ಹಾವೇರಿ
ಜಿಲ್ಲಾ ಜೈವಿಕಇಂಧನ ಸಂಶೋಧನ ಮಾಹಿತಿ ಮತ್ತು ಪ್ರಾತ್ಯಕ್ಷೀಕೆಕೇಂದ್ರ, ಕೃಷಿ ಮಹಾವಿದ್ಯಾಲಯ ಹನುಮನಮಟ್ಟಿ ಮತ್ತು ಮುಂದಾಳು ಸ್ವಯಂ ಸೇವಾ ಸಂಸ್ಥೆ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ರಾಣೇಬೆನ್ನೂರಇವರ ಸಂಯುಕ್ತಆರ್ಶಯದಲ್ಲಿಇಂದು ಬೆಳಿಗ್ಗೆ 11.00 ಘಂಟೆಗೆಶ್ರೀ ಹೊನ್ನಮ್ಮದೇವಿ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹೊನ್ನತ್ತಿಯಲ್ಲಿ ಜೈವಿಕ ಇಂದನ ಮಾಹಿತಿ ಮತ್ತು ಪ್ರಾತ್ಯಕ್ಷೀಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಂದಾಳು ಸ್ವಯಂ ಸೇವಾ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಶ್ರೀ ತಿಪ್ಪೇಶ ಎ ಕನ್ನಮ್ಮನವರ ಮಾತನಾಡುತ್ತಾ ಜೈವಿಕ ಇಂದನ ಎಂದರೇ? ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಮೂಲಗಳಿಂದ ಉತ್ಪಾದಿಸುವ ಇಂದನಕ್ಕೆ ಜೈವಿಕ ಇಂದನ ಎಂದು ಕರೆಯುವರು. ಹಾಗೂ ಸಾವಯವ ಪದಾರ್ಥಗಳನ್ನು ನಿರ್ವಾತ ಪ್ರದೇಶದಲ್ಲಿ ಕಳಿಯುವಿಕೆಗೆ ಒಳಪಡಿಸಿದಾಗ ಮಿಥೆನ್ ಅನಿಲ ಬಿಡುಗಡೆಯಾಗುತ್ತದೆ ಇದನ್ನು ಜೈವಿಕ ಅನಿಲವಾಗಿ ಉಪಯೋಗಿಸಬಹುದು. ಇಂದಿನ ದಿನಮಾನಗಳಲ್ಲಿ ಪೇಟ್ರೋಲಿಯಂನ ಉಪಯೋಗದಿಂದ ಪರಿಸರ ಮಾಲಿನ್ಯ ಭೂ-ತಾಪಮಾನ , ಮಣ್ಣು ಮತ್ತು ನೀರು ಕಲುಷಿತವಾಗುವುದು ಹಾಗೂ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹೊರೆಯಾಗುವುದು ಎಂದು ತಿಳಿಸಿದರು.
ಜೈವಿಕ ಇಂದನ ಮಾಹಿತಿ ಮತ್ತು ಪ್ರಾತ್ಯಕ್ಷೀತೆ ಕೇಂದ್ರ ಕೃಷಿ ಮಹಾವಿದ್ಯಾಲಯ ಹನುಮನ ಮಟ್ಟಯೋಜನಾ ಸಹಾಯಕರಾದ ಶ್ರೀ ಅಶೋಕ ದ್ಯಾಮನಗೌಡ್ರ ಮಾತನಾಡುತ್ತಾ ಜೈವಿಕ ಇಂದನವು ಪರಿಸರ ಸ್ನೇಹಿಗೆ ಉತ್ತಮ ಉದಾಹರಣೆಯಾಗಿದೆ. ಹಾಗೂ ಕೃಷಿಗೆ ಪೂರಕವಾದ ಮತ್ತು ಲಾಭದಾಯಕವಾದ ಉದ್ದೀಮೆ ಎಂದು ತಿಳಿದಿದ್ದು ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲ್ಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಈ ಘಟಕವನ್ನು ಪ್ರಾರಂಭಿಸಿದ್ದು ಹೊಂಗೆಯ ಸಿಪ್ಪೆಯನ್ನು ತೆಗೆಯುವ ಯಂತ್ರ ಹಾಗೂ ಬೀಜತೆಗೆದು ಎಣ್ಣೆತೆಗೆಯುವ ಯಂತ್ರ ಮತ್ತು ಎಣ್ಣೆ ಸಂಸ್ಕರಿಸಿ ಜೈವಿಕ ಡಿಸೇಲ್ ಉತ್ಪಾದಿಸುವ ಘಟಕ ಹೀಗೆ ವಿವಿಧ ಯಂತ್ರೊಪಕರಣಗಳನ್ನು ವಿಕ್ಷಿಸಬಹುದಾಗಿದೆ .
ಡಿಸೇಲ್ ಮತ್ತು ಅದರ ತಯಾರಿಕೆಯಲ್ಲಿ ಬರುವ ಉಪ ಉತ್ಪನ್ನಗಳಾದ ಹಿಂಡಿ, ಗ್ಲೀಸರೀನ್‍ಗಳ ಉಪಯೋಗ ಮತ್ತು ಅವುಗಳ ಮಾರಾಟಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಈ ಕೇಂದ್ರದಲ್ಲಿ ದೊರೆಯಲಾಗಿದೆ . ಈ ಕೇಂದ್ರದಲ್ಲಿ ದಿನಕ್ಕೆ 100 ಲಿಟರ್‍ಜೈವಿಕಡಿಸೇಲ್ ತಯಾರಿಸುವ ಸಾಮಥ್ರ್ಯ ಹೊಂದಿದೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರುಶ್ರೀ ಎನ್ ಪಿ ಮಾಚೇನಹಳ್ಳಿ, ಪ್ರಾಚಾರ್ಯರಾದ ಶ್ರೀ ಡಿ ಕೆ ಕೊಟ್ಟದ, ಶ್ರೀ ಐ ಬಸವರಾಜಪ್ಪ ಮತ್ತು ಶಿಕ್ಷಕವೃಂದ ಹಾಗೂ 93 ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ