ಬೆಂಗಳೂರು
ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರವಾಗಿ ನಡೆದ ಜಗಳದಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಯುವಕನನ್ನು ನಗರದ ಹೊರವಲಯದ ಕುಂಬಳಗೂಡು ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬೆಲೆಯ ಚಂದ್ರಬಾಬು(25) ಕೊಲೆಯಾದವರು,ಕೊಲೆಯಾದ ಚಂದ್ರಬಾಬು ಸ್ನೇಹಿತ ರಂಜಿತ್ ಜೊತೆ ಗುರುವಾರ ತಡರಾತ್ರಿಯವರೆಗೆ ಮದ್ಯಪಾನ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗಿ ರಂಜಿತ್ ತನ್ನ ಸ್ನೇಹಿತ ಚಂದ್ರಬಾಬುವಿಗೆ ಚಾಕುವಿನಿಂದ ಇರಿದಿದ್ದು ತೀವ್ರವಾಗಿ ರಕ್ತಸ್ರಾವವಾಗಿ ಚಂದ್ರಬಾಬು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಂಬಳಗೂಡು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿ ರಂಜಿತ್‍ನನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಕಾಮುಕ ಜೈಲಿಗೆ
ಗಾಂಜಾ ಮತ್ತಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಟ್ಟೆ ಎಳೆಯಲು ಹಾಡಹಗಲೇ ಯತ್ನಿಸಿದ ಕಾಮುಕನೊಬ್ಬ ಹೆಣ್ಣೂರು ಪೆಲೀಸರ ಅತಿಥಿಯಾಗಿದ್ದಾನೆ.
ಕಲ್ಯಾಣನಗರಯ ಚಲ್ಲಕೆರೆ ಬಳಿ ಕಳೆದ ಡಿ.8 ರಂದು ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬದಿಯಿಂದ ಬಂದು ಕೈ ಹಿಡಿದ ಕಾಮುಕ ಆಕೆಯ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ.ಆತನಿಂದ ಬಿಡಿಸಿಕೊಂಡು ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಅದನ್ನು ಕೇಳಿ ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ನಿವಾಸಿಗಳು ಕಾಮುಕನನ್ನು ಹಿಡಿದು ಸರಿಯಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೆಲೀಸರು ವಿಚಾರಣೆ ಮಾಡುವ ವೇಳೆ ಗಾಂಜಾ ಮತ್ತಿನಲ್ಲಿದ್ದ ಆರೋಪಿಯು ಯಲಹಂಕದ ಅಲುಮೀನ್ ಎಂದು ಗೊತ್ತಾಗಿದೆ. ಗಾಂಜಾ ಸೇವನೆಗಾಗಿ ಹೆಣ್ಣೂರು ಕಡೆ ಬಂದಿದ್ದ ಆರೋಪಿ ಹೆಣ್ಣೂರು ಬಳಿಯ ವಿದೇಶಿ ಪ್ರಜೆಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ