ಧನುರ್ಮಾಸದ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆ

ತುಮಕೂರು:

        ಶ್ರೀಹಿಮವತ್ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳ ಧನುರ್ಮಾಸದ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆ ಹಾಗೂ ಧರ್ಮ ಪರಂಪರೆ ರಕ್ಷಣೆಯ ಸಮಾರಂಭವನ್ನು ಡಿ.26 ರಿಂದ 30ರವರೆಗೆ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಶ್ರೀಮತಿ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

         ಡಿ.25 ರಂದು ಸಂಜೆ 4 ಗಂಟೆಗೆ ಜಗದ್ಗುರುಗಳ ಪುರ ಪ್ರವೇಶ ಮೆರವಣಿಗೆ ನಡೆಯಲಿದ್ದು, ಸೋಮೇಶ್ವರ ದೇವಸ್ಥಾನದಿಂದ ವಿಶಾಲಾಕ್ಷಮ್ಮ ಸಭಾ ಭವನದವೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ವೀರಗಾಸೆ, ಚಿಟ್ಟಿಮೇಳ, ನಂದಿಧ್ವಜದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ.

         ಡಿ.26 ರಂದು ಸಂಜೆ 6.30 ಗಂಟೆಗೆ ನಡೆಯಲಿರುವ ಧರ್ಮ ಪರಂಪರೆ ರಕ್ಷಣೆಯ ಸಮಾರಂಭದ ದಿವ್ಯ ಸಾನಿಧ್ಯವನ್ನು ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ವಹಿಸುವರು. ಸಿದ್ದರಬೆಟ್ಟ ಸುಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಕಣ್ವಕುಪ್ಪೆ ಗವೀಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸುವರು.

         ಉದ್ಘಾಟನೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ, ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಗಂಗಾಂಬಿಕಾ ಮಲ್ಲಿಕಾರ್ಜುನ ಅವರು ನೆರವೇರಿಸುವರು. ಪ್ರಶಾಂತ್ ರಿಪ್ಪನ್‍ಪೇಟೆ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಜಿ.ಎಸ್. ಬಸವರಾಜು, ಟಿ.ಬಿ.ಶೇಖರ್, ಸಿ.ವಿ.ಮಹದೇವಯ್ಯ, ಟಿ.ಎಂ.ಯೋಗೀಶ್ ಅವರುಗಳು ಆಗಮಿಸುವರು. ಎನ್.ಎಸ್.ಜಯಕುಮಾರ್ ಮತ್ತಿತರರು ಗುರುರಕ್ಷೆ ಸ್ವೀಕರಿಸುವರು.

            ಡಿ.27 ರಂದು ಸಂಜೆ 6.30ಕ್ಕೆ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ವಹಿಸುವರು. ನೇತೃತ್ವವನ್ನು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ಸನಾತನ ಕೇದಾರ ಪೀಠದ ಪರಂಪರೆ ಎಂಬ ವಿಷಯವಾಗಿ ಶಿವಯೋಗಿ ಕಂಬಾಳಿಮಠ ಅವರು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಬಸವರಾಜ್ ಮತ್ತಿಮಡು, ಸಿ.ವೀರಭದ್ರಯ್ಯ, ಸೊಗಡು ಶಿವಣ್ಣ, ಬಿ.ಎಸ್.ಹೂಗಾರ್ ಅವರುಗಳು ಅಗಮಿಸುವರು.

           ಡಿ.28 ರಂದು ಸಂಜೆ 6.30ಕ್ಕೆ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ವಹಿಸುವರು. ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಬಂಡೇಮಠದ ಶ್ರೀ ಶಿವಾನಂದ ಸ್ವಾಮಿಗಳು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ವಸುಂಧರ ನಿರಂಜನ್, ಬಿ.ಎಸ್.ನಾಗರತ್ನಮ್ಮ ಶಿವಣ್ಣ, ತೀರ್ಥ ಓಹಿಲೇಶ್ವರ್, ಲಲಿತಾ ಮೃತ್ಯುಂಜಯ, ರೇಣುಕಾ ಪರಮೇಶ್, ಪುನೀತಾ ಮುನೇಶ ಮತ್ತು ವಿ. ಮುನೇಶ ಅವರುಗಳು ಆಗಮಿಸುವರು.

           ಡಿ.29 ರಂದು ಸಂಜೆ 6.30ಕ್ಕೆ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ವಹಿಸುವರು. ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ದೊಡ್ಡಗುಣಿಯ ಶ್ರೀ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳು ಉಪದೇಶಾಮೃತ ನೀಡುವರು. ಸಾಹಿತಿಗಳಾದ ಗಿರಿಜಾದೇವಿ ಮಲ್ಲಿಕಾರ್ಜುನಯ್ಯ ದುರ್ಗದಮಠ್ ಇವರು ಪರಿವರ್ತನೆಯ ಬದುಕಿಗೆ ಕೇದಾರ ಯಾತ್ರೆ ಎಂಬ ವಿಷಯವಾಗಿ ಉಪನ್ಯಾಸ ನೀಡುವರು.

          ಡಿ.30 ರಂದು ರಂದು ಸಂಜೆ 6.30ಕ್ಕೆ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ವಹಿಸುವರು. ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಸೋಮೇಕಟ್ಟೆ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು ಉಪದೇಶಾಮೃತ ನೀಡುವರು. ಸಂಸ್ಕತ ವಿದ್ವಾಂಸ ಡಾ.ಸಿ.ಶಿವಕುಮಾರಸ್ವಾಮಿ ವೀರಶೈವ ಒಂದು ವಿವೇಚನೆ ಎಂಬ ವಿಷಯವಾಗಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡ ಚಿದಾನಂದ್ ಅವರುಗಳು ಆಗಮಿಸುವರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link