ತುರುವೇಕೆರೆ:
ಪಟ್ಟಣದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಒಳಚರಂಡಿ ಹಾಗೂ ವಾಣಿಜ್ಯ ಮಳಿಗೆ ಸಂಕೀರ್ಣ ಕಾಮಗಾರಿಗಳು ಮುಂದಿನ 15 ದಿನಗಳಲ್ಲಿ ಮರು ಚಾಲನೆ ದೊರಕಲಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ಪಟ್ಟಣದ ಭಾಜಪ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಟಿಎಪಿಸಿಎಮ್ಎಸ್ ನೂತನ ಅಧ್ಯಕ್ಷ ತಾವರೆಕೆರೆ ಮೈನ್ಸ್ ರಾಜು ಅವರ ಅಭಿನಂದನಾ ಕಾರ್ಯಕ್ರಮದ ಸಂಧರ್ಭದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಮಾಜಿಸಾಸಕ ಎಂ.ಟಿ.ಕೃಷ್ಣಪ್ಪನವರು ಮಾತು ಮಾತಿಗೆ ನಾನು ತಾಲ್ಲೂಕಿಗೆ ಅನುಧಾನ ದೊರಕಿಸಿದ್ದೇನೆ ಎಂದು ಗೊಂದಲದ ವತವರನ ನಿರ್ಮನ ಮಡುತ್ತಿದ್ದಾರೆ.
ನನ್ನ ಪರಿಶ್ರಮದಿಂದ ಈಗಾಗಲೇ ತಾಲ್ಲೂಕಿಗೆ ಹೇಮೆ ನೀರು ಹರಿಸುವಲ್ಲಿ ಸಫಲನಾಗಿದ್ದೇನೆ. ಪಟ್ಟಣದ ಯುಜಿಡಿ ಸೌಲಭ್ಯ ಸಾರ್ವಜನಿಕ ಸೇವೆ ಅಲಭ್ಯವಾಗಿರುವ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಾಗಿ ಈಗಾಗಲೇ ಒಳಚರಂಡಿ ಮಂಡಳಿಯ ಉನ್ನತಾದಿಕಾರಿಗಳ ತಂಡ ತುರುವೇಕೆರೆ ಪಟ್ಟಣಕ್ಕೆ ಆಗಮಿಸಿ ಒಳಚರಂಡಿ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ 3100 ಮ್ಯಾನ್ ಹೋಲ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಈಪೈಕಿ 20 ಮ್ಯಾನ್ ಹೋಲ್ಗಳು ಬ್ಲಾಕ್ ಆಗಿರುವುದನ್ನು ಪತ್ತೆ ಹಚ್ಚಲಾಗಿದೆ. ಪಟ್ಟಣ ವಾಸಿಗಳಿಗೆ ಗಗನ ಕುಸುಮವಾಗಿದ್ದ ಯುಜಿಡಿ ಸೌಲಭ್ಯವನ್ನು ಅತಿ ಶೀಘ್ರದಲ್ಲಿ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಮರೋಪಾದಿಯಲ್ಲಿ ಸಾಗುತ್ತಿವೆ.
ಪಟ್ಟಣದ ಹೃದಯಭಾಗದಲ್ಲಿ ಅಧರ್ಕ್ಕೆ ಸ್ಥಗಿತಗೊಂಡಿದ್ದ ವಾಣಿಜ್ಯ ಮಳಿಗೆ ಸಂಕೀರ್ಣ ಕಾಮಗಾರಿ ಕೇವಲ 15 ದಿನಗಳಲ್ಲಿ ಕೈಗೆತ್ತಿಕೊಳ್ಳಲಿದೆ. ಕಾಮಗಾರಿಗೆ 1.5 ಕೋಟಿ ರೂ.ಗಳು ಈಗಾಗಲೇ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭಕ್ಕೆ ಪೂರಕವಾದ ಎಲ್ಲಾ ಪ್ರಕ್ರಿಯೆಗಳು ಅಂತಿಮಗೊಂಡಿವೆ. ಸುಸಜ್ಜಿತ ಹಾಗೂ ಹೊಸ ವಿನ್ಯಾಸದ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಬದ್ದನಿದ್ದು, ಅಗತ್ಯ ಬಿದ್ದರೇ ಶಾಸಕರ ಅನುದಾನದಲ್ಲಿ ಮತ್ತಷ್ಟು ಹಣವನ್ನು ನೀಡುತ್ತೇನೆ.
ಅಗತ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಿದ್ದು ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲಿ ಪೂರಕವಾಗಿ ಪಟ್ಟಣ ಪಂಚಾಯಿತಿ ಸದಸ್ಯರ ಹಾಗೂ ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿ ಬೇಕಿದೆ. 65 ರಿಂದ 70 ಕೋಟಿ ರೂಗಳ ಅನುದಾನ ಅತಿ ಶೀಘ್ರ ಬಿಡುಗಡೆಯಾಗಲಿದ್ದು ಮತ್ತಷ್ಟು ರಸ್ತೆಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ತಾಲ್ಲೂಕಿನ ಮಯಸಂದ್ರ ಹೋಬಲಿ ಅಜ್ಜನಹಳ್ಳಿಯಲ್ಲಿ ಚಿನ್ನದ ನಿಕ್ಷೇಪದ ಬಗ್ಗೆ ಮಾಜಿ ಶಾಸಕರ ಸ್ವಾಗತಕ್ಕೆ ನನ್ನ ವಿರೋದವಿದೆ. ಕಾರಣ ಸಹಸ್ರಾರು ಅಡಿ ಆಳದಲ್ಲಿ ದೊರಕುವ ಚಿನ್ನದ ಗಣಿಗಾರಿಕೆಯಿಂದ ಅಂತರ್ಜಲ ಕುಸಿದು ತಾಲ್ಲೂಕಿನ ರೈತ ಕುಟುಂಬಗಳಿಗೆ ಮಾರಕವಾಗಲಿದ್ದು ತಾ|| ರೈತರ ಹಿತದೃಷ್ಠಿಯಿಂದ ನಾನು ಖಂಡಿಸುತ್ತೇನೆ ಎಂದರು.
ಬರಗಾಲದ ಬಗ್ಗೆ ಪ್ರಶ್ನಿಸಲಾಗಿ ಪ್ರಸ್ತುತ ಕ್ಷೇತ್ರಕ್ಕೆ ಎದುರಾಗಿರುವ ಬರಗಾಲವನ್ನು ಎದುರಿಸಲು ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಸಜ್ಜುಗೊಳಿಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕೊಳವೆಬಾವಿ ಕೊರೆಸಲು ಅನುದಾನ ಮೀಸಲಿಡಲಾಗಿದೆ. ಯಾವುದೇ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಈಗಾಗಲೇ ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೇಮಾವತಿ ನೀರು ಬರುವ ಜನವರಿ ಮಾಸಾಂತ್ಯದವರೆಗೂ ಹರಿಯಲಿದ್ದು ಬಾಕಿ ಉಳಿದಿರುವ ಕರೆಕಟ್ಟೆಗಳಿಗೆ ತುಂಬಿಸಲು ಕ್ರಮವಹಿಸುವ ಭರವಸೆ ನೀಡಿದ ಅವರು ನನ್ನ ಅದಿಕಾರವಧಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕೊರತೆಯಾಗದಂತೆ ಜಾಗ್ರತೆ ವಹಿಸುತ್ತೇನೆ.
ಹಂತ ಹಂತವಾಗಿ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ದಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.ಬಿಜೆಪಿ ತಾ|| ಅಧ್ಯಕ್ಷ ದುಂಡ ರೇಣುಕಯ್ಯ ಮಾತನಾಡಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ 3 ಬಾರಿ ಶಾಸಕರಾಗಿದ್ದರೂ ಅ ವೇಳೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ. ಆದರೆ ಇತ್ತೀಚೆಗೆ ಆಯ್ಕೆಯಾದ ನೂತನ ಶಾಸಕ ಮಸಾಲ ಜಯರಾಮ್ ಅವರ ಆಡಳಿತದಲ್ಲಿ ಅವರ ಹಸ್ತಕ್ಷೇಪ ಸರಿಯಲ್ಲ. ಅಷ್ಟಕ್ಕೂ ಅವರು ಅನುದಾನ ತರಲು ಅವರೇನು ಶಾಸಕರೇ, ಇಲ್ಲ ಸಂಸದರೇ. ಮೂಗು ತೂರಿಸುವುದನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ದಿಗೆ ಒತ್ತು ನೀಡಲಿ ಎಂದರು.
ಈ ಸಂಧರ್ಭದಲ್ಲಿ ಡಿ.ಆರ್. ಬಸವರಾಜು, ಮಾಚೇನಹಳ್ಳಿ ವಿಶ್ವಣ್ಣ, ಸೋಮಶೇಖರ್, ಸೋಮೆನಹಳ್ಳಿ ಜಗದೀಶ್, ಮಂಜುನಾಥ್, ಪ್ರಕಾಶ್, ಲಿಂಗರಾಜು, ಹೇಮಚಂದ್ರು, ಸಿದ್ದಲಿಂಗಯ್ಯ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
