ಹಾನಗಲ್ಲ :
ರಸ್ತೆಯ ಮೇಲೆ ಚಲಿಸುತ್ತಿದ್ದ ಕಬ್ಬಿನ ಲಾರಿಯೊಂದಕ್ಕೆ ವಿದ್ಯುತ್ ತಂತಿ ತಗುಲಿದ್ದರಿಂದ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಜಕ್ಕನಾಯಕನಕೊಪ್ಪ-ಆಡೂರ ಮಾರ್ಗದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಘಟನೆ ವಿವರ :
ಹಗರಿಬೊಮ್ಮನಹಳ್ಳಿಯ ತಾಳಿಬಸಾಪುರ ತಾಂಡಾದ ನಿವಾಸಿಯಾದ ಲಾರಿ ಚಾಲಕ ಶಿವಾನಾಯಕ ಲಮಾಣಿ(20) ಮೃತ ದುರ್ದೈವಿಯಾಗಿದ್ದಾನೆ. ಶನಿವಾರ ಮುಂಜಾನೆ ತಾಲೂಕಿನ ಜಕ್ಕನಾಯಕನಕೊಪ್ಪದ ರೈತರ ಕಬ್ಬನ್ನು ಲಾರಿಯಲ್ಲಿ ಸಂಗೂರು ಸಕ್ಕರೆ ಕಾರ್ಖಾನೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಜಕನಾಯಕನಕೊಪ್ಪ-ಆಡೂರ ಮಾರ್ಗ ಮಧ್ಯೆ ಹಾಕಿರುವ ವಿದ್ಯುತ್ ಮಾರ್ಗದ ತಂತಿ ಲಾರಿಗೆ ತಗುಲಿ ವಿದ್ಯುತ್ ಅವಘಡ ನಡೆದಿದೆ. ಗಂಬೀರವಾಗಿ ಗಾಯಗೊಂಡಿದ್ದ ಚಾಲಕ ಶಿವಾನಾಯಕ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯರು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮದ್ಯ ಮೃತಪಟ್ಟಿದ್ದಾನೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ