“ಸಮುದಾಯಕಲ್ಯಾಣ ಗುಂಪಿಗೆ ತರಬೇತಿಕಾರ್ಯಕ್ರಮ”

ರಾಣಿಬೆನ್ನೂರು

        ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆಕಾರ್ಯಕ್ರಮ- ಜಲಸಿರಿ, ಫಲಿತಾಂಶಆಧಾರಿತ ನೆರವು-ಶೌಚಾಲಯಕಾರ್ಯಕ್ರಮ , ನಗರಸಭೆರಾಣೇಬೆನ್ನೂರ ಹಾಗೂ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ರಾಣೇಬೆನ್ನೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಕಲ್ಯಾಣ ಗುಂಪಿಗೆ “24×7ನೀರು ಸರಬರಾಜು ಒಳಚರಂಡಿ ಸಂಪರ್ಕ ಹಾಗೂ ಶೌಚಾಲಯ ಕುರಿತು  ” ತರಬೇತಿ ಕಾರ್ಯಕ್ರಮವನ್ನು ದಿನಾಂಕ 18-12-2018 ರಂದು ಬೆಳಿಗ್ಗೆ 10.30 ಘಂಟೆಗೆರಾಣೇಬೆನ್ನೂರ ನಗರದ ವಾರ್ಡ ನಂ-7 ರಲ್ಲಿ ಬರುವ ಆರ್‍ಎಚ್‍ಜಿನ್ನಿಂಗ್ ಪ್ಯಾಕ್ಟರಿ, ರೋಟರಿ ಸ್ಕೂಲ್ ಹತ್ತಿರಹಮ್ಮಿಕೊಳ್ಳಲಾಯಿತು.

         ಕಾರ್ಯಕ್ರಮದ ಪ್ರಾಸ್ಥಾವಿಕವಾಗಿ ನೀಡ್ಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಚ್‍ಎಫ್ ಅಕ್ಕಿ ಯವರು ಮಾತನಾಡುತ್ತಾಫಲಿತಾಂಶಆದಾರಿತ ನೆರವು ಶೌಚಾಲಯಯೋಜನೆಯಡಿಯಲ್ಲಿ ಬರುವ ಫಲಾನುಭವಿಗಳು ಪ್ರತಿಯೊಬ್ಬರು ಶೌಚಾಲಯವನ್ನು ಕಟ್ಟಿಸಿಕೊಳ್ಳಬಹುದಾಗಿದೆಇದರ ಮುಖ್ಯಉದ್ದೇಶ ಬಯಲು ಮಲ ವಿಸರ್ಜನೆಯನ್ನುತಡೆಗಟ್ಟುವುದು, ಪರಿಸರ ಮಾಲಿನ್ಯತೆಯನ್ನುತಡೆಯುವುದಾಗಿದೆ.

         ಶೌಚಾಲಯ ಬಳಕೆಮಾಡುವುದರಿಂದ ಸಾಂಕ್ರಾಮಿಕ ಕಾಯಿಲೆಗಳಾದ ಮಲೇರಿಯಾ, ಜಾಂಡಿಸ್, ಮುಂತಾದ ಖಾಯಿಲೆಗಳಿಂದ ದೂರಇರಬಹುದಾಗಿದೆಹಾಗೂ ನೀರು ಸರಬರಾಜು, ಒಳಚರಂಡಿ ಸಂಪರ್ಕಕುರಿತಾಗಿ ಪ್ರತಿಯೊಬ್ಬಕುಟುಂಬವು ಒಳಚರಂಡಿ ಸಂಪರ್ಕವನ್ನು ಪಡೆದುಕೊಂಡು ನಗರದ ಸ್ವಚ್ಚತೆಗೆ ಸಹಕಾರ ನೀಡಬೇಕೆಂದು ಹೇಳಿದರು.24×7 ನೀರು ಸರಬರಾಜುಯೋಜನೆಯಇನ್ನೊಂದು ಮುಖ್ಯ ಉದ್ದೇಶವಾಗಿದೆ.

            ಅಂದರೆ ದಿನದ 24 ತಾಸುಕುಡಿಯುವ ನೀರನ್ನು ಪಡೆಯಬಹುದಾಗಿದೆ.ನೀರಿನ ಮಿತ ಬಳಕೆ ಹಾಗೂ ನಳಗಳಿಗೆ ಮೀಟರ್ ಅಳವಡಿಸುತ್ತಾರೆ.ಅದಕ್ಕೆತಕ್ಕಂತೆದರವನ್ನುಕಟ್ಟಬೇಕಾಗುತ್ತದೆಎಂದು ತಿಳಿಸಿದರು ಈ ತರಬೇತಿಯಲ್ಲಿ 20ಜನರುಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತವನ್ನುಶ್ರೀಮತಿ ಸುನಿತಾಜಾಧವಸ್ವಾಗತಿಸಿದರು.ವಂದನಾರ್ಪಣೆಯನ್ನು ಶ್ರೀ ಮನೋಹರಅಜಂತಕರ್‍ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link