ಬೆಂಗಳೂರು:

ತಾಯಿ, ತಂಗಿಗೆ ಹೆಚ್ಚು ಪ್ರಮಾಣದ ಇನ್ಸುಲಿನ್ ನೀಡಿ ವೈದ್ಯನೊಬ್ಬ ಸಾಯಿಸಿ, ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುನಿವೆಂಕಟಪ್ಪ ರಂಗ ಮಂದಿರ ಬಳಿ ನಡೆದಿದೆ.
ಡಾ. ಗೋವಿಂದಾ ಪ್ರಕಾಶ್ ಕೃತ್ಯ ಎಸಗಿದ ವೈದ್ಯ. ಡಯಾಬಿಟಿಸ್ ನ ಇನ್ಸುಲಿನ್ ಇಂಜೆಕ್ಷನ್ ನೀಡಿ, ತಾಯಿ ಮೂಕಾಂಬಿಕಾ (75) ಹಾಗೂ ತಂಗಿ ಶ್ಯಾಮಲಾ (40) ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಹತ್ಯೆ ಮಾಡಿದ್ದಾನೆ. ಇಬ್ಬರನ್ನು ಸಾಯಿಸಿದ ಬಳಿಕ ತಾನೂ ತಾನೂ ಇನ್ಸುಲಿನ್ ಚುಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.
ಪ್ರಕರಣ ಬೆಳಕಿಗೆ:
ವೈದ್ಯರ ತಂದೆ ಸುಬ್ಬರಾಯ ಭಟ್ ರವರು ಬೇರೆ ಕೊಠಡಿಯಲ್ಲಿ ಮಲಗಿದ್ದರು. ಇಂದು ಬೆಳಗ್ಗೆ ಎದ್ದು ನೋಡಿದಾಗ ಮೂಕಾಂಬಿಕ ಮತ್ತು ಶ್ಯಾಮಲಾ ಸಾವನ್ನಪ್ಪಿರುವುದು ಹಾಗೂ ಗೋವಿಂದ ಪ್ರಕಾಶ್ ನರಳುತ್ತಿದುದ್ದು ಗಮನಿಸಿ ತಕ್ಷಣ ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದಿದ್ದಾರೆ.
ಅಕ್ಕಪಕ್ಕದವರು ತಕ್ಷಣ ಗೋವಿಂದ ಪ್ರಸಾದ್ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಘಟನಾ ಸ್ಥಳದಲ್ಲಿ ಡೆತ್‍ನೋಟ್ ಪತ್ತೆಯಾಗಿದೆ. ಅದರಲ್ಲಿ ಅನಾರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹಾಗೂ ತಮ್ಮ ಆಸ್ತಿಯು ತಂದೆ ಸುಬ್ಬರಾಯ ಭಟ್ ಅವರಿಗೆ ಸೇರಬೇಕೆಂದು ಡೆತ್‍ನೋಟ್‍ನಲ್ಲಿ ತಿಳಿಸಲಾಗಿದೆ.
ಘಟನೆಗೆ ಕಾರಣ :

ತಾಯಿ ಬಿಪಿ ಮತ್ತು ಶುಗರ್ ನಿಂದ ಬಳಲುತ್ತಿದ್ದರು. ಇತ್ತ ತಂಗಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ ಗೋವಿಂದರಾಜುವನ್ನು ಕಾಡುತ್ತಿತ್ತು. ತಾನೋರ್ವ ವೈದ್ಯನಾಗಿದ್ದರೂ, ತಂಗಿಗೆ ಮದುವೆ ಮಾಡಲಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿದ್ದರಂತೆ. ಇತ್ತ ಪತ್ನಿಯನ್ನು ಕಳೆದುಕೊಂಡಿದ್ದ ಗೋವಿಂದರಾಜುವಿಗೆ ಮಕ್ಕಳಿರಲಿಲ್ಲ. ಆರ್.ಆರ್.ನಗರದಲ್ಲಿ ಆಸ್ಪತ್ರೆ ತೆರೆದು ಜೀವನ ನಡೆಸುತ್ತಿದ್ದರೂ, ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.
ಈ ಎಲ್ಲ ತೊಂದರೆಗಳಿಂದ ಬೇಸತ್ತ ಗೋವಿಂದರಾಜು ತಾಯಿ ಮತ್ತು ತಂಗಿಗೆ ಓವರ್ ಡೋಸ್ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ, ತಾನು ಅದೇ ರೀತಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಸದ್ಯ ಪ್ರಕಾಶ್ ಅಪಾಯದಿಂದ ಹೊರ ಬಂದಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ









