ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ವಿ ಶಿವಕುಮಾರ್.ಅಧ್ಯಕ್ಷತೆಯಲ್ಲಿ ನಡೆಯಿತ್ತು. ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತುರ್ತಾಗಿ ಕೆಲಸ ಮಾಡಬೇಕು.ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ತಿಳಿಸಿದರು. 14ನೇ ಹಣಕಾಸಿನ ಕ್ರೀಯ ಯೋಜನೆ ಮಾಡಲಾಯಿತ್ತು. ನಮ್ಮ ಪಂಚಾಯಿತಿಯ ವ್ಯಾಪ್ತಿಯ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಾಗಾರಿಗಳನ್ನು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸುಧಾಮಣಿ, ಗ್ರಾಮ ಪಂಚಾಯಿತಿ ಪಿಡಿಓ ಸಿ.ನಾಗೇಂದ್ರ ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್, ಷಣ್ಮುಖರಾಧ್ಯ, ದೊಡ್ಡಕೆಂಪಯ್ಯ,ಲಕ್ಷ್ಮೀದೇವಮ್ಮ,ಪದ್ಮ,ಗಂಗಾಧರಯ್ಯ,ಸತೀಶ್,ಸಿದ್ದಗಂಗಯ್ಯ ಹಾಗೂ ಸಿಬ್ಬಂದಿಗಳಾದ ಬಸವರಾಜು,ಮಂಜು,ಗೋವಿಂದರಾಜು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
