ಕುಣಿಗಲ್
ಕರಾವಳಿ ಮಲೆನಾಡು ಸಾಂಸ್ಕೃತಿಕ ಕಲೆಯನ್ನ ನಗರದಲ್ಲಿ ಪರಿಚಯಿಸುವ ಕ್ರಮ ಹೆಮ್ಮೆ ತರುವಂತಹದ್ದಾಗಿದೆ ಎಂದು ಕಿರುಚಿತ್ರ ನಟ ರಂಗಭೂಮಿ ಕಲಾವಿದರಾದ ಹುಲಿವಾನ ಗಂಗಾಧರಯ್ಯ ತಿಳಿಸಿದರು.
ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಬಯಲು ರಂಗಮಂದಿರದಲ್ಲಿ ಕರಾವಳಿ ಮಲೆನಾಡು ಮಿತ್ರಕೂಟ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಧುರ ಮಹೇಂದ್ರ ಅಥವಾ ಶ್ರೀ ಕೃಷ್ಣ ಬಾಲಲೀಲೆ ಮತ್ತು ಕಂಸವಧೆ ಎಂಬ ಕಥಾ ಭಾಗವನ್ನ ಯಕ್ಷಗಾನ ರೂಪದಲ್ಲಿ ಶ್ರೀ ಕಟೀಲ ದುರ್ಗ ಪರಮೇಶ್ವರಿ ಬಾಲ ಕಲಾವಿದರು ನಡೆಸಿದ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡುತ್ತಾ, ಕುಣಿಗಲ್ ನಗರವೂ ಸಾಂಸ್ಕøತಿಕ, ಸಾಹಿತ್ಯ ನೆಲೆ ಬೀಡಾಗಿದ್ದು ಕಲಾವಿದರನ್ನ ಪರಿಚಯಿಸುವ ನಾಡಾಗಿ ಬೆಳೆಯುತ್ತಿದೆ. ಕರಾವಳಿ ಮಲೆನಾಡು ಮಿತ್ರಕೂಟವೂ ಈ ಭಾಗದಲ್ಲಿ ಯಕ್ಷಗಾನ ರೂಪದಲ್ಲಿ ಬಾಲ ಕಲಾವಿದರಿಂದ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯಾಗಿದ್ದು, ಇನ್ನು ಇಂತಹ ಹೆಚ್ಚು-ಹೆಚ್ಚು ಕಾರ್ಯಕ್ರಮಗಳನ್ನ ಆಯೋಜಿಸಬೇಕೆಂದರು.
ಕರಾವಳಿ ಮಲೆನಾಡು ಮಿತ್ರಕೂಟದ ಅಧ್ಯಕ್ಷರಾದ ಹೆಚ್.ಪಿ.ಜನಾರ್ಧನ ನಾಯಕ್ ಮಾತನಾಡಿ, ಕನ್ನಡಿಗರ ಹೆಮ್ಮೆಯ ಯಕ್ಷಗಾನವನ್ನ ಬಾಲ ಕಲಾವಿದರಿಂದ ಕಾರ್ಯಕ್ರಮವನ್ನ ಆಯೋಜಿಸಿದ್ದು, ಇಲ್ಲಿನ ವಾತಾವರಣ ಸಾಂಸ್ಕೃತಿಕ ನೆಲೆ, ಸಾಂಸ್ಕೃತಿಕ ಸಿದ್ದಾಂತ, ವಿಶಾಲತೆ ಕಲಾಭಿಮಾನವನ್ನ ಪ್ರೋತ್ಸಾಹಿಸುವಂತಹ ವಾತಾವರಣವನ್ನ ಈ ಊರಿನಲ್ಲಿ ನೆಲೆಸಿರುವುದರಿಂದ ಸಂಘವೂ ಇಂತಹ ಕಾರ್ಯಕ್ರಮಗಳನ್ನ ಜನರ ಪ್ರೇರಣೆಯಿಂದ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನ ನಡೆಸಲಾಗುವುದು ಎಂದರು.ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ರಂಗಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ದಿನೇಶ್ಕುಮಾರ್,ಪತ್ರಕರ್ತ ಗುರುಚರಣ್ಸಿಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
