ಭಾವೈಕ್ಯತೆಯ ಸಂಕೇತ ಶ್ರೀ ಕೊಟ್ಟೂರೇಶ್ವರರು

ಕೊಟ್ಟೂರು:

       ದೇಗುಲದ ನಾಡಾದ ಕೊಟ್ಟೂರು ಪಟ್ಟಣವು ಧರ್ಮಸಮನ್ವಯತೆ ಕ್ಷೇತ್ರವೆಂದು ಪ್ರಸಿದ್ದಿಗೊಂಡಿದೆ. ಹಿಂದು ಧರ್ಮದಲ್ಲಿ ಬಹುತೇಕ ಎಲ್ಲಾ ಹಬ್ಬಹರಿದಿನಗಳು ಶುಭಮುಹೂರ್ತದಲ್ಲಿ ನಡೆದರೆ ಕೊಟ್ರೇಶ್ವರ ಸ್ವಾಮಿಯ ರಥೋತ್ಸವ ಮಾತ್ರ ಅಶುಭ ಎಂದೇ ಪರಿಗಣಿಸಿದ ಮೂಲಾ ನಕ್ಷತ್ರದಲ್ಲೇ ನಡೆಯುವುದು ಇಲ್ಲಿನ ವೈಶಿಷ್ಟ್ಯ.

         ಶ್ರೀ ಗುರು ಕೊಟ್ಟೂರೇಶ್ವರರು ಬಾವೈಕ್ಯ ಸಂಕೇತವಾಗಿ ಎಲ್ಲಾ ವರ್ಗದ ಜನತೆಗೆ ಗೋಚರಿಸಿದ್ದಾರೆ. ದೆಹಲಿ ದೊರೆ ಅಕ್ಬರ್‍ಬಾದ್ ಷಾ ಕೂಡ ಸ್ವಾಮಿ ಭಕ್ತರಾಗಿ ಖಡ್ಗ ಮತ್ತು ಮಂಚಗಳನ್ನು ಕಾಣಿಕೆ ನೀಡಿ ಗೌರವಿಸಿರುವ ಸಂಗತಿ ಇತಿಹಾಸ ಮೂಲಕ ತಿಳಿಯುತ್ತದೆ.

         ಹಿರೇಮಠ, ಗಚ್ಚಿನಮಠ, ತೊಟ್ಟಿಲು ಮಠ, ತೇರುಗಡ್ಡೆ ಹತ್ತಿರವಿರುವ ಪೀರಲು ಮಸೀದಿಗಳು ಕೊಟ್ಟೂರಿನಲ್ಲಿ ಸರ್ವಜನಾಂಗದಲ್ಲಿ ಏಕತೆಭಾವ ಬಿಂಬಿಸುತ್ತದೆ. ಮೂರುಕಲ್ಲು ಮಠದ ಜೈನ ಬಸದಿಯಲ್ಲಿ ಶ್ರೀ ಕೊಟ್ಟೂರೇಶ್ವರರು ಲೀಲೆ ಪವಾಡ ತೋರಿದ ಕಾರಣ ಇಂದು ಶಿವಾಲಯವಾಗಿ ಸರ್ವಜನರನ್ನೂ ಆಧರಿಸುತ್ತದೆ.

           ಹಿರೇಮಠದಲ್ಲಿ ಸ್ವಾಮಿಯು ಜನರ ಕಷ್ಟ ಸುಖಗಳನ್ನು ಆಲಿಸುತ್ತ ಪರಿಹಾರ ಮತ್ತು ಆಶೀರ್ವಧಿಸುತ್ತಾ ಬಂದಿದ್ದಕ್ಕೆ ದರ್ಬಾರು ಮಠ ಎಂದು ಕರೆಯುತ್ತಾರೆ. ತೊಟ್ಟಿಲು ಮಠದಲ್ಲಿರುವ ತೊಟ್ಟಿಲನ್ನು ಮಕ್ಕಳಾಗದವರು ತೂಗಿದರೆ, ಮಕ್ಕಳಾಗುತ್ತವೆ ಎಂಬ ಪ್ರತೀತಿ ಇದೆ. ಗಚ್ಚಿನಮಠದಲ್ಲಿ ಕೊಟ್ಟೂರೇಶ್ವರ ದ್ಯಾನಾಸಕ್ತರಾಗಿ ಜೀವಂತ ಯೋಗಸಮಾಧಿ ಹೊಂದಿ ಬರುವ ಅಸಂಖ್ಯಾತ ಭಕ್ತರನ್ನು ಆಶೀರ್ವಧಿಸುತ್ತಾ ಬಂದಿದ್ದಾರೆ.

           ರಾಜ್ಯದಲ್ಲಿಯೇ ಪ್ರ,ಮುಖವಾದ ಈ ಧಾರ್ಮಿಕ ಕೇಂದ್ರವು ಮಠಗಳಲ್ಲಿ ಒಂದಾದ ಹಿರೇಮಠವು ದಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟು ಅನೇಕ ಅಭಿವೃದ್ದಿ ಕಾರ್ಯಗಳನ್ನು ಹೊಂದಿರುವುದನ್ನು ನೋಡಬಹುದಾಗಿದೆ. ದೇವಸ್ಥಾನದ ಹಿಂದುಗಡೆ ಸುಸಜ್ಜಿತ ಯಾತ್ರಾ ನಿವಾಸಗಳನ್ನು ನಿರ್ಮಿಸಿ, ಮೇಲ್ಚಾವಣಿಯನ್ನು ನಿರ್ಮಿಸುವ ಮುಖಾಂತರ ಧಾರ್ಮಿಕ ಸಭೆ ಸಮಾರಂಭಗಳನ್ನು ನಡೆಸಲು ಅನುವು ಮಾಡಿಕೊಟ್ಟಂತಾಗಿದೆ. ಬರುವ ಭಕ್ತರಿಗೆ ಪ್ರತಿನಿತ್ಯ ಅನ್ನದಾಸೋಹವನ್ನು ನಡೆಸಲಾಗುತ್ತಿದ್ದು ಇದರ ಸಂಪೂರ್ಣ ಜವಾಬ್ದಾರಿ ಪ್ರತ್ಯೇಕವಾಗಿ ದಾಸೋಹ ಸಮಿತಿ ವಹಿಸಿಕೊಂಡಿದೆ. ಉಳಿದ ಎರಡು ಮಠಗಳಾದ ತೊಟ್ಟಿಲು ಮಠ, ಗಚ್ಚಿನಮಠಗಳು, ಪರಂಪರಾಗತವಾಗಿ ಬಂದ ಪೂಜಾರಿಗಳು ಪೂಜಾಕಾರ್ಯವನ್ನು ನೆರವೇರಿಸುತ್ತಿದ್ದಾರೆ.

           ದೇವಸ್ಥಾನಗಳ ಆವರಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ಅವಶ್ಯಕತೆ ಇದೆ ಹಾಗು ದೇವಸ್ಥಾನಕ್ಕೆ ಬರುವ ರಸ್ತೆಗಳು ಕಿರಿದಾಗಿ, ತಗ್ಗುಗುಂಡಿಗಳಿಂದ ಆವೃತ್ತವಾಗಿದ್ದು ಭಕ್ತರ ಅಭಿಷ್ಟೆಗಳನ್ನು ಈಡೇರಿಸಲು ಹರಸಾಹಸ ಪಡುವಂತಹ ಪರೀಸ್ಥಿತಿ ನಿರ್ಮಾಣವಾಗಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಹನಗಳಿಗೆ ಸೂಕ್ತ ತಾಣವಿಲ್ಲದ ಕಾರಣ ಬೇಕಾಬಿಟ್ಟಿ ವಾಹನಗಳನ್ನು ಬಿಡುವುದರಿಂದ ಪಾದಚಾರಿಗಳು, ಹಿರಿಯ ನಾಗರಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ದೇವಸ್ಥಾನದ ಸಮುಚ್ಚಾಯದಲ್ಲಿ ನೈರ್ಮಲ್ಯವೆಂಬುದು ಮರೀಚಿಕೆಯಾಗಿದೆ.

          ಭಕ್ತರ ಬರುವಿಕೆ ದ್ವಿಗುಣಗೊಂಡ ಕಾರಣ ಪಟ್ಟಣದಿಂದ ಸುಮಾರು 2 ಕಿ.ಮೀ ದೂರದಲ್ಲಿ ನಿರ್ಮಿಸಿರುವ ಯಾತ್ರಿನಿವಾಸವು ಮೂಲ ಸೌಕರ್ಯಗಳಿಂದ ಬಳಲುತ್ತಿರುವ ಕಾರಣ. ಯಾತ್ರಿಕರಿಲ್ಲದೇ ಬಿಕೋ ಎನ್ನುತ್ತಿದೆ.

            ದೇವಸ್ಥಾನದ ಪೂಜಾ ಕೈಂಕರ್ಯಾಗಳು ಯತಾವತ್ತಾಗಿ ನಡೆಯುತ್ತಾ ಬಂದಿದ್ದು, ಶ್ರಾವಣ ಮಾಸದಲ್ಲಿ ಶ್ರೀಸ್ವಾಮಿಗೆ ರುದ್ರಾಭಿಶೇಕ, ಇತ್ಯಾದಿ ಕಾರ್ಯಗಳು ನಡೆಯುತ್ತಿವೆ. ಅಲ್ಲದೇ ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ, ಮಾಘ ಮಾಸದಲ್ಲಿ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ಅತ್ಯಂತ ಸಂಭ್ರಮದಿಂದ ನಡೆಯುತ್ತಿರುವುದು ವಿಶೇಷವಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link