ಬೆಂಗಳೂರು:
ತಂದೆ-ತಾಯಿಯನ್ನು ಕಳುಹಿಸಿ ಚಲಿಸುವ ರೈಲಿನಿಂದ ಇಳಿಯಲು ಹಾರಿ ಆಯತಪ್ಪಿ ಬಿದ್ದು ರೈಲಿನಡಿ ಸಿಕ್ಕಿ ಸಾಫ್ಟ್ವೇರ್ ಇಂಜಿನಿಯರೊಬ್ಬರು ಮೃತಪಟ್ಟ ಮನಕಲಕುವ ಘಟನೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ವಿಪ್ರೋ ಕಂಪನಿಯ ಸಾಫ್ಟ್ ವೇರ್ ಎಂಜಿನಿಯರ್ ವಿಕ್ರಮ್ ವಿಜಯನ್(26) ಎಂದು ಗುರುತಿಸಲಾಗಿದೆ ಕೆಳಗಿಳಿಯಲು ಹೋಗಿ ಮಗ ರೈಲಿನಡಿ ಸಿಲುಕಿದ್ದನ್ನು ನೋಡಿ ರಕ್ಷಿಸಲು ಹೋದ ತಂದೆ ವಿಜಯನ್ ಚಕ್ಕಿಂಗಲ್(65)ಅವರು ಗಾಯಗೊಂಡು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಂದೆ-ತಾಯೆಗೆ ಬೈ:
ಕೇರಳದ ಪಾಲಕಾಡ್ ಜಿಲ್ಲೆಯ ಕಂಜಿಕೋಡ್ ಮೂಲದ ವಿಕ್ರಮ್ ವಿಪ್ರೋದಲ್ಲಿ ಕೆಲಸ ದೊರೆತ ನಂತರ ನಗರಕ್ಕೆ ಬಂದು ಎಚ್ಎಸ್ಆರ್ ಲೇಔಟ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ನಿವೃತ್ತ ಟೆಕ್ನಿಶಿಯನ್ ಆಗಿದ್ದ ವಿಜಯನ್ ಚಕ್ಕಿಂಗಲ್ ಹಾಗೂ ಪತ್ನಿ ಉದಯ ಕುಮಾರಿ ಕೆಲ ದಿನಗಳ ಹಿಂದೆ ಮಗನ ಮನೆಗೆ ಬಂದಿದ್ದರು ಮತ್ತೆ ವಾಪಸ್ ಕಂಜಿಕೋಡ್ಗೆ ಹೋಗಲು ಕಳೆದ ಡಿ.17ರಂದು ಯಶವಂತಪುರ-ಕಣ್ಣೂರು ರೈಲಿಗೆ ಹತ್ತಲು ಪುತ್ರ ವಿಕ್ರಮ್ ಜೊತೆ ಕಾರ್ಮೆಲರಂ ರೈಲು ನಿಲ್ದಾಣಕ್ಕೆ ಬಂದಿದ್ದಾರೆ.ರಾತ್ರಿ 8.56ರ ಸುಮಾರಿಗೆ ರೈಲು ಫ್ಲಾಟ್ ಫಾರಂ ನಂಬರ್ 1ಕ್ಕೆ ಬಂದು ಕೆಲ ನಿಮಿಷ ನಿಂತಿತ್ತು.
ರೈಲು ನಿಂತಿದೆಯೆಂದು ವಿಕ್ರಮ್ ಲಗೇಜ್ ಹಿಡಿದುಕೊಂಡು ತಾವು ಬುಕ್ ಮಾಡಿದ್ದ ಸೀಟ್ ಹುಡುಕಿಕೊಡಲೆಂದು ರೈಲಿಗೆ ಹತ್ತಿ ಹವಾನಿಯಂತ್ರಕ ಕಂಪಾರ್ಟ್ ಮೆಂಟ್ ನಲ್ಲಿ ಕಾಯ್ದಿರಿಸಿ ಸೀಟಿಗೆ ತೆರಳಿ ಅಪ್ಪ-ಅಮ್ಮನ ಲಗೇಜ್ ಇಟ್ಟು, ಅವರಿಗೆ ಸೀಟ್ ಇಲ್ಲಿದೆ ಎಂದು ಹೇಳಿ ಕೆಳಗಿಳಿಯಲು ಹೋಗುವಾಗ ರೈಲು ಹೊರಟಿದೆ ಕೂಡಲೇ ಹೆತ್ತವರಿಗೆ ಹ್ಯಾಪಿ ಜರ್ನಿ ಎಂದು ಹೇಲಿ ರೈಲಿನಿಂದ ಕೆಳಗಿಳಿಯಲು ಓಡಿದ್ದಾರೆ.
ಕಾಲು ಕೈ ಕಟ್
ಬಾಗಿಲ ಬಳಿ ಬಂದ ವಿಕ್ರಮ್ ರೈಲು ಚಲಿಸುತ್ತಿದ್ದ ವಿರುದ್ಧ ದಿಕ್ಕಿನಿಂದ ಹಾರಿದ್ದು ಆಯತಪ್ಪಿ ತಪ್ಪಿ ಫ್ಲಾಟ್ ಫಾರಂ ಹಾಗೂ ರೈಲ್ವೇ ಹಳಿ ಮಧ್ಯೆ ಬಿದ್ದು ಚಕ್ರಗಳ ನಡುವೆ ಸಿಲುಕಿದ್ದರಿಂದ ಕಾಲು, ಕೈ ಹಾಗೂ ತಲೆ ಬೇರೆಬೇರೆಯಾಗಿವೆ. ಮಗ ಹಾರಿದ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ವಿಕ್ರಮ್ ತಂದೆ ವಿಜಯನ್, ಮಗನಿಗೆ ಏನಾಗಿದೆ ಎಂದು ತಿಳಿದುಕೊಳ್ಳಲು ತಾವು ಕೂಡ ರೈಲಿನಿಂದ ಹಾರಿದ್ದರಿಂದ ಅವರಿಗೂ ಗಾಯಗಳಾಗಿವೆ
ದೂರದಿಂದ ನೋಡಿದ ಉದಯಕುಮಾರಿ ಇತರ ರೈಲು ಪ್ರಯಾಣಿಕರಲ್ಲಿ ರೈಲನ್ನು ನಿಲ್ಲಿಸುವಂತೆ ಬೇಡಿಕೊಂಡಿದ್ದು ಪ್ರಯಾಣಿಕರು ರೈಲಿನ ಚೈನ್ ಎಳೆದು ನಿಲ್ಲಿಸಿದ್ದಾರೆ. ಕೂಡಲೇ ಗಾಯಗೊಂಡಿರುವ ವಿಜಯನ್ ಅವರನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೆಲೀಸರು ತಿಳಿಸಿದ್ದಾರೆ.ಬೈಯಪ್ಪನಹಳ್ಳಿ ರೈಲ್ವೇ ಪೆಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








