ವಚನ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತ – ಹಿ.ಮ.ಬಸವರಾಜ್.

ಕೊಟ್ಟೂರು :

        ವಚನ ಸಾಹಿತ್ಯವು ಸರ್ವ ಕಾಲಕ್ಕೂ ಪ್ರಸ್ತುತವಾಗಿದ್ದು, ಶಿವಶರಣರು ಕಾಯಕಕ್ಕೆ, ಸಮಾನತೆಗೆ ಹೆಚ್ಚು ಮಹತ್ವ ನೀಡಿದ್ದರು ಎಂದು ಲೇಖಕರಾದ ಹಿ.ಮ.ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

         ಪಟ್ಟಣಕ್ಕೆ ಸಮೀಪದ ನಾಗರಕಟ್ಟೆ ಗ್ರಾಮದ ಶಿವಸಾಲಿ ವೀರಭದ್ರಪ್ಪ ಸಾವಜ್ಜಿ ಬಸವನಗೌಡ ಪ್ರೌಢಶಾಲೆಯಲ್ಲಿ ಕ.ಸಾ.ಪ ತಾಲ್ಲೂಕು ಘಟಕವು ಗುರುವಾರ ಏರ್ಪಡಿಸಿದ್ದ ಡಾ. ಸಿದ್ದನಗೌಡ್ರು ಶ್ರೀಮತಿ ಹನಮಂತಮ್ಮ ದತ್ತಿ ಹಾಗೂ ಸಂಗಮೇಶ್ವರದ ಶ್ರೀಮತಿ ಸಿದ್ದಮ್ಮ, ಎಸ್.ನಿಂಗಪ್ಪ ದತ್ತಿ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ವಚನಗಳು ಹಾಗೂ ವಚನಕಾರರನ್ನು ಅರ್ಥೈಸಿಕೊಳ್ಳುವುದರಿಂದ ಬದುಕಿನ ಮೌಲ್ಯಗಳನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.
ಉಪನ್ಯಾಸಕಿ ಸಿ.ಎಂ.ಸಿಂಧು ಗಿರೀಶ್ ‘ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ವಚನ ಸಾಹಿತ್ಯವು ಅಥ್ವಿತೀಯ ಸಾಹಿತ್ಯವಾಗಿದ್ದು, ಇವುಗಳು ಇಡೀ ವಿಶ್ವಕ್ಕೆ ದಾರಿ ದೀಪವಾಗಿವೆ ಎಂದರಲ್ಲದೇ ಸಮಾಜದಲ್ಲಿರುವ ಓರೆ ಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.

            ಸಮಾರಂಭ ಉದ್ಘಾಟಿಸಿದ ಸಂಸ್ಧೆಯ ಕಾರ್ಯದರ್ಶಿ ಸಾವಜ್ಜಿ ಮಂಜುನಾಥಗೌಡ್ರು ಮಾತನಾಡಿ, ವಚನಗಳು ಸರಳ ಪದಗಳಿಂದ ಕೂಡಿದ್ದು, ಸಾಮಾನ್ಯ ಜನರಿಗೂ ಅರ್ಥವಾಗುವಂತಿದ್ದು, ಉತ್ತಮ ಸಂದೇಶಗಳನ್ನು ಸಾರುವಲ್ಲಿ ವಚನಗಳ ಪಾತ್ರ ಹಿರಿದಾಗಿದೆ ಎಂದರು.

           ಸಮಾರಂಭದ ಅಧ್ಯಕ್ಷತೆಯನ್ನು ಕ.ಸಾ.ಪ ತಾಲ್ಲೂಕು ಘಟಕಾಧ್ಯಕ್ಷ ಎಸ್.ಎಂ.ಗುರುಪ್ರಸಾದ್ ವಹಿಸಿದ್ದರು. ಈ ಸಂದರ್ಭದಲ್ಲಿ ಕ.ಸಾ.ಪ ಕೋಶಾಧ್ಯಕ್ಷ ಜೆ.ಎಂ.ರೇವಣಾರಾಧ್ಯ, ಸಂಘಟನಾ ಕಾರ್ಯದರ್ಶಿ ಬಿ.ಎಂ.ಗಿರೀಶ್ ಹಾಗೂ ಶಿಕ್ಷಕರಾದ ಎಚ್.ಉಮಾ, ಸಿ.ಚನ್ನನಗೌಡ, ಎಸ್.ಸುಭಾಸ್, ಜೆ.ಬಿ.ಕರಿಯಪ್ಪ, ಬಿ.ಜಿ.ಪ್ರವೀಣ್, ದೊಡ್ಡಬಸವನಗೌಡ, ಪಿ.ಎಂ.ಬಸವರಾಜ್ ಉಪಸ್ಧಿತರಿದ್ದರು.
ರಕ್ಷಿತಾ ಹಾಗೂ ಭಾವನಾ ಪ್ರಾರ್ಥಿಸಿದರು, ಎಸ್.ಲತಾ ಸ್ವಾಗತಿಸಿದರು, ಜೆ.ಎಂರೇವಣಾರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಎಸ್.ಲಕ್ಷ್ಮಿ ವಂದಿಸಿದರು, ಪಿ.ಎಂ.ಬಸವರಾಜ್ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link