ಹಾನಗಲ್ಲ :
ಲೊಯೋಲ ವಿಕಾಸ ಕೇಂದ್ರ, ರೋಶನಿ ಸಮಾಜ ಸೇವಾ ಸಂಸ್ಥೆ, ತಾಲೂಕಾ ಆರೋಗ್ಯ ಇಲಾಖೆ, ತಾಲೂಕಾ ಕಾನೂನು ಸೇವಾ ಸಮಿತಿ, ಸರ್ಕಾರಿ ಪದವಿ ಪೂರ್ವ ಕಾಲೇಜ್, ಸ್ಪಂದನಾ ಮಹಿಳಾ ಒಕ್ಕೂಟ ಹಾಗೂ ಪ್ರಗತಿ ಲೊಯೋಲ ಮಹಿಳಾ ತಾಲೂಕಾ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ತಾಲೂಕಾ ಮಟ್ಟದ ಜಾಗೃತಿ ಜಾಥಾದ ಮೂಲಕ ಆಚರಿಸಲಾಯಿತು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಾರದಾದೇವಿ ಹಟ್ಟಿ ಜಾಥಾ ಉದ್ಘಾಟಿಸಿ ಮಾತನಾಡಿ, ನಿಸರ್ಗ ನಮ್ಮ ಮೇಲೆ ಅಥವಾ ನಾವು ನಿಸರ್ಗದ ಮೇಲೆ ಧಾಳಿ ಮಾಡಿದರೂ ತೊಂದರೆ ಉಂಟಾಗುವುದು ಮನುಷ್ಯನಿಗೆ. ತಂತ್ರಜ್ಘಾನ ಎಷ್ಟೇÀ ಮುಂದುವರೆದರೂ ಮನುಷ್ಯನ ಆರೋಗ್ಯವನ್ನು ಯಾರು ಸರಿಪಡಿಸಲಾರರು. ಮನುಷ್ಯ ಅರಿವಿನ ಪ್ರಾಣಿ, ಸಮಸ್ಯೆಗಳಿಗೆ ಪರಿಹಾರವನ್ನು ಅವರೇ ಕಂಡುಕೊಳ್ಳಬೇಕು. ಲೊಯೋಲ ಸಂಸ್ಥೆಯು ಜಾಗೃತಿಯ ಹಾಡುಗಳ ಮೂಲಕ ಒಳ್ಳೆಯ ಮನಮುಟ್ಟುವ ತಿಳುವಳಿಕೆಯನ್ನು ನೀಡಿದ್ದಾರೆ. ಮೊದಲು ನಾವು ಜಾಗೃತರಾಗಬೇಕು. ಏಡ್ಸ್ ರೋಗ ಬರುವುದಕ್ಕಿಂತ ಮೊದಲೇ ಪರೀಕ್ಷಿಸಿ ತಿಳಿಯಬೇಕು. ಹುಟ್ಟಿನಿಂದ
ವಯಸ್ಸಾಗುವವರೆಗೂ ಅವರವರ ಆರೋಗ್ಯದ ಬಗ್ಗೆ ಕಾಳಜಿ ಪ್ರತಿಯೊಬ್ಬರಿಗೂ ಇರಬೇಕು. ಎಚ್.ಆಯ್.ವಿ ಎಂಬ ವೈರಸ್ ದೇಹವನ್ನು ಪ್ರವೆಶಿಸಿದ ಕ್ಷಣ ಮನುಷ್ಯ ಸತ್ತು ಹೋಗುವುದಿಲ್ಲ. ಆದರೇ ಕಾಲಕ್ರಮೇಣವಾಗಿ ಮನುಷ್ಯನ ರೋಗ ನಿರೋಧಕ ಶಕ್ತಿ ಕುಂದಿ ಅನಾರೋಗ್ಯಕ್ಕೆ ತುತ್ತಾಗಿ ಮನುಷ್ಯ ಸತ್ತು ಹೋಗುತ್ತಾನೆ. ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಬೇರೆ ಬೇರೆ ರೋಗಗಳಿಗೆ ತುತ್ತಾಗಿ ನರಳುತ್ತಾರೆ. ಈ ರೋಗಕ್ಕೆ ತುತ್ತಾದವರನ್ನು ಕೀಳಾಗಿ, ತಪ್ಪುಕಲ್ಪನೆಗಳಿಂದ ಕಾಣಬಾರದು. ಅವರಿಗೂ ನಮ್ಮಂತೆ ಸಮಾನವಾಗಿ ಇರಲು ಆತ್ಮ ಸ್ಥೈರ್ಯ ತುಂಬಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.
ನ್ಯಾಯವದಿಗಳ ಸಂಘದ ಅಧ್ಯಕ್ಷ ಎಸ್.ಎಂ.ಕೋತಂಬರಿ ಮಾತನಾಡಿ, ಮನುಷ್ಯ ರೋಗ,ಚಿಂತೆ,ಬೆಂಕಿ ಈ ಮೂರು ವೈರಿಯನ್ನು ದೂರವಿಟ್ಟಾಗ ಉತ್ತಮ ಆರೋಗ್ಯದಿಂದ ಇರಲು ಸಾಧ್ಯ. ಇಂದಿನ ಯುವ ಜನತೆ ವಾಟ್ಸಾಪ್ ಫೆಸ್ಬುಕ್ ಇತ್ಯಾದಿಗಳಿಂದ ಹಾಳಾಗುತ್ತಿದ್ದಾರೆ. ಆರೋಗ್ಯ ಇಲಾಖೆ ಸುರಕ್ಷಿತ ಮಾರ್ಗಗಳ ಬಗ್ಗೆ ತಿಳುವಳಿಕೆ ನೀಡಬೇಕು ಮತ್ತು ವಿದ್ಯಾರ್ಥಿಗಳು ಒಳ್ಳೆಯ ಜ್ಷಾನ ಪಡೆದು ಉತ್ತಮ ವಿದ್ಯಾರ್ಥಿಗಳಾಗಬೇಕು ಎಂದರು.
ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ವೈ.ಎಸ್.ಹರೀಶ ಹಾಗೂ ಆಪ್ತ ಸಮಾಲೋಚಕ ಬಸವರಾಜ ಮ್ಯಾಕಲೋರ ಮಾತನಾಡಿ, ಏಡ್ಸ ರೋಗ ಹರಡುವ ಪ್ರಮುಖ ನಾಲ್ಕು ಹಂತಗಳ ಕುರಿತು ವಿವರಿಸಿದರು. ಏಡ್ಸ ರೋಗಕ್ಕೆ ತುತ್ತಾದವರು ಆಪ್ತ ಸಮಾಲೋಚನೆ ಮೂಲಕ ಸಲಹೆ ಹಾಗೂ ಚಿಕಿತ್ಸೆ ಪಡೆದು ಆರೋಗ್ಯವಂತರಾಬೇಕು ಎಂದು ಸಲಹೆ ಮಾಡಿದರು.
ಲೊಯೋಲ ವಿಕಾಸ ಕೇಂದ್ರ ಕಾಲೇಜುಗಳಲ್ಲಿ ಏಡ್ಸ ಕುರಿತು ಏರ್ಪಡಿಸಿದ ಪ್ರಬಂಧ ಸ್ಫರ್ದೆಯಲ್ಲಿ ವಿಜೇತರಾದ ಪೂಜಾ(ಪ್ರಥಮ), ರಕ್ಷಿತಾ ಕೊಲ್ಲಾಪುರ(ದ್ವಿತೀಯ), ಮಾಲತೇಶ(ತೃತೀಯ) ಹಾಗೂ ಸಂಕಲ್ಪ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾ.ಜೆರಾಲ್ಟ್ ವಹಿಸಿದ್ದರು. ತಾಲೂಕಾ ವೈದ್ಯಾಧಿಕಾರಿ ಡಾ|| ರವೀಂದ್ರಗೌಡ ಪಾಟೀಲ್, ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಡಿಂಪಲ್ ಡಿ’ಸೋಜಾ, ಸ್ಪಂದನಾ ಸಂಸ್ಥೆಯ ಬಸವರಾಜ, ಭಾರತಿ ಪೂಜಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀದೇವಿ ಸ್ವಾಗತಿಸಿದರು. ಎಚ್.ಎಸ್.ಬಾರ್ಕಿ ನಿರೂಪಿಸಿದರು. ಬಸವರಾಜ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ