ಮಕ್ಕಳ ಹಬ್ಬ

ಹಾವೇರಿ :

        ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಮತ್ತು ತಾಲ್ಲೂಕಾ ಘಟಕ, ಮಹಿಳಾ ಮತ್ತು ಮಕ್ಕಾಳಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ (ದಿ,15,16) ಮಕ್ಕಳ ಹಬ್ಬ ನಗರದ ಹಿರಿಯ ಪ್ರಾಥಮಿಕ 2 ನೇ ನಂಬರ್ ಶಾಲೆಯಲ್ಲಿ ಪ್ರಾರಂಭವಾಯಿತು.

        ಮಹಿಳಾ ಮತ್ತು ಮಕ್ಕಾಳಾಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪಿ. ವಾಯ್ ಶೆಟ್ಪಪ್ಪನವರ ಸಸಿಗೆ ನೀರು ಹಾಕುವ ಮೂಲಕಲ ಉದ್ಘಾಟಿಸಿದರು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಹುಟ್ಟಿಸುತ್ತ, ಅದರ ಅನೇಕ ಆವಿಷ್ಕಾರಗಳನ್ನು ತಿಳಿಪಡಿಸುವುದೇ ಮಕ್ಕಳ ಹಬ್ಬದ ಉದ್ದೇಶವಾಗಿದೆ. ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನವು ಅವಿಭಾಜ್ಯ ಅಂಗವಾಗಿದ್ದು,ಅದರ ಸದುಪಯೋಗವಾಗಬೇಕೆಂದರು.
ವಿಜ್ಞಾನ ಇಲ್ಲದೆ ಜಗತ್ತಿನಲ್ಲಿ ಏನೂ ಇಲ್ಲ, ಸಮಯಕ್ಕೆ ಮತ್ತು ವಯಸ್ಸಿಗೆ ಯುವ ಜನಾಂಗ ಬೆಲೆ ಕೊಡಬೇಕು. ಆಧುನಿಕ ಜಗತ್ತಿನಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡವನೇ ಸಾಧಕನಾಗಬಲ್ಲ. ಯಾವಾಗಲೂ ನಮ್ಮೆದರು ಒಳ್ಳೆಯ ಮತ್ತು ಕೆಟ್ಟದೆಂಬ ಎರಡು ದಾರಿಗಳಿರುತ್ತವೆ. ಒಳ್ಳೆಯ ದಾರಿಯನ್ನು ತೋರಿಸುವ ಮಕ್ಕಳ ಹಬ್ಬದ ಗುರಿಯಾಗಿದೆ ಎಂದು ಶೆಟ್ಟಪ್ಪನವರ ಹೇಳಿದರು.

        ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರಾದ ಬಿ ಬಸವರಾಜ ವಹಿಸಿ ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಮಕ್ಕಳನ್ನು ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದಕಡೆಗೆ ಕರೆದೊಯ್ಯುವುದೇ ಕಾರ್ಯಾಗಾರದ ಸಂದೇಶವಾಗಿದೆ ಎಂದರು.

         ವೇದಿಕೆಯಲ್ಲಿ ಹಿರಿಯ ಲೇಖಕರಾದ ಸತೀಶ ಕುಲಕರ್ಣಿ, ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರಭಾವತಿ ಕೊಪ್ಪದ, ಎಂ ಎಸ್ ಜಂಗರೆಡ್ಡೆರ, ಸುರೇಶ ಬುಗಟಿ, ಎಂ ಎಸ್ ಯತ್ನಳ್ಳಿ, ಶ್ರೀಮತಿ ವ್ಹಿ ಎಸ್ ಪಾಟೀಲ, ಎಚ್ ಎಸ್ ಹಿರೇಮಠ, ಕೆ ಎಸ್ ಶಿವಸಿಂಪಿ, ಅಕ್ಕಮಹಾದೇವಿ ಎಸ್ ಹಿರೇಮo, ರವೀಂದ್ರ ಮಳಗಿ, ಅಶೋಕ ಯಣ್ಣಿಯವರ. ಎಂ ಜಿ ಹಿರೇಮಠ ಮತ್ತು ಎಸ್ ಆರ್ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

        ಆರಂಭದಲ್ಲಿ ಬಾಲಕಿಯರ ಬಾಲಭವನದ ಆರ್ ಈಶ್ವರಿ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ರಾಜ್ಯ ಸಮಿತಿ ಸದಸ್ಯೆ ಶ್ರೀಮತಿ ರೇಣುಕಾ ಗುಡಿಮನಿ ಸ್ವಾಗತಿಸಿದರು. ತಾಲ್ಲೂಕಾ ಅಧ್ಯಕ್ಷರಾದ ಮಾಲತೇಶ ಕರ್ಜಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕರಾದ ಸೋಮನಗೌಡ ಗಾಳಿಗೌಡರ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಜಿ. ಎಂ ಓಂಕಾರಣ್ಣನವರ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link