ದಾವಣಗೆರೆ:
ಬ್ಯಾಂಕ್‍ಗಳ ವಿಲೀನ ವಿರೋಧಿಸಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ನೇತೃತ್ವದಲ್ಲಿ ಬ್ಯಾಂಕ್ ನೌಕರರು ಶುಕ್ರವಾರ ನಗರದಲ್ಲಿ ಒಂದು ದಿನದ ಬ್ಯಾಂಕ್ ಮುಷ್ಕರ ನಡೆಸಿದರು.
ಇಲ್ಲಿನ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಶಾಖೆ ಎದುರು ಜಮಾಯಿಸಿದ ಬ್ಯಾಂಕ್ ನೌಕರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತ ಬ್ಯಾಂಕ್ ನೌಕರರು, ಸಾರ್ವಜನಿಕ ವಲಯದ ಬ್ಯಾಂಕ್‍ಗಳ ವಿಲೀನಿಕರಣದಿಂದ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಮಾರಕವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣವೇ ಈ ಬ್ಯಾಂಕ್ ವಿಲೀನವನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಲಾಭದಾಯಕ ಅಥವಾ ಪಾವತಿಸುವ, ಸಾಮಥ್ರ್ಯಕ್ಕೆ ಥಳಕು ಹಾಕದೇ ಕನಿಷ್ಟ ವೇತನ ಸೂತ್ರದಲ್ಲಿ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಯಾಗಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ಪ್ರಕಾರ ಎಲ್ಲಾ ಬ್ಯಾಂಕ್‍ಗಳ ಅಧಿಕಾರಿಗಳಿಗೆ ವೈದ್ಯಕೀಯ ವಿಮಾ ಯೋಜನೆಯನ್ನು ನೀಡಬೇಕು. ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಮುಷ್ಕರ ನೌಕರರು ಒತ್ತಾಯಿಸಿದರು.ಮುಷ್ಕರದಲ್ಲಿ ಒಕ್ಕೂಟದ ಕೆ.ಎಲ್.ಗಿರಿರಾಜ್, ಎಂ.ಹರೀಶ್, ಕೃಷ್ಣಪ್ಪ, ಭಾರತಿ, ಆನಂದಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ