ಶ್ರೀಮಂತರಿಗೊಂದು ಕಾನೂನು ಬಡವರಿಗೊಂದು ಕಾನೂನು..!

ತಿಪಟೂರು
 
    ದೇಶಕ್ಕೆಲ್ಲ ಒಂದೇ ಕಾನೂನು ಎಂದು ಕೇಂದ್ರ ಸರ್ಕಾರ ಮಾಡುವ ಹೊತ್ತಿನಲ್ಲಿ ತಿಪಟೂರು ನಗರಸಭೆಯು ಮಾತ್ರ ಧನಿಕರಿಗೊಂದು, ಬಡವರಿಗೊಂದು ಕಾನೂನು ಮಾಡಹೊರಟಿರುವುದು ವಿಪರ್ಯಾಸವಾಗಿದೆ.
    ಬೀದಿಬದಿಯಲ್ಲಿ ಗಾಡಿಗಳನ್ನಿಟ್ಟುಕೊಂಡು ಮುಂದೆ ಸ್ವಲ್ಪಹೊದಿಕೆ ಹೊದಿಸಿ ಕಾಫಿ/ಟೀ, ತಿಂಡಿ, ಊಟ, ಚುರುಮುರಿ, ಬೋಂಡ ಜೊತೆಗೆ ತಂಬಾಕು ಪದಾರ್ಥಗಳಾದ ಬೀಡಿ, ಸಿಗರೇಟ್, ಗುಟ್ಕಾ ಮಾರುತ್ತಿರುವ ಪೆಟ್ಟಿಗೆ ಅಂಗಡಿಗಳ ಮುಂದಿನ ಹೊದಿಕೆಗಳನ್ನು ಇಂದು ತೆಗೆಸುವ ಕೆಲಸವನ್ನು ಇಂದು ನಗರಸಭೆಯವರು ಮಾಡ ಹೊರಟಿರುವುದು ಒಂದು ಕಡೆ ಒಳ್ಳೆಯ ವಿಷಯ ಆದರೆ ಇದೇ ಧೈರ್ಯವನ್ನು ಕೆಲವು ಪ್ರಭಾವಿಗಳು ಕನ್ಸರ್‍ವೆನ್ಸಿಗಳು, ಪಕ್ಕದ ಖಾಲಿನಿವೇಶನಗಳು, ಸರ್ಕಾರಿ ಜಮೀನು, ಕೆರೆ, ರಾಜಾಕಾಲುವೆಯನ್ನು ಒತ್ತುವರಿ ಮಾಡಿರುವ ಪ್ರಭಾವಿಗಳನ್ನು ಯಾವಾಗ ತೆರವುಗೊಳಿಸುತ್ತಾರೆಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
    ಇನ್ನು ರಸ್ತೆಬದಿಯ ವ್ಯಾಪಾರಿಗಳಲ್ಲಿ ಎಲ್ಲರೂ ಬಡವರಲ್ಲ ಉದಾಹರಣೆಗೆ ನಗರದ ಪ್ರವಾಸಿ ಮಂದಿರ ವೃತ್ತಲ್ಲಿ ಕೆಲವು ಖಾಲಿ ಪೆಟ್ಟಿಗೆ ಅಂಗಡಿಗಳಿವೆ ಎಂದರೆ ಅವರ್ಯಾರೂ ಅಂಗಡಿಯಿಂದ ಲುಕ್ಸಾನಾಗಿ ಹೋದವರಲ್ಲ ಅವರುಗಳು ಸ್ಥಳವನ್ನು ಆಕ್ರಮಿಸಿ ಅದನ್ನೇ ಬಾಡಿಗೆಗೆ ದೂಡುವ ಹುನ್ನಾರವೂ ಇದೆ ಇದು ನಗರದಾದ್ಯಂತಲೂ ವಿಸ್ತರಿಸಿದೆ. ಮೊದಲು ಆ ಖಾಲಿಇರುವ ಅಂಗಡಿಗಳನ್ನು ಎತ್ತಿಸಿ ಬಡವರಿಗೆ ವ್ಯಾಪಾರಮಾಡಿಕೊಳ್ಳಲು ದಾರಿಮಾಡಿಕೊಡಿ. 
ಈ ಪೆಟ್ಟಿಗೆ ಅಂಗಡಿಗಳಿಂದಲೇ ಪ್ಲಾಸ್ಟಿಕ್ :
    ನಗರದಲ್ಲಿ ಮಾರ್ಚ್ ಒಂದರಿಂದ ಸಂಪೂರ್ಣವಾಗಿ ಕಳಪೆ ಮಟ್ಟದ ಪ್ಲಾಸ್ಟಿಕ್ ಅನ್ನು ನಿಷೇದಿಸಲಾಗಿದೆ. ನಗರಸಭೆಯವರು ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸುತ್ತಿದ್ದಾರೆ. ಆದರೆ ಈ ಪಟ್ಟಿಗೆ ಅಂಗಡಿಗಳಲ್ಲಿ ಸಿಗುವ ಚುರುಮುರಿ, ಬೊಂಡ, ತಿಂಡಿ ತೀರ್ಥಗಳನ್ನು ಕಟ್ಟಿಕೊಡಲು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಬಳಸುತ್ತಿದ್ದು ಇನ್ನು ಕೆಲವು ಅಂಗಡಿಗಳಲ್ಲಿ ನ್ಯೂಸ್ ಪೇಪರ್ ಅನ್ನೇ ಬಳಸಿ ತಿಂಡಿಗಳನ್ನು ಕಟ್ಟಿಕೊಡುತ್ತಿರುವುದು ಮತ್ತು ರಸ್ತೆಬದಿ ತಿಂಡಿ ಸೇವಿಸುವ ಸಾರ್ವಜನಿಕರ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತಿದೆ ಎಂಬುದನ್ನು ನಗರಸಭೆಯ ಆರೋಗ್ಯಾಧಿಕಾರಿಗಳೇ ತಿಳಿಸಿಬೇಕಾಗಿದೆ.
    ಇನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಬಾಲಕೀಯರ ಮತ್ತು ಬಾಲಕರ ಪದವಿ ಪೂರ್ವ ಕಾಲೇಜು, ಹಾಸನ ವೃತ್ತದ ಕಲ್ಪತರು ಕಾಲೇಜು ಮುಂದಿನ ಪೆಟಿಗೆ ಅಂಗಡಿಗಳಿದ್ದು ಇವುಗಳಲ್ಲಿ ಯಾವ ಅಂಗಡಿಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಒಂದು ಪೆನ್ನು ಪೇಪರ್ ಸಿಗುವುದಿಲ್ಲ ಆದರೆ ಇಲ್ಲಿ ನಿಮಗೆ ಯಾವುದೇ ಬ್ರಾಂಡ್‍ನ ಸಿಗರೇಟ್, ಗುಟ್ಕಾ, ಪಾನ್‍ಮಸಾಲ ದೊರೆಯುತ್ತಿದ್ದು ರಾಜಾರೋಷವಾಗಿ ಮಾರಾಟಮಾಡುತ್ತಿದ್ದರು ಜಿಲ್ಲಾ ಮಾದಕವಸ್ತು ನಿಯಂತ್ರಕರು ಸಹ ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೂ ಕೆಲವು ಅಂಗಡಿಗಳಳವು ಇನ್ನೊಂದು ಹೆಜ್ಜೆ ಮುಂದೆಹೋಗಿ ಗಾಂಜ ಸಹ ಮಾರುತ್ತಿದ್ದು ಕೆಲವರು ಮಟ್ಕಾವನ್ನು ಆಡಿಸಿ ವಿದ್ಯಾರ್ಥಿಗಳನ್ನು ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆಂದು ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ.
    ಇನ್ನು ಕೆಲವು ಪಟ್ಟಿಗೆ ಅಂಗಡಿಗಳಲ್ಲಿ ದೂಮಪಾನ ನಿಷೇದ ಎಂದು ದೊಡ್ಡದಾಗಿ ಫಲಕವನ್ನು ಹಾಕಿಕಂಡಿದ್ದು ಕಾಣುತ್ತದೆ ಆದರೆ ಅದೇ ಫಲಕದ ಕೆಳಗೆ ದೂಮಪಾನಿಗಳು ದೂಮಪಾನ ಮಾಡುತ್ತಿರುತ್ತಾರೆ ಇದರಿಂದ ಸುತ್ತಲು ಹೊಗೆಯ ವಾತಾವರಣ ಸೃಷ್ಠಿಯಾಗಿ ರಸ್ತೆಯಲ್ಲಿ ಇವರು ನಿಲ್ಲಿಸುವ ವಾಹನಗಳಿಂದ ಪಾದಚಾರಿಗಳು, ಮಹಿಳೆಯರು, ಮಕ್ಕಳು ಮತ್ತು ಬಸ್‍ಗಳಿಗಾಗಿ ಕಾಯುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ನಿರ್ಮಾಣವಾಗಿದ್ದು ಇನ್ನು ಕೆಲವು ಪಟ್ಟಿಗೆ ಅಂಗಡಿಗಳಲ್ಲಿ ಮದ್ಯವನ್ನು ಮಾರುತ್ತಿದ್ದು ಕಂಡುಬಂದಿದೆ.ನಗರದಲ್ಲಿ ಈ ಪಟ್ಟಿಗೆ ಅಂಗಡಿಗಳನ್ನು ಮುಟ್ಟದೇ ಇರುವುದು ನಗರಸಭೆಯ ಅಧಿಕಾರಿಗಳು ಎಲ್ಲೋ ಒಂದು ಕಡೆ ಪ್ರಭಾವಿ ವ್ಯಕ್ತಿಗಳು ಅಂಗಡಿಗಳನ್ನು ಮತ್ತು ಒತ್ತುವರಿಯನ್ನು ಯಾವಾಗ ತೆರವುಗೊಳಿಸುತ್ತಾರೆಂದು ಕಾದು ನೊಡುವ ಪರಿಸ್ಥಿತಿಯಲ್ಲಿ ನಗರದ ನಾಗರೀಕರಿದ್ದಾರೆ.
 ಅಂಗಡಿ ತೆರವು ಗೊಳಿಸಬೇಕಾದರೆ ಮಹಿಳೆಗೆ ಗಾಯ :
 
      ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ಅಂಗಡಿ ಮುಂದಿನ  ಚಪ್ಪರವನ್ನು ತೆಗೆಸಬೇಕಾದರೆ ಪಟ್ಟಿಗೆ ಅಂಗಡಿ ಒಡತಿ ಚಂದ್ರಮನ್ನ ತಲೆಗೆ ಪಟ್ಟುಬಿದ್ದಿದೆ.ಇನ್ನೊಂದು ಆಯಾಮದಲ್ಲಿ ನೋಡುವುದಾದರೆ ಕೆಲವು ಬಡವರು ಪಟ್ಟಿಗೆ ಅಂಡಿಗಳನ್ನು ಇಟ್ಟುಕೊಂಡರೆ ಪರವಾಗಿಲ್ಲ ಆದರೆ ಇನ್ನೂಕೆಲವರು ತಮ್ಮ ಮನೆಗಳನ್ನು ಕಟ್ಟಿ ಬಾಡಿಗೆಯನ್ನು ಪಡೆದುಕೊಂಡು ನಮಗೆ ಏನೂ ಇಲ್ಲ ಎಂದು ಪೆಟ್ಟಿಗೆ ಅಂಗಡಿಯನ್ನು ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲೀಕರುಗಳಿಗೂ ಇದರಿಂದ ಮೋಸವಾಗುತ್ತಿದೆ. ಇನ್ನು ನಗರದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದರೆ ಪ್ಲಾಸ್ಟಿಕ್ ಮಾಲಿನ್ಯವೂ ನಿಂತು ಬೀಡಿ ಸಿಗರೇಟು ಮತ್ತು ಮಾದಕವ್ಯಸನಕ್ಕೆ ವಿದ್ಯಾರ್ಥಿಗಳು ದಾಸರಾಗುವುದನ್ನು ಸ್ವಲ್ಪಮಟ್ಟಿಗಾದರೂ ತಡೆಯಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link