ಹನುಮ ಮಾಲಾಧಾರಿಗಳಿಗೆ ಕೇಸರಿ ಧ್ವಜ ವಿತರಣೆ

ಹೊಸಪೇಟೆ:

        ಹನುವಮಾಲಾ7 ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಹನುಮ ಮಾಲಾಧಾರಿಗಳಿಗೆ ಶನಿವಾರ ಕೇಸರಿ ಧ್ವಜ ವಿತರಿಸಲಾಯಿತು. ಹನುಮ ಮಾಲಾಧಾರಿಗಳ ಕಾರ್ಯಕ್ರಮದ ತಾಲ್ಲೂಕು ಅಧ್ಯಕ್ಷ ಗುದ್ಲಿ ಪರಶುರಾಮ, ಭಕ್ತರಿಗೆ ಕೇಸರಿ ಧ್ವಜ ವಿತರಿಸಿ ಮಾತನಾಡಿ, ಡಿ.19ರಂದು ನಗರದಲ್ಲಿ ನಡೆಯಲಿರುವ ಹನುಮ ಮಾಲಾಧಾರಿಗಳ ಬೃಹತ್ ಶೋಭಯಾತ್ರೆ ಅಂಗವಾಗಿ ನಗರದ ಹನುಮ ಭಕ್ತರಿಗೆ ಕೇಸರಿ ಧ್ವಜ ವಿತರಣೆ ಮಾಡಲಾಗಿದೆ.

        ಶೋಭಯಾತ್ರೆಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳ ಹನುಮ ಮಾಲಾಧಾರಿಗಳು ಭಾಗವಹಿಸಲಿದ್ದು, ಇಲ್ಲಿಂದ ಹಂಪಿಯವರಗೆ ಪಾದಯಾತ್ರೆ ನಡೆಯಲಿದೆ. ವಿರೂಪಾಕ್ಷನ ದರ್ಶನ ಪಡೆದ ಅಲ್ಲಿಂದ ತುಂಗಭದ್ರಾ ನದಿ ದಾಟಿ ಪಕ್ಕದ ಆಂಜನಾದ್ರಿ ಬೆಟ್ಟಕ್ಕೆ ತೆರಳಿ, ಭಕ್ತರು ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಭಜನಾ ತಂಡ, ಕೋಲಾಟ, ಹಗಲು ವೇಷ, ರಾಮ-ಹನುಮ ವೇಷಧಾರಿಗಳು ಶೋಭಯಾತ್ರೆಯಲ್ಲಿ ಭಾಗವಹಿಸಲಿವೆ ಎಂದರು. ನಾಗರಾಜ, ಪ್ರವೀಣ್ ಪುರೋಹಿತ್, ಹನುಮಂತ, ಷಣ್ಮುಖ, ಗಣೇಶ, ತಿಪ್ಪೇಶ್ ನಾಯಕ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೂರಾರು ಕಾರ್ಯಕರ್ತರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link