ಹಗರಿಬೊಮ್ಮನಹಳ್ಳಿ
ಶ್ರೀಕ್ಷೇತ್ರ ಧರ್ಮಸ್ಥಳವು ನಾಡಿನ ಪ್ರಸಿದ್ಧ ಮತ್ತು ಪುಣ್ಯ ಕ್ಷೇತ್ರವಾಗಿದ್ದು, ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಪರಂಪರೆಯ ಜೊತೆಗೆ ಕಳೆದ 35 ವರ್ಷಗಳಿಂದ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಪರಿವರ್ತನಾ ಕಾರ್ಯವನ್ನು ಅರ್ಥಪೂರ್ಣವಾಗಿ ಮಾಡಿಕೊಂಡು ಬರುತ್ತಿದ್ದಾರೆಂದು ತಿಳಿಸಲು ಸಂತೋಷವಾಗುತ್ತಿದೆ ಎಂದು ಧರ್ಮಸ್ಥಳ ಸಂಘದ ಹೈ.ಕ.ವಿಭಾಗದ ಗ್ರಾಮ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಪಿ.ಗಂಗಾಧರ ರೈ ಹೇಳಿದರು.
ಅವರು, ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ. ಕಾಲೇಜ್ ಆವರಣದಲ್ಲಿ ಇದೇ ಡಿ.22 ಹಾಗೂ 23ರಂದು ನಡೆಯುವ ಕೃಷಿ ಉತ್ಸವ 2018ರ ಪೂರ್ವಸಿದ್ಧತೆಯ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶ್ರೀಗಳು ಕರ್ನಾಟಕ ರಾಜ್ಯದ ಬಡವರ ಕೃಷಿ, ಕೂಲಿ, ಕಾರ್ಮಿಕರ ಹಾಗೂ ಮಹಿಳೆಯರ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕಿಗೆ ಪ್ರೇರಣೆ ನೀಡಲು 1982 ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡು ಸಾವಿರಾರು ಕುಟುಂಬಗಳ ಬಡತನ ನಿವಾರಣೆಗೆ ಕಾರಣಿಭೂತರಾಗಿದ್ದಾರೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಟನೆಯ ನೇತೃತ್ವದಲ್ಲಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಕೃಷಿ ಉತ್ಸವ ನಡೆಯುತಿದ್ದು. ಇದರ ಯಶಸ್ಸಿಗಾಗಿ ತಾಲೂಕಿನ ಬಹುತೇಕ ಸಂಘ-ಸಂಸ್ಥೆಗಳ ಪ್ರಮುಖ ಪದಾಧಿಕಾರಿಗಳು, ಮಹಿಳೆಯರು, ಎಲ್ಲಾ ಧರ್ಮಗಳ ಸಮುದಾಯಗಳ ಮುಖಂಡರು, ಯುವ ಜನತೆ ಈ ಉತ್ಸವದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುವ ಮೂಲಕ ಉತ್ಸವದ ಯಸ್ಸಿಗೆ ಕಾರಣಾರಾಗಲಿದ್ದಾರೆ ಎಂದು ತಿಳಸಿದರು.
ಉತ್ಸವದಲ್ಲಿ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ ನೇತೃತ್ವದಲ್ಲಿ 21 ಉಪಸಮಿತಿಗಳು ಹಾಗೂ ಯೋಜನೆಯ ಕಾರ್ಯಕರ್ತರು ಕೃಷಿ ಉತ್ಸವದ ಪೂರ್ವ ತಯಾರಿ ಭರದಿಂದ ಸಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ