ಕೊಟ್ಟೂರು
ವೀರಶೈವ ಲಿಂಗಾಯಿತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿ ಶಿಕ್ಷಣ, ಉದ್ಯೋಗ, ಆರ್ಥಿಕ ಕ್ಷೇತ್ರದಲ್ಲಿ ಶೇ.20 ಮೀಸಲಾತಿ ನೀಡಬೇಕೆಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದಿಂಡೂರು ಸಮಿಶ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣಲ್ಲಿ ಭಾನುವಾರ ಪಂಚಮಸಾಲಿ ಸಮಾಜದ ಮುಖಂಡ ದೇವರಮನಿ ಶಿವಚರಣ ಅವರ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾವು ಸಂವಿಧಾನಾತ್ಮಕ ಹಕ್ಕನ್ನು ಕೇಳುತ್ತಿದ್ದೇವೆ ಎಂದರು.
ರಾಜ್ಯದಲ್ಲಿರುವ ಸಮಿಶ್ರ ಸರ್ಕಾರ ವೀರಶೈವ ಲಿಂಗಾಯಿತರಿಗೆ ಮೂಗಿಗೆ ತುಪ್ಪ, ಗಲ್ಲಕ್ಕೆ ಬೆಣ್ಣೆ, ಗದ್ದಕ್ಕೆ ಮೋಸರು ಹಚ್ಚುತ್ತಿದ್ದಾರೆಯೇ ಹೊರತು ನಮ್ಮ ಯಾವ ಬೇಡಿಕೆಯನ್ನೂ ಈಡೇರಿಸುತ್ತಿಲ್ಲ ಎಂದರು.
ಹರಿಯಾಣ ಝಾಟರು, ಉತ್ತರ ಪ್ರದೇಶ ಪಾಟೇಲ್ ಸಮುದಾಯ ಉಗ್ರ ಹೋರಾಟ ಮಾಡಿ, ಸರ್ಕಾರಕ್ಕೆ ನಷ್ಟ ಮಾಡಿದರು. ಆದರೆ ನಮ್ಮದು ಅಂತಹ ಹೋರಾಟವಲ್ಲ. ನಮ್ಮದೇನಿದ್ದರೂ ಪೌರುಷದ ಹೋರಾಟವಲ್ಲ. ಒಲವಿನ ಅನುಸಂಧಾನದ ತೀಕ್ಷಿಣವಾದ ಬೇಡಿಕೆಯ ಹೋರಾಟ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನದಲ್ಲಿ ಮಾದರಿಯಲ್ಲಿ ರಾಜ್ಯದಲ್ಲಿ ವೀರಶೈವ ಲಿಂಗಾಯತರಿಗೆ ಶೇ.20 ಮೀಸಲಾತಿ ನೀಡಬೇಕು. ಬೆಳಗಾಂ ಅಧಿವೇಶನದಲ್ಲಿ ಈ ಕುರಿತು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರಿಗೆ ನೀಡುವುದಾಗಿ ಹೇಳಿದರು.
ಅದನ್ನು ಕಾಲಮೀತಿಯಲ್ಲಿ ಈಡೇರಿಸಬೇಕು. ಈಡೇರದಿದ್ದಲ್ಲಿ ಇನ್ನೂ ಒಂದು ತಿಂಗಳ ನಂತರ ನಮ್ಮ ಹೋರಾಟವನ್ನು ಬಹಿರಂಗ ಪಡಿಸುತ್ತೇವೆ. ಗಾಂಧೀಜಿಯವರು ಹೋರಾಟಕ್ಕಿಂತಲೂ ಭಿನ್ನವಾದ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಬಸವರಾಜ್ ದಿಂಡೂರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಬಿ. ನಾಗನಗೌಡ, ಸಂಘದ ಗೌರವ ಅಧ್ಯಕ್ಷ ಬಾವಿಬೆಟ್ಟಪ್ಪ, ಜಿಲ್ಲಾಧ್ಯಕ್ಷ ಬೊಪ್ಪಕಾನ್ ಕುಮಾರಸ್ವಾಮಿ, ದೇವರಮನಿ ಶಿವಚರಣ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
