ಟಿಸಿಎಸ್ ಉದ್ಯೋಗಿ ನಾಪತ್ತೆ…

ಬೆಂಗಳೂರು

         ವಾಯುವಿಹಾರಕ್ಕೆ ಹೋಗುವುದಾಗಿ ಹೇಳಿ ಬನಶಂಕರಿಯ ಮನೆಯಿಂದ ಹೋಗಿದ್ದ ಟಿಸಿಎಸ್ ಕಂಪನಿಯ ಸಾಫ್ಟ್‍ವೇರ್ ಇಂಜಿನಿಯರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು ಪೊಲೀಸರು ಅವರ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

         ಖಾಸಗಿ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಸನ್ನ ರಾಮಚಂದ್ರ ಕಳೆದ ನ.9 ರಂದು ಮನೆಯಿಂದ ಹೊರಹೋಗಿದ್ದು ಇಲ್ಲಿಯವರೆಗೆ ಅವರು ಪತ್ತೆಯಾಗಿಲ್ಲ,ಅಲ್ಲದೇ ಅವರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

          ಪ್ರಸನ್ನ ರಾಮಚಂದ್ರ ಪತ್ನಿ ಮೊಬೈಲ್‍ಗೆ ಮೆಸೇಜ್ ಬಂದಿದ್ದು, ನಿಮ್ಮ ಯಜಮಾನರು ನಮ್ಮ ಬಳಿ ಇದ್ದಾರೆ. ಪೆಲೀಸರ ಬಳಿ ಹೋಗಬೇಡಿ ಎಂದಿದ್ದಾರೆ.

          ಈ ಕುರಿತು ಪ್ರಸನ್ನ ಪತ್ನಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆದರೆ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪ್ರಸನ್ನ ರಾಮಚಂದ್ರ ಮನೆಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.

           ಲಂಡನ್‍ನ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ಬಂದಿದ್ದ ಪ್ರಸನ್ನ 4 ವರ್ಷಗಳಿಂದಲೂ ನಗರದ ಟಿಸಿಎಸ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕಾಣೆಯಾಗಿರುವ ಅವರ ಮೊಬೈಲ್ ಕರೆಗಳ ಮಾಹಿತಿ ಆಧಾರದ ಮೇಲೆ ಬನಶಂಕರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link