ಟ್ರಂಪ್ ಖಾಸಗಿ ವಿಮಾನ ಅಪಘಾತ…!!!

ಅಮೇರಿಕ:

        ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದ ವೇಳೆ ಬಳಸಿದ್ದ ವಿಮಾನ ಬೋಯಿಂಗ್ 757 ನಿನ್ನೆ ಲಾಗಾರ್ಡಿಯಾ ಏರ್ಪೋರ್ಟ್ನಲ್ಲಿ ನಿಲ್ಲಿಸಿದ್ದಾಗ ನ್ಯೂಯಾರ್ಕ್ ವಾಯು ಸಂಚಾರ ದಟ್ಟಣೆಯಿಂದಾಗಿ ಬೇರೆ ಕಡೆಯಿಂದ ಬಂದ ಖಾಸಗಿ ವಿಮಾನ ವನ್ನು ಆ ವಿಮಾನಾಶ್ರಯದ ಒಬ್ಬ ಫೆಂಡರ್ ಮತ್ತು ಬೇರೆ ಸಿಬ್ಬಂಧಿ ಪಾರ್ಕ್ ಮಾಡಿಸಲು ಪ್ರಯತ್ನಿಸುವಾಗ ಟ್ರಂಪ್ ಅವರ ಸಂಸ್ಥೆಗೆ ಸೇರಿದ ವಿಮಾನದ ರೆಕ್ಕೆಗೆ ಹೊಡೆದ ಪರಿಣಾಮ ರೆಕ್ಕೆಗೆ ಹಾನಿಯಾದ ಘಟನೆ ಸಂಭವಿಸಿದ್ದು ಇದರಲ್ಲಿ ಯಾವುದೇ ಸಾವು ನೋವು ಸಣಭವಿಸಿಲ್ಲ ಆದರೆ ಈ ವಿಷಯ ತಿಳಿದ ಟ್ರಂಪ್ ಗೆ  ತೀವ್ರ ನೋವಾಗಿದೆ ಎಂದು ಮೂಲಗಳು ತಿಳಿಸಿವೆ.

       ಟ್ರಂಪ್ ವಿಮಾನಕ್ಕೆ ನಿಲುಗಡೆಗೆ ಬಂದ ಬೇರೊಂದು ಖಾಸಗಿ ವಿಮಾನವು ತನ್ನ ನಿರ್ಧಿಷ್ಟ ನಿಲುಗಡೆ ತಾಣಕ್ಕೆ ತೆರಳುವಾಗ ಟ್ರಂಪ್ ವಿಮಾನದ ರೆಕ್ಕೆಗೆ ಬಡಿದು ಟ್ರಂಪ್ ಅವರ ವಿಮಾನದ ರೆಕ್ಕೆ ಮುರಿದಿದೆ ಎಂದು ವರದಿಗಳು ಬಂದಿವೆ ಈ ವಿಮಾನ ಅಪಘಾತದಲ್ಲಿ ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ ತಿಳಿಸಲಾಗಿದೆ ಈ ಘಟನೆ ಬೆಳಿಗ್ಗೆ ಸುಮಾರು 8:30 ನಡೆದಿದ್ದು ಸಧ್ಯ ಈ ಕುರಿತು ತನಿಖೆ ನಡೆಯುತ್ತಿದೆ ಮತ್ತು ಟ್ರಂಪ್ ಅವರ ವಿಮಾನವೂ ಬಹುಕಾಲದಿಂದ ನಿಂತಲ್ಲೇ ನಿಂತಿದೆ ಮತ್ತು ಅದರಲ್ಲಿ ಘಟನೆ ನಡೆದ ವೇಳೆ ಯಾವುದೇ ಸಿಬ್ಬಂದಿಗಳೀರಲ್ಲಿ ಎಂದು ದಿ ಟ್ರಂಪ್ ಆರ್ಗನೈಸೇಷನ್ ದೃಢಪಡಿಸಿದೆ.ಮತ್ತು ಡಿಕ್ಕಿ ಹೊಡೆದ ವಿಮಾನವು  ಲಾಂಗ್ ಐಲ್ಯಾಂಡ್ ನ ಇಸ್ಲಿಪ್ ನಿಂದ ಸುಮಾರು 18 ನಿಮಿಷಗಳ ವಿಮಾನಯಾನವನ್ನು ಮುಗಿಸಿಕೊಂಡು ಬಂದಿತ್ತು ಎಂದು ತಿಳಿಸಲಾಗಿದೆ .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link