ಬೆಂಗಳೂರಿನಲ್ಲಿ ಮಿತಿಮೀರಿದ ವಾಹನ ದಟ್ಟಣೆ

ಬೆಂಗಳೂರು

       ನಗರದಲ್ಲಿ ಸಂಚಾರ ದಟ್ಟಣೆ ಮಿತಿ ಮೀರುತ್ತಿದ್ದು ಬೆಳಗಿನ ಕಚೇರಿ ಸಮಯದ ವೇಳೆ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹಾಗು ಪಾದಚಾರಿಗಳಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ.

       ಸಂಚಾರ ದಟ್ಟಣೆ ಹೆಚ್ಚುತ್ತಿದ್ದಂತೆ ಬೈಕ್ ಸವಾರರು ಹಿಂದೆ ಮುಂದೆ ನೋಡದೇ ಪಾದಚಾರಿ ರಸ್ತೆ ಮೇಲೆ ಸವಾರಿ ಮಾಡಲು ಶುರು ಮಾಡಿದ್ದಾರೆ. ಕಠಿಣ ಕಾನೂನು ಇದ್ದರೂ ನಗರದಲ್ಲಿ ಪಾದಚಾರಿಗಳ ಹಾದಿಯಲ್ಲಿ ಬೈಕ್‍ಗಳು ಓಡಾಡುವುದು ಸಾಮಾನ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಲುನಗರದ ಸಂಚಾರಿ ಪೊಲಿಸರು ಪಣತೊಟ್ಟಿದ್ದರು, ಬೈಕ್ ಸವಾರರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಪಾದಚಾರಿ ಮಾರ್ಗ ಅನುಸರಿಸಿ ಗುರಿ ತಲುಪಲು ಮುಂದಾಗುತ್ತಾರೆ.

      ನಗರದಲ್ಲಿ 78 ಲಕ್ಷ ವಾಹನಗಳು ಸಂಚಾರ ಮಾಡುತ್ತಿದ್ದು, ಅದರಲ್ಲಿ 54.1 ಲಕ್ಷ ಬೈಕ್ ಸವಾರರು ಇದ್ದಾರೆ. ಬೆಳಿಗ್ಗೆ ಹೊತ್ತು ಪಿಕ್ ಹವರ್ಸ್‍ನಲ್ಲಿ ಗಂಟೆಗೆ 10ಕಿಮೀ ವೇಗದಲ್ಲಿ ರಸ್ತೆ ಮೇಲೆ ನುಗ್ಗುವ ಬೈಕ್ ಸವಾರರು ತೀವ್ರ ಸಂಚಾರ ದಟ್ಟಣೆ ಉಂಟಾದರೇ ಏಕಾಏಕಿ ಪಾದಚಾರಿ ರಸ್ತೆ ಮೇಲೆ ನುಗ್ಗುತ್ತಿದ್ದಾರೆ.

      2016ರಲ್ಲಿ 16,069 2017ರಲ್ಲಿ 18,889 ಹಾಗೂ 2018ರ ಅಕ್ಟೋಬರ್‍ವರೆಗೂ 23,059 ಬೈಕ್‍ಗಳು ಪಾದಚಾರಿ ರಸ್ತೆ ಮೇಲೆ ಸಂಚರಿಸಿರುವುದು ಪತ್ತೆಯಾಗಿದೆ ಇಂತಹ ಪ್ರಕರಣಗಳಿಗೆ 300 ರೂ ದಂಡ ವಿಧಿಸಲಾಗುತ್ತಿದೆ.

       ಕಾನೂನು ಗಾಳಿಗೆ ತೂರಿ ಪಾದಚಾರಿ ರಸ್ತೆ ಮೇಲೆ ಚಲಿಸುವವರ ವಿರುದ್ಧ ಪೋಲಿಸರು 2016ರಲ್ಲಿ 4 ಲಕ್ಷ ಹಾಗೂ 2017ರಲ್ಲಿ 4.6 ಲಕ್ಷ. 2018ರಲ್ಲಿ 3.4 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೂ ರಸ್ತೆಯಲ್ಲಿ ಉಂಟಾ ಮಾಡುವ ದಟ್ಟಣೆ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರ ಯಾವುದನ್ನು ಗಮನಿಸದೇ ಏಕಾಏಕಿ ಪುಟ್ಬಾತ್ ಮೇಲೆ ಚಲಾಯಿಸುತ್ತ್ತಾರೆ. ಇದನ್ನು ಹತ್ತಿಕ್ಕಲು ನಗರ ಪೊಲಿಸರು ಸಾಕಷ್ಟು ಕಾನೂನು ಜಾರಿಗೆ ತಂದರೂ ಬೈಕ್ ಸವಾರರು ಅದನ್ನು ಕಡೆಗಣಿಸಿದ್ದಾರೆ ಪಾದಚಾರಿಗಳಿಗೆ ಆತಂಕ ಉಂಟಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link