ಹಾವೇರಿ :
ಪ್ರತಿ ವರ್ಷ ಗಂಗಾಮತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕವಾಗಿ ಪುರಸ್ಕಾರ ನೀಡಲಾಗುತ್ತದೆ. ಇಂತಹ ಪುರಸ್ಕಾರ ಪಡೆದ ಸಮಾಜದ ವಿದ್ಯಾರ್ಥಿಗಳು ಇಂದು ಅನೇಕರು ಸರ್ಕಾರಿ ನೌಕರಿ ಹಾಗೂ ಉನ್ನತ ಸ್ಥಾನ ಪಡೆದಿರುವುದು ಹೆಮ್ಮೆಯಾಗಿದೆ ಎಂದು ಗಂಗಾಮತ ನೌಕರರ ಸಂಘದ ತಾಲೂಕಾಧ್ಯಕ್ಷ ಎಚ್ಎಂ ದಂಡಿನ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಗಂಗಾಮತ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದವರಾಗಿದ್ದು, ನೌಕರರು ನಾವೆಲ್ಲರೂ ಮೂದಲು ಶಿಕ್ಷಣಕ್ಕೆ ಮಹತ್ವ ನೀಡುವ ಉದ್ದೇಶದಿಂದ ಸಮಾಜದ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗಾಗಿ ಸಣ್ಣದೊಂದು ಪ್ರಯತ್ನ ಮಾಡಲಾಗುತ್ತಿದೆ. ಅದರಂತೆ ಈ ವರ್ಷ ಡಿ,09 ರಂದು ರವಿವಾರ ನಗರದ ಗುರುಭವನದಲ್ಲಿ ಬೆಳಿಗ್ಗೆ 10 ಘಂಟೆಗೆ ತಾಲೂಕ ಗಂಗಾಮತ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಗಂಗಾಮತಸ್ಥರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಹಾವೇರಿ ತಾಲೂಕ ಗಂಗಾಮತ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಸಮಾಜದ ಮಹಿಳೆಯರು ಸೇರಿದಂತೆ ಸಮಾಜದ ಬಾಂದವರು ಆಗಮಿಸಬೇಕೆಂದು ಕೋರಿದರು. ನೌಕರರ ಸಂಘದ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷರಾದ ಸಿಎಸ್ ಶೇಸಗಿರಿ ಮಾತನಾಡಿ ಗಂಗಾಮತ ಸಮಾಜದ ಮಕ್ಕಳ ಶೈಕ್ಷಣಿಕ ಸಹಯಕ್ಕಾಗಿ ನೌಕರರು ಬರುವ ವೇತನದಲ್ಲಿ ಉಳಿಸಿಕೊಂಡು ಪುರಸ್ಕಾರವನ್ನು 2004 ರಿಂದ ಪ್ರಾರಂಭ ಮಾಡಿ 684 ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಮಕ್ಕಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯ ಮಾಡು ಇಚ್ಚಾಶಕ್ತಿ ಇಟ್ಟುಕೊಂಡಿದ್ದೇವೆ. ಸರ್ಕಾರ ನಮ್ಮ ಸಮಾಜಕ್ಕೆ ಸಹಾಯ ನೀಡಬೇಕೆಂದು ಒತ್ತಾಯಿಸಿದರು.
ಎಲ್ಲ ಕ್ಷೇತ್ರಗಳಲ್ಲಿ ಸಮಾಜದ ಪ್ರಗತಿ ಹೊಂದಲು ಶಿಕ್ಷಣ ಹಾಗೂ ಜಾಗೃತಿ ಅವಶ್ಯಕವಾಗಿದೆ ಎಂದರು. ಈ ಸಂದರ್ಭದಲ್ಲಿ ಗಂಗಾಮತ ಸಂಘದ ಜಿಲ್ಲಾಧ್ಯಕ್ಷರಾದ ಮಂಜುನಾಥ ಭೋವಿ.ತಾಲೂಕ ಅಧ್ಯಕ್ಷ ಬಸವರಾಜ ಕಳಸೂರ.ಜಿಲ್ಲಾ ಮುಖಂಡರಾದ ರಾಜು ಕೊಲ್ಲೇರ.ಪ್ರಶಾಂತ ಬಾರ್ಕಿ.ಶಂಕರ ಸುತಾರ.ಬಿಎಂ ಸುಣಗಾರ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ