ಬಿಬಿಎಂಪಿ ಸದಸ್ಯ ವಿಧಿವಶ

ಬೆಂಗಳೂರು :   

      ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಏಳುಮಲೈ (40) ಬುಧವಾರ ತಡರಾತ್ರಿ 1.30ರ ವೇಳೆ ಮೃತಪಟ್ಟಿದ್ದಾರೆ.

      ಸಗಾಯಪುರಂ ವಾರ್ಡ್ 60 ರ ಸದಸ್ಯರಾಗಿದ್ದ ಏಳುಮಲೈ ಅನಾರೋಗ್ಯದ ಕಾರಣ ಕಳೆದ 20 ದಿನಗಳಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋಮಾ ಸ್ಥಿತಿ ತಲುಪಿದ್ದ ಅವರು ಮಧ್ಯರಾತ್ರಿ 1.30 ರ ವೇಳೆಗೆ ನಿಧನರಾಗಿದ್ದಾರೆ.

      ಪಕ್ಷೇತರ ಅಭ್ಯರ್ಥಿಯಾಗಿ ಸಗಾಯಪುರಂ ವಾರ್ಡ್ ನಿಂದ ಗೆಲುವು ಸಾಧಿಸಿದ್ದ ಏಳುಮಲೈ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಡಳಿತಕ್ಕೆ ಬೆಂಬಲ ನೀಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link