ಹಾವೇರಿ :
ಜಯಕರ್ನಾಟಕ ಸಂಘಟನೆ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, 63ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಹಬ್ಬ ಸಂಸ್ಕತಿಕ ಸಂಜೆ ಕಾರ್ಯಕ್ರಮ ಪ್ರತಿಭಾವಂತರ ಸುವರ್ಣ ವೇದಿಕೆಯಾಗಿದ್ದು,ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ನಗರದ ಹುಕ್ಕೇರಿಮಠದ ಸದಾಶಿವ ಮಾಹಾಸ್ವಾಮಿಗಳು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಕನ್ನಡ ಹಬ್ಬ ಸಂಸ್ಕತಿಕ ಸಂಜೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಸಂಘಟನೆ ಅಂದರೆ ಹೋರಾಟ ಮಾತ್ರ ಅಲ್ಲ. ಎಲ್ಲ ರಂಗದಲ್ಲಿಯೂ ವಿಶಿಷ್ಠವಾದ ಕಾರ್ಯಕ್ರಮಗಳನ್ನು ಮಾಡಿ, ಸಮಾಜಿಮುಖಿ ಕೆಲಸ ಮಾಡುವುದು ಈ ನಿಟ್ಟಿನಲ್ಲಿ ಜಿಲ್ಲಾ ಜಯ ಕರ್ನಾಟಕದ ಪದಾಧಿಕಾರಿಗಳು ಮುಂದಾಗಿದ್ದು, ಇನ್ನೂ ಸಂಘಟನೆ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಉದ್ಘಾಟಕರಾಗಿ ಆಗಮಿಸಿದ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಆರ್. ಚಂದ್ರಪ್ಪನವರ ಮಾತನಾಡಿ ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಯಾಗಬೇಕು ಹಾಗೆಯೇ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ಕೂಡಲೇ ನಿಲ್ಲಿಸಿ, ಕನ್ನಡ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕೆಂದು ಎಂದು ಆಗ್ರಹಿಸಿದರು.
ನೂತನ ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕರಾಗಿ ಆಯ್ಕೆಯಾದ ರಮೇಶ ಆನವಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ ಪ್ರಾರಂಭವಾಗಬೇಕು, ಸರ್ವಜ್ಞ ಪ್ರಾಧಿಕಾರ ಸ್ಥಾಪಿಸಬೇಕು. ಕನ್ನಡ ನಾಡು ನುಡಿ ಭಾಷೆಯ ಉಳಿವಿಗಾಗಿ ಜಯಕರ್ನಾಟಕದ ಪದಾಧಿಕಾರಿಗಳ ಸದಾಸಿದ್ದರಿರುತ್ತಾರೆ. ಹಾಗೂ ಜಿಲ್ಲೆ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಮತ್ತು ಮುಲ್ಲಾನಕೇರಿಯಲ್ಲಿ ವಾಸಿಸುವಂತಹವರಿಗೆ ಕೂಡಲೇ ಹಕ್ಕು ಪತ್ರ ವಿತರಣೆ ಮಾಡಬೇಕು.ಜನರ ಮೂಲಭೂತ ಸೌಲಭ್ಯಗಳಿಗಾಗಿ ಉಗ್ರವಾದ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ನಂತರ ಖ್ಯಾತ ಹಿನ್ನಲೆ ಗಾಯಕರಾದ ಮೆಹಬೂಬಸಾಬ, ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿಧರಿಂದ ಮತ್ತು ಮಾನವ ಕಂಪ್ಯೂಟರ್ ಬಸವರಾಜ ಉಂಬ್ರಾಣಿ ಹಾಗೂ ಸ್ಥಳಿಯ ಕಲಾವಿಧರಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವರು.ಮುಖ್ಯ ಅಥಿತಿಗಳಾಗಿ ಜಯಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಅಣ್ಣಪ್ಪ ಓಲೇಕಾರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಮಚಂದ್ರಯ್ಯ ಉಪಾಧ್ಯಕ್ಷರಾದ ಮುನಿಸ್ವಾಮಿ,ಶಾಸಕರಾದ ನೆಹರು ಓಲೇಕಾರ.ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ. ಜಿಲ್ಲಾಧ್ಯಕ್ಷರಾದ ರಾಮು ಯಳ್ಳೂರ, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕಾರ್ಯಾಧ್ಯಕ್ಷರಾದ ರಮೇಶ ಜಾಲಿಹಾಳ, ಗೌರವಾಧ್ಯಕ್ಷರಾದ ಟಿ.ಇ ಮೋಹನ, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಸದಾನಂದ ಶೆಟ್ಟಿ, ಉಪಾಧ್ಯಕ್ಷರಾದ ಸಂಜಯಗಾಂಧಿ ಸತೀಶ ಮಡಿವಾಳರ, ಎಸ್.ಸಿ.ಎಸ್.ಟಿ. ಘಟಕದ ಅಧ್ಯಕ್ಷರಾದ ಸುಭಾಸ ಬೆಂಗಳೂರ, ಶಿವರಾಜ ಪಾಟೀಲ. ಉಮೇಶ ವಾಘ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ