ಶ್ರೀನಗರ: 

ಪಿಒಕೆ ಪ್ರದೇಶದಲ್ಲಿರುವ ಭಾರತದ ಸರ್ವಜ್ಞ ಪೀಠವೆಂದೇ ಖ್ಯಾತವಾಗಿರುವಂತಹ ಶಾರದಾಪೀಠದ ಪವಿತ್ರ ಯಾತ್ರೆಗೆ ಯಾತ್ರಾರ್ಥಿಗಳಿಗೆ ಅವಕಾಶ ನೀಡಬೇಕು ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಪಾಕಿಸ್ತಾನ ಸರ್ಕಾರದೊಂದಿಗೆ ಚರ್ಚಿಸಿ ಶಾರದಾಪೀಠ ಯಾತ್ರೆಗೆ ಭಕ್ತಾದಿಗಳಿಗೆ ಅನುವು ಮಾಡಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ ಮುಫ್ತಿಯವರು, ಕರ್ತಾರ್ ಪುರ ಕಾರಿಡಾರ್ ಮಾದರಿಯಲ್ಲೇ ಶಾರದಾ ಪೀಠವನ್ನು ಪುನರುಜ್ಜೀವನಗೊಳಿಸಬೇಕು ಎಂದು ಅರಿಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಮುಫ್ತಿಯವರ ನಡೆ ರಾಜಕೀಯದಲ್ಲಿ ಹೊಸ ಉಹಾಪೊಹಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ವಿಷ್ಲೇಶಕರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








