ನೂರು ಕೋಟಿ ರೂ.ಗಳ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಲಾಗುವುದು :ಎಸ್.ಭೀಮಾನಾಯ್ಕ್

ಹಗರಿಬೊಮ್ಮನಹಳ್ಳಿ  
 
       ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಮದುವೆಗೆ ತಗಲುವಂತ ದುಂದುವೆಚ್ಚ ನಿಯಂತ್ರಿಸಬೇಕಾಗಿದೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು.
          ಅವರು, ತಾಲೂಕಿನ ಹಂಪಾಪಟ್ಟಣ ಗ್ರಾಮದ ಜನಸೇವಾ ಟ್ರಸ್ಟ್‍ನಿಂದ ಭಾನುವಾರ 22ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಟಣಗಳಲ್ಲಿ ಸಾಮೂಹಿಕ ವಿವಾಹಗಳು ಜರುಗುವುದು ದೊಡ್ಡ ಮಾತಲ್ಲ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಪ್ರತಿವರ್ಷ ಸಾಮೂಹಿಕ ವಿವಾಹ ಮಹೋತ್ಸವಗಳು ಜರುವುಗುವದು, ಅವುಗಳ ನಿರ್ವಹಣೆ ಬರಿಸುವುದು ಆಯೋಜಕರ ಶ್ರಮ ಎಂದರು.
        ಸಮಾರಂಭದ ರುವಾರಿಯಾದ ಬುಡ್ಡಿ ಬಸವರಾಜ್ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹಗಳನ್ನು ಮಾಡುತ್ತ ಸಾಮಾನ್ಯ ಜನರಿಗೆ ಹತ್ತಿರವಾಗುತಿದ್ದಾರೆ. ಇದರೊಂದಿಗೆ ಸಮಾಜ ಸೇವೆ ಗೈಗೊಂಡಿದ್ದಾರೆ. ಆದ್ದರಿಂದ ಮುಂದಿನ ವರ್ಷದಿಂದ ಇಲ್ಲಿ ಎಷ್ಟೇ ಸಾಮೂಹಿಕ ವಿವಾಹಗಳಾದರೂ ವಧುವರರಿಗೆ ಮಾಂಗಲ್ಯಗಳನ್ನು ಸ್ವಂತ ಹಣದಿಂದ ನಾನೇ ಕೊಡುತ್ತೇನೆ ಎಂದರು. 
ನೂರು ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕಿನ 10ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈಗಾಗಲೇ ಸಿದ್ಧವಾಗುತ್ತಿದೆ, ಅದೇ ರೀತಿ ಮಾಲವಿ ಜಲಾಶಯದ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಈ ಬಾರಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುವುದೆಂದರು.
         ಸಮಾಜ ಸೇವಕ ಕುರಿ ಶಿವಮೂರ್ತಿ ಮಾತನಾಡಿ, ಸರಳ ಸಾಮೂಹಿಕ ವಿವಾಹಗಳು ಬಡವರ ಪಾಲಿನ ಆಶಾಕಿರಣಗಳು. ಮದುವೆಯ ನಂತರ ಆಗುವಂತ ಸಾಲಸೂಲಗಳಲ್ಲಿ ಜೀವನ ನಿರ್ವಹಣೆ ಅಸಾಧ್ಯ. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಗಳು ಉತ್ತಮ ಜೀವನಕ್ಕೆ ನಾಂದಿಯಾಗಿವೆ ಎಂದರು. 
        ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಹಾಲವೀರಪ್ಪಜ್ಜ ಮಾತನಾಡಿ, ಸಮಾಜ ಸುಧಾರಣೆ ಮಾಡುವಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯ. ಸತತ 22ವರ್ಷ ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
         ಕಡಲಬಾಳು ಶಾಖಾ ಗವಿ ಮಠದ ಸೋಮಶಂಕರ ದೇವರು ಮಾತನಾಡಿ, ಅದ್ಧೂರಿಯಾಗಿ ಖರ್ಚುಮಾಡಿ ಮದುವೆಯಾಗುವುದು ಮುಖ್ಯವಲ್ಲ. ಅದರಂತೆ ಜೀವನ ಶೈಲಿಯನ್ನು ಸರಳವಾಗಿ ನಡೆಸಿಕೊಂಡು ಹೋಗಿ ಎಂದು ನೂತನ ದಂಪತಿಗಳಿಗೆ ಕಿವಿಮಾತು ಹೇಳಿದರು. 
       ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬುಡ್ಡಿ ಬಸವರಾಜ್ ಪ್ರಸ್ತಾವಿಕವಾಗಿ ಮಾತನಾಡಿ, ಇಂದು ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದರೂ ಗ್ರಾಮದವರ ಸಹಕಾರ ಮತ್ತು ನಮ್ಮ ಆತ್ಮೀಯರ ಬಲ, ಪ್ರೋತ್ಸಹಗಳು ನನಗೆ ಉತ್ಸಹ ತಂದಿದೆ ಪತ್ರಿಕೆಯೊಂದಿಗೆ ಬೆಳದ ನಾನು ಇಂತಹ ಕಾರ್ಯಕ್ರಮಗಳು ಸಾಮಾನ್ಯ ಜನರೊಂದಿಗೆ ಬೆರೆಯಲು ಪೂರಕವಾಗಿವೆ ಎಂದರು.
        ಕಾರ್ಯಕ್ರಮ ವೇದಿಕೆಯಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಇನಾಯತ್‍ರವರಿಗೆ ಸನ್ಮಾನ ಮಾಡಲಾಯಿತು.ಸಮಾಜ ಸೇವಕಿ ಗೀತಾ ಭೀಮಾನಾಯ್ಕ್, ತಾ.ಪಂ.ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಕೊಚಾಲಿ ಸುಶೀಲಮ್ಮ, ಸದಸ್ಯರಾದ ಅನಿಲ್ ಕುಮಾರ್ ಜಾಣರ್, ಶ್ಯಾಮಲಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ, ಮುಖಂಡರಾದ ಹೆಗ್ಡಾಳ್ ರಾಮಣ್ಣ, ಉಪ್ಪಾರ್ ಕಾಳಪ್ಪ, ಎ.ನಾಗರಾಜ್, ಅಶೋಕ, ಗ್ರಾಮದ ಪುರೋಹಿತ ಜೆ.ಮಧುಸೂಧನ, ತಹಸೀಲ್ದಾರ್ ವಿಜಯಕುಮಾರ್, ಸಿ.ಡಿ.ಪಿಒ ಚನ್ನಪ್ಪ ಹಾಗೂ ಗ್ರಾ.ಪಂ.ಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link