ಅವಾಚ್ಯ ಪದಗಳಿಂದ ನಿಂದಿಸಿದ್ದಕ್ಕೆ ನೊಂದ ಮಹಿಳೆ ಪೊಲೀಸರಿಗೆ ದೂರು

ಬೆಂಗಳೂರು

        ವಾಹನ ನಿಲುಗಡೆಯಿಲ್ಲದ ಸ್ಥಳದಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ಮಹಿಳೆಯನ್ನು ದುಷ್ಕರ್ಮಿಗಳು ಅವಾಚ್ಯ ಪದಗಳಿಂದ ನಿಂದಿಸಿದ್ದು ನೊಂದ ಮಹಿಳೆ ತಲಘಟ್ಟಪುರ ಪೊಲೀಸರಿಗೆ ದೂರು ನೀಡಿದ್ದಾರೆ.

         ತಲಘಟ್ಟಪುರದ ಬಳಿ ಗುರುವಾರ ಸಂಜೆ ದುಷ್ಕರ್ಮಿಗಳು ವಾಹನ ನಿಲುಗಡೆಯಿಲ್ಲದ ಸ್ಥಳದಲ್ಲಿ ಕಾರು ನಿಲ್ಲಿಸಿದ್ದರು ಇದರಿಂದ ಸಂಚಾರಕ್ಕೆ ಅಲ್ಲದೇ ನಡೆದಾಡುಕೊಂಡು ಹೋಗಲು ತೊಂದರೆಯಾಗಿತ್ತು ಇದನ್ನು ಕಂಡ ಮಹಿಳೆಯೊಬ್ಬರು ಕಾರ್ ತೆಗೆಯುವಂತೆ ಹೇಳಿದ್ದಾರೆ ಇದರಿಂದ ಕೆರಳಿದ ದುಷ್ಕರ್ಮಿಗಳು ಮಹಿಳೆಗೆ ನಿಂದಿಸಿದ್ದಾರೆ.

        ಅಷ್ಟೇ ಅಲ್ಲದೇ, ಮಹಿಳೆಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ರೌಡಿಗಳ ಪುಂಡಾಟ ನೋಡಿ ತಕ್ಷಣವೇ ಮಹಿಳೆಯ ಸಹಾಯಕ್ಕೆ ಧಾವಿಸಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೌಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link