ಗುತ್ತಲ :
ಪಟ್ಟಣ ಪಂಚಾಯತಿ ವತಿಯಿಂದ ಪಟ್ಟಣದಲ್ಲಿರುವಂತಹ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಕೊಳವೆ ಬಾವಿಯನ್ನು ಮಾತ್ರ ಕಂಡಿತೆ ಹೊರತು ಅದರಿಂದ ಇನ್ನು ಕೂಡಾ ಒಂದು ಹನಿ ನೀರನ್ನು ಸಹ ಕಂಡಿಲ್ಲ ಇದು ಶಾಲೆಯ ಅಥವಾ ಶಾಲಾ ಮಕ್ಕಳ ದುರ್ದೈವವೋ ಎನೋ ಗೊತ್ತಿಲ್ಲಾ.
ಹೌದು ಕಳೆದ ಸುಮಾರು 6 ತಿಂಗಳ ಹಿಂದೆ ಪಟ್ಟಣದಲ್ಲಿ ಕೆಲವು ಕೊಳವೆ ಬಾವಿಗಳನ್ನು ಕೊರೆಸಲಾಯಿತು ಅದರಲ್ಲಿ ಶಾಲೆಯ ಕೊಳವೆ ಬಾವಿಯು ಒಂದು ಈ ಸಮಯದಲ್ಲಿ ಕೊರೆಸಿದಂತಹ ಕೊಳವೆ ಬಾವಿಗಳಿಗೆ ಮೋಟರ್‍ಗಳನ್ನು ಅಳವಡಿಸಲಾಗಿದೆ ಆದರೆ ಶಾಲೆಗೆ ಕೊರೆಸಿದಂತಹ ಕೊಳವೆ ಬಾವಿಗೆ ಮಾತ್ರ ಮೋಟರ್ ಅಳವಡಿಕೆ ಮಾಡಿಲ್ಲಾ ಹಾಗಾದರೆ ಈ ಕೊಳವೆ ಬಾವಿಯ ಮೋಟರ್ ಎಲ್ಲಿ ಹೋಯಿತು.
ಹೆಸರಿಗಷ್ಟೆ ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ಕೊಳವೆ ಬಾವಿಯನ್ನು ಕೊರೆಸಲಾಯಿತೆ? ಇಂದು ಶಾಲೆಯ ಮಕ್ಕಳು ಕುಡಿಯುವ ನೀರನ್ನು ದಿನ ನಿತ್ಯ ತಮ್ಮ ಮನೆಯಿಂದ ನೀರಿನ ಬಾಟಲಿಗಳಲ್ಲಿ ತುಂಬಿಕೋಡು ಬರುವಂತಹ ಪರಿಸ್ಥಿತಿ ನಿರ್ಮಾಣವಗಿದೆ.
ಅಡುಗೆ ಮಾಡಲು ಸಹ ಕುಡಿಯುವ ನೀರಿಲ್ಲ : ಶಾಲೆಗೆ ಈ ಹಿಂದೆ ಕುಡಿಯುವ ನೀರಿನ ಸೌಲಭ್ಯವಿತ್ತು ಅದು ಕೂಡ ಹಲವು ದಿನಗಳಿಂದ ಕುಡಿಯುವ ನೀರು ಬರದಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಕದ ಸರಕಾರಿ ಗಂಡು ಮಕ್ಕಳ ಶಾಲೆಯಿಂದ ಅಡುಗೆ ಮಾಡಲು ಬೇಕಾಗುವಷ್ಟು ನೀರನ್ನು ನಿತ್ಯ ಶಾಲೆಯ ಅಡುಗೆ ಸಿಬ್ಬಂದಿ ತಂದು ಮಕ್ಕಳಿಗೆ ಬಿಸಿಯೂಟದ ಅಡುಗೆಯನ್ನು ತಯಾರಿಸುತ್ತಾರೆ. ಶಾಲೆಯ ಅಡುಗೆ ಸಾಮಗ್ರಿಗಳನ್ನು ಹಾಗೂ ಮಕ್ಕಳು ತಟ್ಟೆಯನ್ನು ತೊಳೆಯುವುದಕ್ಕೆ ಹೊರಗಡೆಯ ಬೊರವೆಲ್‍ನಿಂದ ಸಂಪರ್ಕವನ್ನು ಪಡೆಯಲಾಗಿದೆ ಆ ನೀರು ಸಹ ಕೇವಲ ಬಳಕೆಗೆ ಮಾತ್ರ ಸೀಮಿತವಾಗಿವೆ.
ಮಕ್ಕಳಿಗೆ ಕುಡಿಯಲು ಸಹ ಶಾಲೆಯಲ್ಲಿ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಈ ವಿಷಯ ಶಾಲೆಗೆ ಕೊಳವೆಬಾವಿಯನ್ನು ಹಾಕಿಸುವಂತಹ ಸಂದರ್ಭದಲ್ಲಿ ಇದ್ಧ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ತಿಳಿದಿರಲಿಲ್ಲವೆ. ಹಾಗಾದರೆ ಕೊರೆಸಿದ ಕೊಳವೆ ಬಾವಿಯ ಮೋಟರ್ ಎಲ್ಲಿ ಹೋಯಿತು? ಮೊಟರ್‍ನ್ನು ಕೊಳವೆ ಬಾವಿಯೆ ನುಂಗಿದೇಯಾ ಅಥವಾ ಅದರ ಹೆಸರಿನಲ್ಲಿ ಯಾರಾದರು ಅದರ ಮೋಟರ್ ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರಾ ಎನ್ನುವಂತಹ ಅನುಮಾನಗಳು ಶಾಲೆಯ ಮಕ್ಕಳನ್ನು,ಶಾಲೆಯ ಸಿಬ್ಬಂದಿಯನ್ನು ಹಾಗೂ ಸಾರ್ವಜನಿಕರಿಗೆ ಕಾಡುವಂತಹ ಪ್ರಶ್ನೆಯಾಗಿದೆ.ಇನ್ನು ಮೇಲಾದರು ಶಾಲೆಯಲ್ಲಿ ಕೊರೆಸಿದಂತಹ ಕೊಳವೆ ಬಾವಿ ಮೋಟರ್‍ನ್ನು ಕಾಣುತ್ತಾ ಮಕ್ಕಳು ಹಾಗೂ ಶಾಲೆಯ ಸಿಬ್ಬಂದಿ ನೀರಿನ ಸಮಸ್ಯೆಯಿಂದ ಹೊರಬರುತ್ತಾರಾ ಎಂಬುದನ್ನಾ ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ