ಖತರ್ನಾಕ ಕಳ್ಳರ ಸೆರೆ…!!!

ಬೆಂಗಳೂರು

              ಮನೆಗಳವು,ಕನ್ನಗಳವು, ವಾಹನಗಳವು, ಸುಲಿಗೆ ಮಾಡುತ್ತಿದ್ದ 12 ಮಂದಿ ಆರೋಪಿಗಳನ್ನು ಅಮೃತಹಳ್ಳಿ ವಿದ್ಯಾರಣ್ಯಪುರ,ಕೊಡಿಗೇಹಳ್ಳಿ ಸೇರಿ ಈಶಾನ್ಯ ವಿಭಾಗದ ಪೊಲೀಸರು 12 ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸಿ ನಗದು ಎರಡೂವರೆ ಕೆ.ಜಿ. ತೂಕದ ಚಿನ್ನ, 6 ಕಾರುಗಳು, 4 ದ್ವಿಚಕ್ರ ವಾಹನಗಳು ಸೇರಿ 1.60 ಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

            ಅಮೃತಹಳ್ಳಿ ಪೊಲೀಸರು ಕನಕಪುರದ ರಾಹುಲ್‍ನಾಯಕ್ ಅಲಿಯಾಸ್ ರಾಹುಲ್ (20), ಅನಿಲ್‍ಕುಮಾರ್ ಅಲಿಯಾಸ್ ಜಾನಿ (19) ಎಂಬುವರನ್ನು ಬಂಧಿಸಿ 30 ಲಕ್ಷ ಮೌಲ್ಯದ 1 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಂಡು 8 ಕನ್ನ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

            ವಿದ್ಯಾರಣ್ಯಪುರ ಪೊಲೀಸರು ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜ (25) ಎಂಬಾತನನ್ನ ಬಂಧಿಸಿ 20 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾಭರಣಗಳು, ಒಂದು ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು 8 ಕಳವು ಪ್ರಕರಣಗಳನ್ನು ಪತ್ತೆಹಚ್ಚಿ ಮನೆ ಕಳ್ಳತನ ಮಾಡುತ್ತಿದ್ದ ಡಿ.ಜೆ.ಹಳ್ಳಿಯ ಇರ್ಷಾದ್ (38), ಶಿವಾಜಿನಗರದ ಉಮರ್ ಅಹಮದ್ (42)ನನ್ನು ಬಂಧಿಸಿ, 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡರೆ, ಮತ್ತೊಬ್ಬ ಆರೋಪಿ ಇರ್ಷಾದ್ ಉಲ್ಲಾನಿಂದ 4 ಲಕ್ಷ ಮೌಲ್ಯದ 120 ಗ್ರಾಂ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

            ಮತ್ತೊಬ್ಬ ಆರೋಪಿ ಶಿವಾಜಿನಗರದ ವೇಲು ಅಲಿಯಾಸ್ ಬ್ಲೇಡ್ ವೇಲು (40) ಎಂಬಾತನನ್ನು ಬಂಧಿಸಿ 8 ಲಕ್ಷ ಮೌಲ್ಯದ 250 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.ದೇವನಹಳ್ಳಿ ಪೊಲೀಸರು ದೊಡ್ಡಬಳ್ಳಾಪುರದ ನಾರಾಯಣಸ್ವಾಮಿ ಅಲಿಯಾಸ್ ಚಕೋತ (48) ಎಂಬ ಮನೆಗಳ್ಳನನ್ನು ಬಂಧಿಸಿ 5.75 ಲಕ್ಷ ರೂ. ಮೌಲ್ಯದ 230 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡು 4 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಕಾರುಗಳ್ಳನ ಸೆರೆ

          ಕೊಡಿಗೇಹಳ್ಳಿ ಪೊಲೀಸರು ಶಿವಮೊಗ್ಗ ಮೂಲದ ಶೇಖ್ ಶಾಹಿದ್ (21), ಹಮೀದ್ (22), ಮಹಮದ್ ಹುಸೇನ್ (28) ಎಂಬ ಸುಲಿಗೆಕೋರರನ್ನು ಬಂಧಿಸಿ, ಕ್ಯಾಬ್ ಚಾಲಕನ ಸೋಗಿನಲ್ಲಿ ಸುಲಿಗೆ ಮಾಡಿದ್ದ 40 ಸಾವಿರ ನಗದು, 52 ಗ್ರಾಂ ಚಿನ್ನ. ಸ್ವಿಪ್ಟ್ ಡಿಸೈರ್, ಇನ್ನೋವಾ ಸೇರಿ 2 ಕಾರುಗಳು, 22 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

          ಆರೋಪಿಗಳ ಬಂಧನದಿಂದ 6 ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ. ವಿದ್ಯಾರಣ್ಯಪುರ ಪೊಲೀಸರು ಶ್ರೀನಾಥ್ (29) ಎಂಬ ಕಾರುಗಳ್ಳನನ್ನು ಬಂಧಿಸಿ 15 ಲಕ್ಷ ಮೌಲ್ಯದ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.ಬೈಕ್ ಕಳವು ಮಾಡುತ್ತಿದ್ದ ಪಶುಪತಿ (24) ಎಂಬಾತನನ್ನು ಬಂಧಿಸಿ ಎರಡೂವರೆ ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆನೆದಂತ ವಶ

          ಸಕಲೇಶಪುರ ಅರಣ್ಯದಲ್ಲಿ ಮೃತಪಟ್ಟ ಆನೆಯ ದಂತಗಳನ್ನು ಕಳವು ಮಾಡಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ ಮೂವರು ಹಾಗೂ ಚಿರತೆ ಚರ್ಮ ಮಾರಾಟ ಮಾಡುತ್ತಿದ್ದ ಮೂವರು ಸೇರಿ 6 ಮಂದಿಯನ್ನುಬಂಧಿಸಿದ್ದಾರೆ.

          ಸಕಲೇಶಪುರ ಅರಣ್ಯದಲ್ಲಿ ಮೃತಪಟ್ಟ ಆನೆಯ ದಂತಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಕತ್ತರಿಸಿಕೊಂಡು ನಗರಕ್ಕೆ ಬಂದು ಹೆಬ್ಬಾಳ ಕೆರೆಯ ಕಲ್ಯಾಣಿಗೇಟ್ ಬಳಿ ಆಲ್ಟೋ ಕಾರಿನಲ್ಲಿ ಆನೆ ದಂತಗಳನ್ನಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಕಲೇಶಪುರದ ಅನಬಾಳುವಿನ ನಾಗೇಶ್(48)ಕೃಷ್ಣರಾಜು(54)ಹೊಳೆನರಸೀಪುರದ ಪ್ರತಾಪ್(27)ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

            ಬಂಧಿತರಿಂದ 15 ಕೆಜಿ ತೂಕದ 2 ಆನೆದಂತಗಳು ಆಲ್ಟೋಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ರಿಂಗ್ ರಸ್ತೆಯ ದೇವಿನಗರದ ಬಳಿ ಚಿರತೆ ಚರ್ಮ ಮಾರಾಟ ಮಾಡಲು ಯತ್ನಿಸಿದ ಬಳ್ಳಾರಿಯ ಅಪ್ಪನಹಳ್ಳಿಯ

           ಸುರೇಶ್(30)ಪಾಪಣ್ಣ(27)ಬಸವರಾಜ್(48)ನನ್ನು ಬಂಧಿಸಿ 1 ಚಿರತೆಚರ್ಮ,2 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

           ಆರೋಪಿಗಳು ದೇವರಹಟ್ಟಿಯ ಮಾರಮ್ಮನಗುಡ್ಡದಲ್ಲಿ ಮೇಲೆ ದಾಳಿ ನಡೆಸಿ ಸಾಯಿಸಿ ಅರ್ಧ ತಿಂದು ಬಿಟ್ಟು ಹೋಗಿದ್ದ ಹೋರಿಯ ದೇಹಕ್ಕೆ ಇಂಜಕ್ಷನ್ ಮೂಲಕ ಕೀಟನಾಶಕ ಸೇರಿಸಿಹೋಗಿದ್ದು ಮತ್ತೆ ಬಂದು ತಿಂದ ಚಿರತೆ ಮೃತಪಟ್ಟಿದ್ದು ಅದರ ಚರ್ಮ ಸುಲಿದು ದೇಹವನ್ನು ಸುಟ್ಟಿದ್ದರು.

           ಸುಲಿದ ಚರ್ಮವನ್ನು ನಗರಕ್ಕೆ ತಂದು ಮಾರಾಟ ಮಾಡಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ ಆರು ಮಂದಿ ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ಚೇತನ್‍ಕುಮಾರ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

1 ಲಕ್ಷ ಬಹುಮಾನ

          ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಗಳಿಗೆ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link