ರಾಜ್ಯ ಸರ್ಕಾರದಿಂದ ಅವೈಜ್ಞಾನಿಕ ವರದಿ ಸಲ್ಲಿಕೆ

ಮಧುಗಿರಿ :

       ರಾಜ್ಯ ಸರ್ಕಾರವು ಕೇಂದ್ರ ಸರಕಾರಕ್ಕೆ ಬೆಳೆ ನಷ್ಟದ ಬಗ್ಗೆ ಕಳುಹಿಸಿರುವ ವರದಿಯು ಅವೈಜ್ಞಾನಿಕವಾಗಿದೆ ಎರಡು ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿರುವುದು ಸರಿಯಿಲ್ಲ ಎಂದು ಕುಡಿಯುವ ನೀರು ಮತ್ತು ನೈರ್ಮಲೀಕರಣ ಖಾತೆಯ ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಿಳಿಸಿದರು.

         ತಾಲ್ಲೂಕಿನ ಸಿದ್ದಾಪುರ, ಬೆಲ್ಲದಮಡುಗು ಹಾಗೂ ಕವಣದಾಲ ಗ್ರಾಮಗಳಲ್ಲಿ ರೈತರ ಜಮೀನಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಭೇಡಿ ಕೊಳ್ಳಬೇಕಾಗಿತ್ತು. ಆದರೆ ರಾಜ್ಯ ಸರಕಾರವು ಸರಿಯಾದ ಮಾಹಿತಿ ನೀಡಿಲ್ಲ ಬೆಳೆ ನಷ್ಟದ ಬಗ್ಗೆ ಬೇಡಿಕೆ ಇಟ್ಟಾಗ ಮಾತ್ರ ಹಣ ಬಿಡುಗಡೆ ಆಗುತ್ತದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಫಸಲ್ ಭೀಮಾ ಬೆಳೆ ಮಿಮೆ ಯೋಜನೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ವಾಣಿಜ್ಯ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಬಗ್ಗೆ ನಾನೊಬ್ಬನೇ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link