ಹಾವೇರಿ
ಭ್ರಷ್ಟಾಚಾರ ರಹಿತ ನಾಡಕಟ್ಟಲು ಯುವ ಜನತೆ ಮುಂದಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಅವರು ಹೇಳಿದರು.
ಮಂಗಳವಾರ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಯುವ ಸಂಸತ್ ಪ್ರಸಕ್ತ ರಾಜಕೀಯದ ಮೇಲೆ ಬೆಳಕು ಚೆಲ್ಲುವ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವ ವೇದಿಕೆಯಾಗಬೇಕು ಎಂದು ಹೇಳಿದರು.
ಯುವ ಸಂಸತ್ ಕಾರ್ಯಕ್ರಮ ಆಯೋಜನೆಯಿಂದ ಜನಪ್ರತಿನಿಧಿಗಳು ಸಮಾಜದಲ್ಲಿ ಮತ್ತು ಸದನದಲ್ಲಿ ಹೇಗೆ ವರ್ತಿಸಬೇಕು ಹಾಗೂ ಅವರ ಕರ್ತವ್ಯಗಳು ಏನು ಎನ್ನುವ ಬಗೆಗೆ ಯುವ ಜನರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮವಾಗಿದೆ. ಒಂದೊಮ್ಮೆ ನೀವು ಜನಪ್ರತಿನಿಧಿಗಲಾಗಿ ಆಯ್ಕೆಯಾದಲ್ಲಿ ಜನರೊಂದಿಗೆ ಹಾಗೂ ಸಂಸತ್ತಿನ ಹೊರ ಒಳಗೆ ಹೇಗೆ ನಡೆದುಕೊಳ್ಳಬೇಕು ಎಂಬ ಮಾದರಿಯನ್ನು ಈ ಕಾರ್ಯಕ್ರಮ ನಿಮಗಗೆ ತಿಳುವಳಿಕೆ ನೀಡುತ್ತದೆ ಎಂದು ಹೇಳಿದರು.
ಎಸ್.ಜಿ.ಕೋಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಣೂರ ಬಿಇಒ ಸುಧಾಕರ ಎನ್.ಎಸ್., ಆರ್.ಎಂ.ಎಸ್.ಎ. ಶ್ರೀಮತಿ ಸುನಿತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್.ಅಡಿಗ, ವಿಜ್ಞಾನ ಪರೀವಿಕ್ಷಕ ಎಸ್.ಐ.ಮೂಡಲದವರ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಮಂಜಪ್ಪ ಆರ್., ಈರಪ್ಪ ಲಮಾಣಿ, ಮುನ್ಸಿಪಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶೋಭಾ ಜಾಗಟಘೇರಿ, ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ, ವಿಜಯಲಕ್ಷ್ಮೀ ಕಮ್ಮಾರ, ವಿ.ಡಿ.ಹಿತ್ತಲಮನಿ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಯುವ ಸಂಸತ್ -ಚಳಿಗಾಲದ ಅಧಿವೇಶನ: ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಂದ ಆಗಮಿಸಿದ ಮಕ್ಕಳು ಯುವ ಸಂಸದರಾಗಿ ಮಾದರಿ ಕಲಾಪವನ್ನು ನಡೆಸಿದರು.
ಸ್ಪೀಕರ್, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಹಾಗೂ ಕಲಾಪಗಳ ಅಜೆಂಡಾದೊಂದಿಗೆ ಯಾವ ರೀತಿ ಕಲಾಪ ಆರಂಭವಾಗುತ್ತದೆ, ಅದರ ನಿಯಮಾವಳಿ ಏನು, ಸಭಾಧ್ಯಕ್ಷರ ನಡಾವಳಿ, ವಿರೋಧ ಮತ್ತು ಆಡಳಿತ ಪಕ್ಷದ ನಾಯಕರು ಹಾಗೂ ಸದಸ್ಯರು, ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು.
ವಿವಿಧ ಸಾಮಾಜಿಕ ಸಮಸ್ಯೆಗಳು ಆಡಳಿತರೂಢ ಪಕ್ಷದ ಕಾರ್ಯಕ್ರಮಗಳ ಕುರಿತಂತೆ ಟೀಕೆ, ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ ಹೀಗೆ ಸಂಸತ್ತಿನಲ್ಲಿ ನಡೆಯುವ ವಿವಿಧ ನಡಾವಳಿಯ ಕುರಿತಂತೆ ರೂಪಕದ ಮೂಲಕ ವಿದ್ಯಾರ್ಥಿಗಳಿಗೆ ಕಲಾಪಗಳ ಪರಿಚಯ ಮಾಡಿಕೊಡಲಾಯಿತು. ಇದರಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನುರಿತ ರಾಜಕಾರಣಿಗಳಂತೆ ಅಭಿನಯಿಸಿ ಎಲ್ಲರ ಗಮನ ಸೆಳೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








