ವ್ಯಂಗ್ಯಚಿತ್ರಗಳಲ್ಲಿಯೂ ಕುಶಲತೆಯಿದೆ : ಇಂದ್ರಮ್ಮ ಹೆಚ್.ವಿ.

ಹೊಸಪೇಟೆ :

         ಲಲಿತಕಲಾ ಅಕಾಡೆಮಿಯಿಂದ ಕಿನ್ನಾಳ ಕಲೆ, ಡಿಜಿಟಲ್ ಕಾರ್ಯಾಗಾರ, ಈಗ ಕನ್ನಡ ವಿವಿಯಲ್ಲಿ ವ್ಯಂಗ್ಯಚಿತ್ರ ಕಾರ್ಯಾಗಾರವನ್ನು ಕರ್ನಾಟಕ ವಿವಿಧ ಜಿಲ್ಲಾವಾರು ಕಲಾಶಾಲೆಯ ಚಿತ್ರಕಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಕುಲಸಚಿವರಾದ ಶ್ರೀಮತಿ ಇಂದ್ರಮ್ಮ ಹೆಚ್.ವಿ. ಅವರು ತಿಳಿಸಿದರು. 

         ಕನ್ನಡ ವಿಶ್ವವಿದ್ಯಾಲಯ ಹಂಪಿ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ 30.11.2018 ರಿಂದ 1.12.2018ರ ವರೆಗೆ 2 ದಿನಗಳ ಕಾಲ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಏರ್ಪಡಿಸಿದ್ದ ವ್ಯಂಗ್ಯಚಿತ್ರ ಕಾರ್ಯಾಗಾರವನ್ನು ಇಂದ್ರಮ್ಮ ಹೆಚ್.ವಿ. ಅವರು ವ್ಯಂಗ್ಯಚಿತ್ರ ಬಿಡಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

         ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ವಿ.ಆರ್. ಅವರು ಮಾತನಾಡಿ, ಮೊದಲು ವ್ಯಂಗ್ಯಚಿತ್ರವನ್ನು ಹೇಳಿಕೊಡುವ ಶಾಲೆ ಇರಲಿಲ್ಲ. ಆರ್.ಕೆ.ಲಕ್ಷ್ಮಣ್, ಮೂರ್ತಿ, ಎಫ್.ಟಿ.ಆಚಾರ್ ಹೀಗೆ ಅನೇಕರು ಸ್ವತಂತ್ರವಾಗಿ ಕಲಿತಿದ್ದಾರೆ. 1977ರಲ್ಲಿ ವ್ಯಂಗ್ಯಚಿತ್ರ ಕಲಾವಿದರ ಸಂಘವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

          ದೃಶ್ಯಕಲಾ ವಿಭಾಗದ ಮುಖ್ಯಸ್ಥರು ಹಾಗೂ ಲಲಿತಕಲಾ ನಿಕಾಯದ ಡೀನರಾದ ಡಾ.ಅಶೋಕಕುಮಾರ ರಂಜೇರೆ ಅವರು ಪ್ರಾಸ್ತಾವಿಕ ಮಾತನಾಡಿ, ಒಂದು ದೀರ್ಘ ಲೇಖನ ಅಥವಾ ಇಡೀ ಒಂದು ಪುಸ್ತಕದ ಆಶಯಗಳನ್ನು ಒಂದು ವ್ಯಂಗ್ಯಚಿತ್ರದ ಮೂಲಕ ಕಲಾವಿದರು ಕಟ್ಟಿಕೊಡುತ್ತಾರೆ. ಅಭಿವ್ಯಕ್ತಿ ಮಾಧ್ಯಮಗಳಲ್ಲಿ ವ್ಯಂಗ್ಯಚಿತ್ರಕಲೆಯು ಒಂದು ಎಂದು ತಿಳಿಸಿದರು.

         ಅಧ್ಯಕ್ಷತೆ ವಹಿಸಿ ಕುಲಸಚಿವರಾದ ಡಾ.ಮಂಜುನಾಥ ಬೇವಿನಕಟ್ಟಿ ಅವರು ಮಾತನಾಡಿ, ಕನ್ನಡ ವಿಶ್ವವಿದ್ಯಾಲಯವು ಆರಂಭದಿಂದಲೂ ಚಿತ್ರಕಲೆ, ಶಿಲ್ಪಕಲೆ, ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದೆ. ಈಗ ವಿದ್ಯಾರ್ಥಿಗಳಿಗಾಗಿ ವ್ಯಂಗ್ಯಚಿತ್ರ ಕಾರ್ಯಾಗಾರವನ್ನು ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾದೆ ಎಂದರು.

           ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಗುಜ್ಜಾರಪ್ಪ ಬಿ.ಜಿ. ಬಾಬು ಜತ್ತಕರ್, ನಾಗನಾಥ್ ಜಿ.ಎಸ್. ಉಪಸ್ಥಿತರಿದ್ದರು. ದೃಶ್ಯಕಲಾ ವಿಭಾಗದ ಅಧ್ಯಾಪಕ ಡಾ.ಶಿವಾನಂದ ಬಂಟನೂರ ಸ್ವಾಗತಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕರು ಹಾಗೂ ಕಾರ್ಯಾಗಾರದ ಸಂಚಾಲಕರಾದ ಡಾ.ಮೋಹನರಾವ್ ಬಿ. ಪಂಚಾಳ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು, ಡಾ.ಡಿ.ಪಾಂಡುರಂಗಬಾಬು, ಡಾ.ಪಿ. ಮಹಾದೇವಯ್ಯ, ಡಾ.ಸಾಂಬಮೂರ್ತಿ, ಡಾ.ಶಿವಾನಂದ ವಿರಕ್ತಮಠ, ಡಾ.ಡಿ.ಮೀನಾಕ್ಷಿ, ಡಾ.ಎ.ವೆಂಕಟೇಶ, ಶ್ರೀ ಕೆ.ಕೆ. ಮಕಾಳಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link