ಸಾಲುಗಟ್ಟಿ ದೇವರ ದರ್ಶನ ಪಡೆದ ಭಕ್ತರು

ಚಿತ್ರದುರ್ಗ;

         ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಮಂಗಳವಾರದಂದು ಚಿತ್ರದುರ್ಗದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ಭಕ್ತರು ಸಾಲುಗಟ್ಟಿ ದೇವರ ದರ್ಶನ ಪಡೆದರು.

           ವೈಕುಂಠ ಏಕಾದಶಿಯ ಪ್ರಯುಕ್ತ ನಗರದ ಬಹುತೇಕ ದೇವಾಲಯಗಳಲ್ಲಿ ರಾತ್ರಿಇಡೀ ಪೂಜೆಗಳು ಜರುಗಿವೆ. ಮಂಗಳವಾರ ಮುಂಜಾನೆಯಿಂದಲೇ ಭಕ್ತರಿಗೆ ವೈಕುಂಠ ದ್ವಾರ ಪ್ರವೇಶ ಮಾಡಿ ದೇವರ ದರುಶನ ಪಡೆಯುವ ಅವಕಾಶ ಲಭ್ಯವಾಗಿದೆ

           ವೈಕುಂಠ ಏಕಾದಶಿಯು ಪ್ರತಿ ವರ್ಷದ ಸಡಗರ, ಭಕ್ತರು ಎಲ್ಲೋ ಇರುವ ದೇವರನ್ನು ಹುಡುಕಿಕೊಂಡು ಬಂದು ನಮ್ಮೊಂದಿಗೇ ಇದ್ದಾನೆ ಎನ್ನುವ ಭಾವವನ್ನು ವ್ಯಕ್ತಪಡಿಸುತ್ತಾರೆ.ದೇಗುಲದ ವೈಕುಂಠ ದ್ವಾರದಲ್ಲಿ ನಿಂತು ಭಕ್ತರು ಮೋಕ್ಷಕ್ಕಾಗಿ ಪ್ರಾರ್ಥಿಸುವುದು. ಸ್ವಾಮಿಯ ಅಲಂಕಾರವನ್ನು ನೋಡುವುದೇ ಚಂದವಾಗಿತ್ತು.

          ಇದರಲ್ಲಿ ಎರಡು ಪದಗಳು ಸೇರಿಕೊಂಡಿದೆ, ಒಂದು ವೈಕುಂಠ ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂದು ಹೆಸರು ಬರಲು ಕಾರಣ ಚಾಕ್ಷುಷ ಮನ್ವಂತರದಲ್ಲಿ ವಿಷ್ಣುವು ವಿಕುಂಠ ಎಂಬ ಸ್ತ್ರೀ ಯಲ್ಲಿ ಅವತರಿಸಿದನು.ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂದಿದೆ ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ವಿಷ್ಣು ಸಹಸ್ರನಾಮದಲ್ಲೂ ವೈಕುಂಠ ಎಂಬ ಹೆಸರಿನ ಉಲ್ಲೇಖವಾಗಿದೆ.

          ನಗರದ ಆನೆಬಾಗಿಲ ಬಳಿಯ ಶ್ರೀ ಶ್ರೀನಿವಾಸ ದೇವಸ್ಥಾನದವತಿಯಿಂದ ವೈಕುಂಠ ಏಕಾದಶಿ ಆಚರಣೆ ನಡೆಸಲಾಯಿತು. ದೇವಾಲಯದ ಆವರಣದಲ್ಲಿ ಮುಜಾನೆಯಿಂದ ರಾತ್ರಿವರೆಗೂ ವಿಶೇಷ ಪೂಜೆ ನಡೆಯಲಿದೆ. ಭಕ್ತರಿಗೆ ವೈಕುಂಠ ದ್ವಾರ ಪ್ರವೇಶ ವ್ಯವಸ್ಥೆ ಮಾಡಲಾಗಿತು. ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ, ಆರಾಧನೆ, ವೈಕುಂಠದ್ವಾರ ಪೂಜೆ, ಮಹಾ ಮಂಗಳಾರತಿ ನಡೆಯಿತು. ಸ್ವಾಮಿಗೆ ಪಂಚಾಮೃತಾಭಿಷೇಕ ಹಾಗೂ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು.

         ನಗರದ ಕಾನ್ವೆಂಟ್ ಬಳಿ ಮತ್ತು ಗೋನೂರು ರಸ್ತೆಯಲ್ಲಿನ ವೆಂಕಟೆರಮಣ ಸ್ವಾಮಿ ದೇವಾಲಯದಲ್ಲಿಯೂ ಸಹಾ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಅಲಂಕಾರವನ್ನು ನಡೆಸಲಾಗಿತ್ತು.

         ದುಡ್ಡಿನ ದೇವರು ಎಂದೇ ಖ್ಯಾತಿಯನ್ನು ಹೊಂದಿರುವ ಕಂಚಿಪುರದ ವರದರಾಜ ಸ್ವಾಮಿಗೆ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಅಲಂಕಾರ ಹಾಗೂ ಪೂಜೆಯನ್ನ ಬೆಳಗಿನ ಜಾವದಿಂನದಲೇ ನೆರವೇರಿಸಲಾಯಿತು.

         ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಂಚಿಪುರದಲ್ಲಿರುವ ಕಂಚೀವರದರಾಜ ಸ್ವಾಮಿಯ ಜಾತ್ರೆಯೂ ನಡೆಯುವ ಸಮಯದಲ್ಲಿ ಇಲ್ಲಿಗೆ ಬರುವ ಭಕ್ತರು ಹಣವನ್ನು ತೂರಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಅದೇ ರೀತಿ ಈ ದೇವರು ದುಡ್ಡಿನ ದೇವರು ಎಂದು ಖ್ಯಾತಿಯನ್ನು ಪಡೆದುಕೊಂಡಿದೆ. ಇಂದು ವೈಕುಂಠ ಏಕಾದಶಿಯ ಅಗಿರುವುದರಿಂದ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು .ದೇವರ ಕೃಪೆಗೆ ಪಾತ್ರರಾಗಲು ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಕಂಚೀಪುರದ ಗ್ರಾಮಸ್ಥರು ಬೆಳಗಿನ ಜಾವದಿಂದಲೇ ನೆರೆದಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link