ಮುಂಜಾನೆ ಆವರಿಸಿದ್ದ ಗಾಢ ಮಂಜಿನ ಪರಿಣಾಮ ಸುಮಾರು ಐವತ್ತು ವಾಹನಗಳು ಡಿಕ್ಕಿಯಾಗಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ.
ಈ ಸರಣಿ ಅಪಘಾತ ರೋಹತಕ್ ಹಾಗೂ ರೆವಾರಿ ಹೆದ್ದಾರಿಯಲ್ಲಿ ನಡೆದಿದೆ. ಶಾಲಾ ಬಸ್ ಹಾಗೂ ಹಲವಾರು ಕಾರುಗಳು ಅಸ್ಪಷ್ಟ ಬೆಳಕಿನ ಪರಿಣಾಮ ಡಿಕ್ಕಿ ಹೊಡೆದುಕೊಂಡಿವೆ. ಏಳು ಮಂದಿ ಮೃತರಲ್ಲಿ ಆರು ಮಂದಿ ಮಹಿಳೆಯರು ಎನ್ನುವ ಮಾಹಿತಿ ಲಭ್ಯವಾಗಿದೆ