ಕಂದಾಯ ಅದಾಲತ್ ಕಾರ್ಯಕ್ರಮ

ಚೇಳೂರು.

           ಸಾರ್ವಜನಿಕರಿಗೆ. ರೈತರಿಗೆ ಕಂದಾಯ ಇಲಾಖೆಯಿಂದ ನೀಡಿದ ಯಾವುದೇ ದಾಖಲೆಗಳಲಿ ಲೋಪದೋಷಗಳು ಇದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳುವ ಅವಕಾಶ ಹಾಗು ನಿಂತು ಹೋದ ಅರ್ಹ ಪಲಾನುಭವಿಗಳ ಪಿಂಚಣಿ ಹಣ ಪಡೆಯಲು ಸೂಕ್ತ ದಾಖಲೆಗಳನ್ನು ನೀಡಿ ಪಡೆಯಬಹುದು ಎಂದು ಚೇಳೂರಿನ ಕಂದಾಯ ಅಧಿಕಾರಿ ನಟರಾಜ್ ಹೇಳಿದರು

           ಇವರು ಚೇಳೂರು ಹೊಬಳಿ ತಾಳ್ಳೆಕೊಪ್ಪದಲ್ಲಿ ನೆಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡುತ್ತ ಇತಂಹ ಸೌಕರ್ಯವನ್ನು ಅರ್ಹರು ಪಡೆಯುವುದರಿಂದ ಇತಂಹ ಕಾರ್ಯಕ್ರಮಗಳಿಗೆ ಮತ್ತಷ್ಟು ಪುಷ್ಠಿ ಸಿಗುತ್ತಾದೆ.ಯಾವುದೂ ಕಾರಣದಿಂದ ಕೆಲವು ಕಡೆ ಲೋಪಗಳು ಆಗಿರಬಹುದು. ಅದನ್ನು ಸರಿ ಮಾಡಿಕೊಳ್ಳುವುರ ಜೊತೆಗೆ ಮಾಡಿಕೊಡುವರ ಕರ್ತವ್ಯವು ಸಹ ಆಗಿರುತ್ತಾದೆ.

            ಇದರಲ್ಲಿ ಪಹಣಿಗಳಲ್ಲಿ ತಿದ್ದುಪಡಿ.ನಮ್ಮ ಇಲಾಖೆಯಿಂದ ಸಾರ್ವಜನಿಕರಿಗೆ ಸಿಗುವ ಸೌಲತ್ತುಗಳು.ನಿಂತು ಹೋಗಿರುವ ಅಂಗವೀಕಲ .ಪಿಂಚಣಿ ಹಾಗೂ ಇತರ ಸೌಲಭ್ಯಗಳು ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತವಾದ ದಾಖಲೆಗಳನ್ನು ನೀಡಿ ಸರ್ಕಾರದಿಂದ ಸಿಗುವ ಸೌಕರ್ಯಗಳನ್ನು ಅರ್ಹರು ಪಡೆಯಬಹುದುಂದರು.ಈ ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಬಿ.ಕೆ.ವೆಂಕಟರಂಗನ್,ಮುಖಾಂಡರಾದ ಗಂಗಾಧರಯ್ಯ,ಗುರುಲಿಂಗಯ್ಯ,ವೆಂಕಟಪ್ಪ,ಗ್ರಾಮಲೆಕ್ಕಾಧಿಕಾರಿಗಳಾದ ಪಿ.ಎಸ್.ಸುಮತಿ , ಶಿವಕುಮಾರ್ , ಆಶ್ವಥ್‍ಕುಮಾರ್ , ಪ್ರಸನ್ನಕುಮಾರ್ , ಶ್ರೀನಿವಾಸ್ , ಆನ್ಸರ್ , ಹಾಗು ಇತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap