ನಾಗಲ್ಯಾಂಡ್‍ನ ಖತರ್ನಾಕ್ ಖದೀಮ ಅಂದರ್

ಬೆಂಗಳೂರು

       ಸಾರ್ವಜನಿಕರಿಗೆ ಕರೆ ಮಾಡಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೆಂದು ಪರಿಚಯಿಸಿಕೊಂಡು ತೆರಿಗೆ ಪಾವತಿಯ ಸಲುವಾಗಿ ಲಿಂಕ್ ಕಳುಹಿಸಿದ್ದು ಅದನ್ನು ಕ್ಲಿಕ್ ಮಾಡಿ ಎಂಬುದಾಗಿ ತಿಳಿಸಿ ಓ.ಟಿ.ಪಿ ಪಡೆದು ಆನ್‍ಲೈನ್ ಮೂಲಕ ಗ್ರಾಹಕರ ಖಾತೆಯಿಂದ ತನ್ನ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ನಾಗಲ್ಯಾಂಡ್‍ನ ಖತರ್ನಾಕ್ ಖದೀಮನನ್ನು ನಗರ ಸೈಬರ್ ಕ್ರೈಂ ಪೋಲಿಸರು ಬಂಧಿಸಿದ್ದಾರೆ.

            ನಾಗಲ್ಯಾಂಡ್ ಮೂಲದ ಜಾನ್ ಕಜಿಚೇ(24)ಬಂಧಿತ ಆರೋಪಿಯಾಗಿದ್ದಾನೆ, ಈಜಿಪುರzಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆರೋಪಿಯು ನಡೆಸುತ್ತಿದ್ದ ವಂಚನೆಯ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

         ಆರೋಪಿಯು ಕಲೆದ ಏಪ್ರಿಲ್ ತಿಂಗಳಿನಿಂದ ತನ್ನ ಹೆಸರಿನಲ್ಲಿ ಆಡುಗೋಡಿಯ ಹೊಸೂರು ರಸ್ತೆ ಕೋಟಕ್ ಮಹೇಂದ್ರ ಬ್ಯಾಂಕ್‍ನಲ್ಲಿ ಖಾತೆಯನ್ನು ತೆರೆದು ವಂಚನೆಗೆ ಬಳಸಿಕೊಂಡಿರುವುದು ಕಂಡುಬಂದಿದೆ.ಆರೋಪಿ ತನ್ನ ಬ್ಯಾಂಕಿಗೆ ಸಂಬಂದಿಸಿದ ಎ.ಟಿ.ಎಂ ಕಾರ್ಡ್‍ನ್ನು ಮತ್ತೊಬ್ಬ ಆರೋಪಿಗೆ ನೀಡಿರುವುದು ತಿಳಿದುಬಂದಿದ್ದು, ಮತ್ತೊಬ್ಬ ಆರೋಪಿಯ ಶೋಧ ಕಾರ್ಯ ಮುಂದುವರಿದಿದೆ.

           ಕಳೆದ ಡಿ.15ರಂದು ಬನ್ನೇರುಘಟ್ಟ ರಸ್ತೆಯ ನೊಬೊ ನಗರದ ನಿವಾಸಿಯೊಬ್ಬರು ನೀಡಿದ ದೂರಿನಲ್ಲಿ ನನಗೆ ಕರೆ ಮಾಡಿದ ವ್ಯಕ್ತಿ ತಾನು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂಬುದಾಗಿ ಪರಿಚಯಿಸಿಕೊಂಡು ನಂತರದಲ್ಲಿ ಅಪ್ ಡೆಟ್‍ಗಾಗಿ ಲಿಂಕ್‍ಯೊಂದನ್ನು ಕಳುಹಿಸುತ್ತಿರುವುದಾಗಿ ನಂಬಿಸಿ ಕಳುಹಿಸಿ ಕ್ಲಿಕ್ ಮಾಡುವಂತೆ ತಿಳಿಸಿದ್ದು ತಾನು ಸದರಿ ಲಿಂಕ್‍ಅನ್ನು ಕ್ಲಿಕ್ ಮಾಡಿದ ನಂತರ ಹಂತ ಹಂತವಾಗಿ ತನ್ನ ಬ್ಯಾಂಕ್ ನ ಖಾತೆಯಿಂದ ರೂ 2.2 ಲಕ್ಷ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುತ್ತಾರೆ ಎಂದು ತಿಳಿಸಿದ್ದರು.

        ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಸಾರ್ವಜನಿಕರು ಯಾವುದೇ ಕರೆಯನ್ನು ಸ್ವೀಕರಿಸಿದಾಗ ಕರೆ ಮಾಡಿದ ವ್ಯಕ್ತಿ ವಿವಿಧ ಇಲಾಖೆಯ/ಬ್ಯಾಂಕಿಗೆ ಸಂಬಂಧಿಸಿದ ಅಧಿಕಾರಿಗಳೆಂದು ತಿಳಿಸಿ ನಿಮ್ಮ ಬ್ಯಾಂಕ್‍ನ ವಿವರ, ಕಾರ್ಡ್‍ನ ವಿವಿರ, ಓ.ಟಿ.ಪಿ ಅಥವಾ ನಿಮ್ಮ ಮೊಬೈಲ್‍ಗೆ ಲಿಂಕ್ ಕಳುಹಿಸುತ್ತಿದ್ದು ಅದನ್ನು ಕ್ಲಿಕ್ ಮಾಡುವಂತೆ ಅಥವಾ ಫಾರ್ವರ್ಡ್ ಮಾಡುವಂತೆ ಸೂಚಿಸಿದಲ್ಲಿ ವಂಚಕರ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳಬಾರದೆಂದು ಸಿಸಿಬಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಗಿರೀಶ್ ಎಸ್ ಮನವಿ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link