ಗಮನ ಸೆಳೆದ ಇಷ್ಟಲಿಂಗ ಗಣಪತಿ ಮೆರವಣಿಗೆ

ದಾವಣಗೆರೆ:

    ತೊಗಟೆವೀರ ಸಮುದಾಯ ಭವನ ಹಿಂದೂ ಯುವ ಶಕ್ತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಯೂ ನೋಡುಗರ ಕಣ್ಮನ ಸೆಳೆಯಿತು.

     ಹಿಂದೂ ಯುವ ಶಕ್ತಿಯಿಂದ ತೋಗಟವೀರ ಕಲ್ಯಾಣ ಮಂಟಪದಲ್ಲಿ ಈ ಬಾರಿ 13000 ಇಷ್ಟಲಿಂಗಳನ್ನು ಬಳಿಸಿ ನಿರ್ಮಿಸಿದ್ದ ಇಷ್ಟಲಿಂಗ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದರ ಜೊತೆಗೆ ಪೂಜಾ ಗಣಪತಿಯೊಂದನ್ನು ಸಹ ಪ್ರತಿಷ್ಠಾಪಿಸಲಾಗಿತ್ತು. ಈ ಎರಡೂ ಗಣಪತಿಗಗಳ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಭಾನುವಾರ ನಡೆಯಿತು. ಮೆರವಣಿಗೆಯ ನಂತರ ಪೂಜಾ ಗಣಪತಿಯನ್ನು ವಿಸರ್ಜಿಸಿ, ಇಷ್ಟಲಿಂಗ ಗಣಪತಿಯನ್ನು ವಾಪಾಸ್ ತಂದು, ಅಲ್ಲಿರುವ ಇಷ್ಟಲಿಂಗಳನ್ನು ತಗೆದು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು ಎಂದು ಪಿ.ಸಿ.ರಾಮನಾಥ್ ತಿಳಿಸಿದ್ದಾರೆ.

      ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಗಮನ ಸೆಳೆದರು, ಡಿಜೆಯಿಂದ ಹೊರಡುತ್ತಿದ್ದ ಹಾಡುಗಳಿಗೆ ಯುವಕರು ಭಾವಪರವಶರಾಗಿ ಕುಣಿದು ಕುಪ್ಪಳಿಸಿದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link