ಹಗರಿಬೊಮ್ಮನಹಳ್ಳಿ:
ತಾಲೂಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಇದೇ ಪ್ರಥಮವಾಗಿ ಜಿಲ್ಲಾ ಕೃಷಿ ಉತ್ಸವ ಜರುಗುತ್ತಿದೆ. ಇಲ್ಲಿಗೆ ಆಗಮಿಸಿದ ಸಹಸ್ರಾರು ಸಂಖ್ಯೆಯ ಜನತೆ ನೋಡುವವರಿಗೆ ಇದು ಕೃಷಿ ಇತ್ಸವವೂ ಜಾತ್ರಾ ಮಹೋತ್ಸವವೂ ಎಂದು ಹುಬ್ಬೇರಿಸುವಂತೆ ಬಾಸವಾಗುತ್ತಿದೆ.
ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ.ಕಾಲೇಜ್ ಆವರಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ಜಿಲ್ಲಾ ಕೃಷಿ ಉತ್ಸವಕ್ಕೆ, ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಸಂಡೂರು, ಕೊಟ್ಟೂರು ಹಾಗೂ ಹೂವಿನ ಹಡಗಲಿ ತಾಲೂಕು ಸೇರಿದಂತೆ ಈ ತಾಲೂಕಿನ ಪ್ರತಿವೂಂದು ಗ್ರಾಮಗಳಿಂದ ಬಹುತೇಕ 50ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಆಗಮಿಸಿ ಕೃಷಿ ಉತ್ಸವದಲ್ಲಿ ಪಾಲ್ಗೊಂಡರು. ಅದರಲ್ಲೂ ಮಹಿಳೆಯರು ಸಂಸ್ಕತಿಯನ್ನು ಬಿಂಬಿಸುವ ಉಡುಗೆಗಳನ್ನು ತೊಟ್ಟು ಅತ್ಯಂತ ಸಡಗರ ಸಂಭ್ರಮದಿಂದ ತಮ್ಮ ಮನೆಯ ಕಾರ್ಯಕ್ರಮ ಎನ್ನುವಂತೆ ಲವಲವಿಕೆಯಿಂದ ಓಡಾಡಿಕೊಂಡು, ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು ಶುಭಕಾರ್ಯವನ್ನು ನೆನಪಿಸುವಂತಿತ್ತು.
ಪಟ್ಟಣವು ಬಾಳೆ, ತೆಂಗಿನಗರಿ ಮತ್ತು ಹಸಿರು ತೋರಣಗಳು ಹಾಗೂ ಕೇಸರಿಮಯ ಧ್ವಜಗಳಿಂದ ಅಲಂಕೃತ ಗೊಂಡರೆ, ಉತ್ಸವಕ್ಕೆ ಆಗಮಿಸುವ ಅತಿಥಿಗಳಿಗೆ ಪ್ಲಕ್ಗಳ ಶುಭಾಶಯ ಮತ್ತು ಸ್ವಾಗತ ಕೋರುವ ಕಾಮಾನುಗಳು ರಾರಾಜಿಸುತ್ತಿದ್ದವು.
ಉತ್ಸವದ ಆವರಣದಲ್ಲಿ 200ಕ್ಕೂ ಹೆಚ್ಚು ಕೃಷಿ ಪರಿಕರಗಳನ್ನು ಪ್ರತ್ಯಕ್ಷಿಕೆ ತೋರುವ ಸಲಕರಣೆಗಳ ಮಳಿಗೆಗಳು, ಪುಸ್ತಕಗಳ, ಗೃಹ ಉಪಯೋಗಿ ಸಾಮಾಗ್ರಿಗಳು, ಸ್ಟೇಷನರಿ, ಸಿದ್ಧ ಉಡುಪುಗಳು, ರೈತರಿಗೆ ಮಾಹಿತಿ ನೀಡುವ ವಿವಿಧ ಕಂಪನಿ ಮಳಿಗೆಗಳು ಹಾಕಲಾಗಿತ್ತು ಇದನ್ನು ನೋಡಲು ಆಗಮಿಸುವ ಸಾರ್ವಜನಿಕರು ಅಂಗಡಿಯಿಂದ ಅಂಗಡಿಗೆ ಓಡಾಡುವುದು ಯಾವ ಜಾತ್ರಾಮಹೋತ್ಸವಕ್ಕೂ ಕಡಿಮೆ ಇಲ್ಲವೆನ್ನುವಂತಿತ್ತು.
ಇನ್ನೂ ಬೃಹತ್ ವೇದಿಕೆಯಲ್ಲಿ ವಿವಿಧ ಗ್ರಾಮೀಣ ಪ್ರದೇಶದಿಂದ ಬಂದಂತ ಮಹಿಳೆಯರ ದೇಶಿಯ ಸೊಗಡಿನ ನೃತ್ಯಗಳು, ಗೋಷ್ಠಿಗಳು, ಕವನಗಳ ವಾಚನ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಇನ್ನೂ ಎಲ್ಲದಕ್ಕಿಂತಾಗಿ ಮಿಗಿಲಾದುದ್ದು ಅನ್ನ ದಾಸೋಹ, ಈ ಉತ್ಸವದಲ್ಲಿ ಬೆಳಗಿನಿಂದ ಆರಂಭವಾದ ಅನ್ನದಾಸೋಹ ಇಲ್ಲೊಂದು ಧರ್ಮಸ್ಥಳ ಕ್ಷೇತ್ರದ ಅನ್ನದಾಸೋಹವನ್ನು ನೆನಪಿಸುವಂತಿದ್ದ, ಶಿಸ್ತು, ಸಂಯಮದಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆ ಜನತೆಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಒಟ್ಟಾರೆ ಇಲ್ಲೊಂದು ಕೃಷಿ ಉತ್ಸವವೂ ಜಾತ್ರಾ ಮಹೋತ್ಸವವೂ ನಡೆಯುತ್ತಿದೆ ಎಂದು ರೈತರೇ ಮಾತನಾಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








