳಬಾಳು ಶಲಾ ಸಮಿತಿ ಕಾರ್ಯದರ್ಶಿ ಕುಸುಮ ಜಗದೀಶ್ ಮಾತನಾಡಿ. ಸಂಚಾರ ನಿಯಮ ಪಾಲಿಸದೆ ಅತಿವೇಗದ ಚಾಲನೆಯಿಂದ ತಿಂಗಳಿಗೆ 10 ಸಾವಿರದಷ್ಟು ಜನ ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಅಪಘಾತದಲ್ಲಿ ವಯಸ್ಕರರೇ ಹೆಚ್ಚಾಗಿರುವುದು ವಿಷಾದದ ಸಂಗತಿಯಾಗಿದೆ. ಜಾಗಾರೂಕತೆಯ ಸಂಚಾರ ನಮಗಷ್ಟೇ ಅಲ್ಲ ನಮ್ಮ ಕುಟುಂಭದ ರಕ್ಷಣೆಯನ್ನೂ ಮಾಡುತ್ತದೆ ಎಂದರು.
ವಿದ್ಯಾರ್ಥಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಘೋಷಣೆಯೊಂದಿಗೆ ಸಂಚರಿಸಿ ನಂತರ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಸದ್ಯೋಜಾತಪ್ಪ, ಶಿಕ್ಷಕರಾದ ರಾಜಪ್ಪ, ಉಷಾದೇವಿ, ಅಂಬಮ್ಮ, ಶೃತಿ, ಕುಮಾರಸ್ವಾಮಿ, ಅಕ್ಷತಾ, ವಿಜಯಲಕ್ಷ್ಮಿ, ತೇಜಸ್ವಿನಿ, ಶ್ವೇತಾ, ಸುಧಾ, ರೇಶ್ಮಾ ಹಾಗೂ ವಿದ್ಯಾರ್ಥಿಗಳಾದ ಸಂಪತ್‍ಕುಮಾರ್, ಗಾಯತ್ರಿ, ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
