ಕೊಟ್ಟೂರು
ಕೊಟ್ಟೂರು ತಾಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ನೂತನ ಗೌರವಾಧ್ಯಕ್ಷರಾಗಿ ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಹೆಚ್.ಎಂ. ಚನ್ನಬಸಯ್ಯ ಶ್ರೀಗಳ ಆಯ್ಕೆಯನ್ನು ಘೋಷಿಸಿದರು.
ಪಟ್ಟಣದ ಚಾನುಕೋಟಿ ಮಠದಲ್ಲಿ sಸೋಮವಾರ ಕರ್ನಾಟಕ ರಾಜ್ಯ ವೀರಶೈವ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ.ಹೆಚ್.ಎಂ. ಚನ್ನಬಸಯ್ಯ ಸಭೆ ಕರೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಕೊಟ್ಟೂರು ತಾಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷರಾಗಿ ಪಿ.ನಾಗೇಶ, ಉಪಾಧ್ಯಕ್ಷರಾಗಿ ಮೂಗಪ್ಪ, ಜೆ ಎಂ ರೇವಣರಾಧ್ಯ, ಜಿ ಸಿದ್ದೇಶ, ಎ ಹೆಚ್ ವಿಶ್ವನಾಥ, ಎಂ ಹೆಚ್ ಎಂ ಕೊಟ್ರೇಶ, ಹಾಗೂ ಪ್ರಧಾನ ಕಾರ್ಯದರ್ಶಿ ವಿ. ಎನ್. ಹಟ್ಟಿ ಶಿಕ್ಷಕರು ಇವರುಗಳನ್ನು ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಾಸ್ಕತಿಕ ಕಾರ್ಯದರ್ಶಿ ಟಿ. ವಿಜಯ್ ಕುಮಾರ್, ಪಿ ವೀರಣ್ಣ ಕೋಶಾಧ್ಯಕ್ಷ/ಖಜಾಂಚಿ ಎಸ್. ವಿ. ಹೀರೇಮಠ ಹಾಗೂ ಹೆಚ್ ಮಂಜುನಾಥ, ಐ. ಕೊಟ್ರೇಶ, ಎ. ರಾಜಣ್ಣ ವಿದ್ಯಾಧರ. ಎ. ಎಂ. ಲಲಿತಮ್ಮ ಪದಾಧಿಕಾರಿಗಳನ್ನಾಗಿ ಆಯ್ಕೆಮಾಡಿರುವುದಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಹೆಚ್ ಎಂ ಚನ್ನಬಸಯ್ಯ ಸ್ವಾಮಿ ಪತ್ರಿಕೆಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
