ಬಳ್ಳಾರಿ
ಬಡವರ ಬಂದು ಯೋಜನೆಯ ಅಡಿಯಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಬಡ್ಡಿ ರಹಿತ 2000 ರಿಂದ 10,000 ಸಾವಿರದ ವರೆಗೆ ಸಹಕಾರ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯಗಳು ಫಲಾನುಭವಿಗಳಿಗೆ ನಗರದ ತರಕಾರಿ ಮಾರುಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ವಿವಿಧೆಡೆಯ ಬೀದಿ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಗುರುತಿನ ಚೀಟಿಗಳನ್ನು ಭಾನುವಾರ ವಿತರಿಸಲಾಯಿತು.
100ಕ್ಕೂ ಹೆಚ್ಚು ಜನ ಬೀದಿ ಬದಿ ವ್ಯಾಪಾರಿಗಳಿಗೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಅನ್ವಯ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಈ ಗುರುತಿನ ಚೀಟಿ ಹೊಂದಿದವರಿಗೆ ರಾಜ್ಯ ಸರಕಾರ ಇತ್ತೀಚಿಗೆ ಜಾರಿಗೊಳಿಸಿದ ಬಡವರ ಬಂಧು ಯೋಜನೆ ಅಡಿ 2 ಸಾವಿರದಿಂದ 10 ಸಾವಿರದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ; ಅದನ್ನು ಬೀದಿಬದಿ ವ್ಯಾಪಾರಿಗಳು 3ತಿಂಗಳೊಳಗೆ ಪಾವತಿಸಿ ಮತ್ತೆ ಸಾಲ ಪಡೆದುಕೊಳ್ಳಬಹುದಾಗಿದೆ.
ಇನ್ನುಳಿದ ಬೀದಿ ಬದಿ ವ್ಯಾಪಾರಿಗಳಿಗೂ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತ ಮಹ್ಮದ್ ಮುನೀರ್ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಕೆ,ಗಾದಿಲಿಂಗನ ಗೌಡ ಚನ್ನಬಸವನಗೌಡ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ