ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ

ಗುತ್ತಲ 

         ಮಾನವ ಅತಿಯಾದ ರೀತಿಯಲ್ಲಿ ಅಮೃತವನ್ನು ಸೇವಿಸಿದರೆ ಅದು ಹೇಗೆ ವಿಷವಾಗುತ್ತದೆಯೋ ಅದೇ ರೀತಿ ನಾವುಗಳು ನಮ್ಮ ಹೋಲಗಳಿಗೆ ಇಂದು ಅತೀಯಾದ ರೀತಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿದ್ದೇವೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹ್ಮದ್ ರಫಿಕ್ ಹೇಳಿದರು.

          ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ನಡೆದ ವಿಶ್ವ ಮಣ್ಣು ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ರೈತ ಕೃಷಿ ಭೂಮಿಯ ಫಲವತ್ತತೆಯನ್ನು ತಿಳಿದುಕೊಳ್ಳುವುದಕ್ಕೆ ಮಣ್ಣಿನ ಪರೀಕ್ಷೆಯನ್ನು ಮಾಡಿಸುವುದು ಅತಿ ಅವಶ್ಯವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ತಮ್ಮ ಕೃಷಿ ಭೂಮಿಗೆ ಬಳಕೆಮಾಡಿಕೊಂಡು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ರೈತರಿಗೆ ಮಣ್ಣಿನ ಫಲವತ್ತೆಯನ್ನು ಹೇಗೆ ಯಾವ ರೀತಿಯಾಗಿ ಕಾಪಾಡಿಕೊಳ್ಳಬೇಕು ಎನ್ನುವ ಒಂದು ಉದ್ದೇಶದಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ಈ ಒಂದು ವಿಶ್ವ ಮಣ್ಣು ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

        ಇದೇ ಸಂದರ್ಭದಲ್ಲಿ ಹನುಮನಮಟ್ಟಿ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿ ಡಾ|| ವೀರಣ್ಣ ಮಾತನಾಡಿ,ರೈತರು ತಾವು ಬೆಳೆಯುವಂತಹ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಗೊಬ್ಬರಗಳ ಅವಶ್ಯಕತೆ ಇದೆಯೋ ಅಷ್ಟೇ ಬಳಕೆ ಮಾಡಬೇಕು. ಮಣ್ಣಿನಲ್ಲಿರುವಂತಹ ಖನಿಂಜಾಶವನ್ನು ಉಳಿಸಿಕೊಳ್ಳಬೇಕು ಭೂಮಿಯಲ್ಲಿ ದ್ವಿದಳ ದಾನ್ಯಗಳನ್ನು ಬೆಳೆಯುವುದರಿಂದ ಕೃಷಿ ಭೂಮಿಯು ಫಲವತ್ತತೆಯಿಂದ ಕೂಡಿರುತ್ತದೆ ಎಂದರು. ಅಲ್ಲದೆ ಮಿಶ್ರತಳಿ ಕೃಷಿ ಹಾಗೂ ಸಾವಯುವ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಕೆಯನ್ನು ಹೆಚ್ಚಿಸಕೊಳ್ಳಬೇಕು ಎಂದರು.

          ಈ ಸಂದರ್ಭದಲ್ಲಿ : ಪಟ್ಟಣ ಪಂಚಾಯತಿಯ ಮಾಜಿ ಉಪಾಧ್ಯಕ್ಷ ನಾಗರಾಜ ಏರಿಮನಿ,ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗರಾಜ ನಾಯಕ,ಪ.ಪಂ.ಸದಸ್ಯ ಕೋಟೆಪ್ಪ ಬನ್ನಿಮಟ್ಟಿ, ಕೃಷಿ ಅಧಿಕಾರಿ ಆರ್.ಎಚ್.ಸಿದ್ಧಾಪುರ,ಎ.ಎಸ್.ತಳವಾಡ,ಮಲ್ಲಿಕಾರ್ಜುನ ಗುಮ್ಮಡಿ ಹಾಗೂ ಮುಖಂಡರಾದ ಶಿವಣ್ಣ ಬಂಡಿವಡ್ಡರ,ಮಹ್ಮದ್ ಹನೀಫ ರಿತ್ತಿ,ಸಂಜಯಗಾಂಧಿ ಸಂಜೀವಣ್ಣನವರ ಹಾಗೂ ರೈತ ಸಂಪರ್ಕ ಕೇಂದ್ರ ಸಿಬ್ಬಂದಿಗಳು ಹಾಗೂ ರೈತರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link