ರಾಮನಗರ:
ಗೃಹಿಣಿಯನ್ನು ಪ್ರೀತಿಸಿ ಆಕೆಯೊಂದಿಗೆ ಪುತ್ರ ಮನೆ ಬಿಟ್ಟು ಹೋಗಿದ್ದಕ್ಕೆ ಯುವಕನ ಪಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲ್ಲಿಗೌಡನದೊಡ್ಡಿಯಲ್ಲಿ ಘಟನೆ ನಡೆದಿದ್ದು, ಸಿದ್ದರಾಜು (52), ಸಾಕಮ್ಮ(42) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಗ ಮನು ಓಡಿಹೋದ ಯುವಕ.
ಇರುವುದು ಒಬ್ಬನೇ ಮಗ ಒಳ್ಳೆಯ ಕಡೆಗೆ ಸಂಬಂಧ ನೋಡಿ ಬೇಗ ಮದುವೆ ಮಾಡಬೇಕು ಎನ್ನುವಷ್ಟರಲ್ಲಿ ಹೆತ್ತವರ ಆಸೆಗೆ ತಣ್ಣೀರೆರೆಚಿ ಮಗ ಅದೇ ಗ್ರಾಮದ ಪಲ್ಲವಿ ಎಂಬ ಗೃಹಿಣಿ ಜೊತೆಗೆ ಓಡಿ ಹೋಗಿದ್ದಕ್ಕೆ ಇಡೀ ಕುಟುಂಬ ತಲೆ ತಗ್ಗಿಸುವಂತಾಗಿದೆ. ಗೃಹಿಣಿ ಸಂಬಂಧಿಕರು ಯುವಕನ ಮನೆಮುಂದೆ ಗಲಾಟೆ ಮಾಡಿದ ನಂತರ ಮನನೊಂದ ಪಾಲಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ