ಹಗರಿಬೊಮ್ಮನಹಳ್ಳಿ
ಡಿಸೆಂಬರ್ 22 ಮತ್ತು 23 ರಂದು ಪಟ್ಟಣದಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಆಯೋಜಿಸಲಾಗಿರುವ ಜಿಲ್ಲಾ ಕೃಷಿ ಸಮಾವೇಶಕ್ಕೆ ಆಗಮಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಡೆಯವರನ್ನು ಸರ್ವ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರೆಲ್ಲ ಸೇರಿ ಅದ್ದೂರಿಯಾಗಿ ಸ್ವಾಗತಮಾಡಿಕೊಳ್ಳಬೇಕೆಂದು ಶಾಸಕ ಎಸ್.ಭೀಮಾನಾಯ್ಕ ಮನವಿ ಮಾಡಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಛೇರಿಯಲ್ಲಿ ಕರೆಯಲಾಗಿದ್ದ ಸರ್ವ ಸಮಾಜದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಡಿಸೆಂಬರ್ 22 ಮತ್ತು 23 ಕ್ಷೇತ್ರದ ಇತಿಹಾಸದಲ್ಲಿ ಸವುರ್ಣಾಕ್ಷರದಲ್ಲಿ ಬರೆದಿಡಬಹುದಾದಂತ ದಿನಗಳಾಗಲಿವೆ ಏಕೆಂದರೆ ಕಲಿಯುಗದ ನ್ಯಾಯದೇವತೆ ಎಂದೇ ಹೆಸರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿಯಾದ ವೀರೇಂದ್ರ ಹೆಗ್ಡೆಯವರು ಹಗರಿಬೊಮ್ಮನಹಳ್ಳಿಗೆ ಆಗಮಿಸುತ್ತಿರುವುದು ನಮ್ಮೆಲ್ಲರ ಪುಣ್ಯವೇಸರಿ ಇಡೀ ಜಿಲ್ಲೆಯಲ್ಲಿ ನನ್ನ ಕ್ಷೇತ್ರಕ್ಕೆ ಅವರು ಆಗಮಿಸಿ ಆಶೀರ್ವದಿಸುತ್ತಿರುವುದು ಸುಕೃತದ ಫಲವಾಗಿದೆ.
ಇಲ್ಲಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿರುವ ಈ ಜಿಲ್ಲಾ ಕೃಷಿ ಉತ್ಸವವನ್ನು ನಾವೆಲ್ಲರೂ ಸೇರಿ ಯಶಸ್ವಿ ಗೊಳಿಸಬೇಕಿದೆ ಆದ್ದರಿಂದ ಇಲ್ಲಿ ಸೇರಿರುವ ಸರ್ವ ಸಮಾಜದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ತಮ್ಮ ತಮ್ಮ ಸಮುದಾಯದ ಬಾಂಧವರೊಂದಿಗೆ ಒಡಗೂಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ನಿಮ್ಮ ಸಮುದಾಯದ ವತಿಯಿಂದ ಈ ಕೃಷಿ ಉತ್ಸವಕ್ಕೆ ಸ್ವಾಗತ ಕೋರುವ ಫ್ಲಕ್ಸ್‍ಗಳನ್ನು ಹಾಕಿಕೊಳ್ಳಬೇಕು ಎಂದು ಎಲ್ಲರಲ್ಲಿ ಮನವಿ ಮಾಡಿದರು.
ಸರ್ವ ಸಮಾಜದ ಸಂಚಾಲಕ ಡಿಶ್ ಮಂಜುನಾಥ ಮಾತನಾಡಿ ಎರಡು ದಿನಗಳಕಾಲ ಅದ್ದೂರಿಯಾಗಿ ನಡೆಯುವ ಜಿಲ್ಲಾ ಕೃಷಿ ಉತ್ಸವಕ್ಕೆ ಸರ್ವ ಸಮಾಜಗಳವತಿಯಿಂದಲೂ ಪಾಲ್ಗೊಳ್ಳುವಿಕೆಯ ಕೊಡುಗೆ ಇರುತ್ತದೆ. ಆದಿನ ಧರ್ಮಸ್ಥಳದ ಧರ್ಮಾದಿಕಾರಿಯಾದ ಪದ್ಮವಿಭೂಷಣ, ರಾಜರ್ಷಿ, ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಆಗಮಿಸುವುದರಿಂದ ವಿಶೇಷ ಬಿಗಿಬಂದೋಬಸ್ತ ಆಯೋಜಿಸಲಾಗಿದೆ. ಆದ್ದರಿಂದ ಎಲ್ಲಾ ಸಮಾಜದ ಅಧ್ಯಕ್ಷರ ಪರವಾಗಿ ಸರ್ವ ಸಮಾಜಗಳ ವಯಿತಿಂದ ಪೂಜ್ಯರಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ ಎಲ್ಲರೂ ಬನ್ನಿ ತುಂಬು ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂಜೀವ್ ಮಾತನಡಿ ಈ ಕೃಷಿ ಉತ್ಸವದಲ್ಲಿ 200ಕ್ಕೂ ಹೆಚ್ಚು ಸ್ಟಾಲ್‍ಗಳು, ಎಲ್ಲಾ ಇಲಾಖಾವಾರು ಕೃಷಿಕರಿಗೆ ಬೇಕಾಗುವ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಜೊತೆಗೆ ಕೃಷಿ ಸಾಧಕರಿಂದ ಕೃಷಿ ಸಂವಾದ ಇರುತ್ತದೆ. ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸ್ಥಳೀಯ ಶಾಲೆಗಳು, ಮಂಗಳೂರು ಕಲಾತಂಡ, ಜಿ.ಟಿವಿ ಸರಿಗಮಪ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ.
ಡಿ.22 ರಂದು ಬೆಳಗ್ಗೆ 8.30ಕ್ಕೆ ಧರ್ಮಸ್ಥಳದ ಧರ್ಮಾದಿಕಾರಿಗಳಾದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಶ್ರೀ ಬಸವೇಶ್ವರ ಬಜಾರ್‍ನ ಪುತ್ಥಳಿಯ ಬಳಿಯಿಂದ ತೆರೆದ ಅಲಂಕೃತ ವಾಹನದಲ್ಲಿ ವಾದ್ಯ ಮೇಳಗಳೊಂದಿಗೆ ಇಲಾಖಾವಾರು ಸ್ಥಬ್ದ ಚಿತ್ರಗಳೊಂದಿಗೆ, ಡೊಳ್ಳು, ನಂದಿಕೋಲು, ಅಗಲವೇಶಗಾರರು, ಕೋಲಾಟ, ಸ್ಕೌಟ್ಸ್, ಶಾಲಾಮಕ್ಕಳ ಘೋಷ್ಟ್ ಹಾಗೂ ಕೃಷಿ ಸಚಿವ ಶಿವಶಂಕರರೆಡ್ಡಿ ಹಾಗೂ ಸ್ಥಳೀಯ ಶಾಸಕ ಎಸ್.ಭೀಮಾನಾಯ್ಕ ಮತ್ತು ಜನಪ್ರತಿನಿಧಿಗಳು ಹಾಗೂ ಊರಿನ ಪ್ರಮುಖರು ಮೆರವಣಿಗೆಯೊಂದಿಗೆ ಶ್ರೀ ಬಸವೇಶ್ವರ ಬಜಾರ್‍ನ ಮುಖಾಂತರ ಕೃಷಿ ಉತ್ಸವದ ಕಾಲೇಜಿನ ಮೈದಾನ್ಕಕೆ ಆಗಮಿಸುತ್ತಾರೆ. ಎಲ್ಲರು ಬನ್ನಿ ಭಾಗವಹಿಸಿ, ಯಶಸ್ವಿಗೊಳಿಸಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಹೆಗ್ಡಾಳ್ ರಾಮಣ್ಣ, ಮುಟುಗನಹಳ್ಳಿ ಕೊಟ್ರೇಶ್, ಚಂದ್ರಯ್ಯ, ನೆಲ್ ಇಸ್ಮಾಯಿಲ್, ಅನಿಲ್‍ಕುಮಾರ್ ಜಾಣಾ, ಜಿ.ಲಕ್ಷ್ಮಪತಿ, ಚಿಂತ್ರಪಳ್ಳಿ ದೇವೇಂದ್ರ, ಬಾರಿಕರ ಬಾಪೂಜಿ, ಬಾಲಕೃಷ್ಣಬಾಬು, ಕೆ.ಗಿರಿರಾಜ್, ಪವಾಡಿ ಹನುಮಂತಪ್ಪ, ಜಿಂದಿಸಾಹೇಬ್, ಜೋಗಿ ಹನುಮಂತಪ್ಪ, ಬುಡ್ಡಿ ಬಸವರಾಜ, ಹಂಚಿನಮನಿ ಹನುಮಂತಪ್ಪ, ಪಾದ್ರಿ ಆನಂದ ಹಾಗೂ ಸರ್ವ ಸಮಾಜದ ಅಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ