ನವದೆಹಲಿ: 

ಹಿಂದೆ ಗುರುಕುಲಗಳಲ್ಲಿ ಹೇಳಿಕೊಡುತ್ತಿದ್ದ ಪರೋಪಕಾರಂ ಅರ್ಥಂ ಇದಂ ಶರೀರಂ ಎಂಬ ನಾನ್ನುಡಿಗೆ ಈಗಿನ ಕಾಲ ಘಟ್ಟದಲ್ಲಿ ಯಾವುದೇ ಬೆಲೆ ಇಲ್ಲಾ ಎಂದು ಹೇಳುವಾಗ ಇಲ್ಲೊಬ್ಬ ಆಟೋ ಚಾಲಕ ತನ್ನ ಜೀವದ ಹಂಗನ್ನು ತೋರೆದು ಆತ್ಮಹತ್ಯೆಗೆ ಯತ್ನಿಸಿ ಯಮುನಾ ನದಿಗೆ ಹಾರಿದ್ದ ತಾಯಿ ಹಾಗೂ ಮಗವನ್ನು ರಕ್ಷಿಸುವ ಸಲುವಾಗಿ ತನ್ನ ಜೀವ ಕೊಟ್ಟಿದ್ದಾನೆ.
ದೆಹಲಿಯಲ್ಲಿ ಮೀತಾಪುರ ಕಾಲುವೆ ಮೇಲಿನ ಸೇತುವೆ ಮೇಲೆ ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ನಿಂತಿರುವುದನ್ನು 30 ವರ್ಷದ ಆಟೋ ಚಾಲಕ ಪವನ್ ಶಾ ನೋಡಿ ಸಮಸ್ಯೆ ಎನು ಎಂದು ಕೇಳುವ ಮೊದಲೇ ನೀರಿಗೆ ಹಾರಿದ ಅವರನ್ನು ತನ್ನ ಪ್ರಾಣ ಒತ್ತೆ ಇಟ್ಟು ಕಾಪಾಡಿ ತಾನು ಇಹಲೋಕ ತ್ಯಜಿಸಿದ್ದಾನೆ ಎಂದು ತಿಳಿದು ಬಂದಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








