ಸಂವಿಧಾನ ವಿರೋಧಿಗಳ ವಿರುದ್ಧ ಹೋರಾಡೋಣ

ದಾವಣಗೆರೆ :

      ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ಹೋರಾಡುವ ಮೂಲಕ ನಮ್ಮ ಸಂವಿಧಾನವನ್ನು ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಕರೆ ನೀಡಿದರು.

       ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪಕ್ಷದ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

         ಡಾ.ಬಿ.ಆರ್.ಅಂಬೇಡ್ಕರ್ ಅವರು ಕೋಮುವಾದವನ್ನು ವಿರೋಧಿಸಿ, ಜಾತ್ಯಾತೀತತೆಯ ನೆಲೆಯಲ್ಲಿ ಬದುಕಿದ್ದರು. ಹೀಗಾಗಿ ಇಂದು ನಾವು ಸಹ ಕೋಮುವಾದಿಗಳ ವಿರುದ್ಧ ಹೋರಾಡುವ ಮೂಲಕ ಅಂಬೇಡ್ಕರ್ ಅವರ ಕನಸನ್ನು ಸಾಕಾರಗೊಳಿಸಬೇಕೆಂದು ಕಿವಿಮಾತು ಹೇಳಿದರು.

       ಇಂದು ಅಂಬೇಡ್ಕರ್‍ರನ್ನು ಕೇವಲ ಒಂದು ಜಾತಿಗೆ, ಕೋಮಿಗೆ ಸೀಮಿತಗೊಳಿಸುತ್ತಿರುವುದು ಸರಿಯಲ್ಲ. ಅಂಬೇಡ್ಕರ್ ಮೊದಲು ಧ್ವನಿ ಎತ್ತಿದ್ದು ಸ್ತ್ರೀ ಸ್ವಾತಂತ್ರ್ಯ, ದುಡಿಮೆಯ ಪ್ರಾಮುಖ್ಯತೆ, ಹಿಂದುಳಿದವರ ಸ್ವಾತಂತ್ರ್ಯ ನಂತರ ದಲಿತರ ಬಗ್ಗೆ ಚಿಂತಿಸಿದರು ಎಂದು ಸ್ಮರಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಿಕಲಚೇತನರ ಘಟಕದ ಅಧ್ಯಕ್ಷ ಯತಿರಾಜ್ ಎಸ್.ಮಠದ್, ಯುವರಾಜ್, ಆವರಗೆರೆ ಬಸವರಾಜ್, ಮಂಜು, ಜಗದೀಶ್ ಮತ್ತಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link