ತಿರುವನಂತಪುರಂ:
ಸಲಿಂಗಾಕರ್ಷಣೆ ಇತ್ತೀಚೆಗೆ ಸಮಾನ್ಯ ಆದರೆ ಅದು ಅತಿರೇಖಕಕ್ಕೆ ಹೋದರೆ ಏನಾಗುತ್ತದೇ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆ . ಇಲ್ಲಿ ಯುವತಿಯೊಬ್ಬಳು ತನ್ನ ಗೆಳತಿಯನ್ನು ಮದುವೆಯಾಗಲು ಲಿಂಗ ಪರಿವರ್ತನೆ ಮಾಡಿಸಿಕೊಂಡು ಯುವಕನಾಗಿ ಬದಲಾಗಿ ಮದುವೆಯಾಗಲೆಂದು ಹೋದರೆ ಗೆಳತಿ ಕೈಕೊಟ್ಟ ಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಯುವತಿ ಅರ್ಚನಾ(23) ತನ್ನ ಗೆಳತಿಯನ್ನು ಮದುವೆಯಾಗಲು ಲಿಂಗ ಪರಿವರ್ತನೆ ಮಾಡಿಕೊಂಡು ದೀಪು ಆರ್ ದರ್ಶನ್ ಆಗಿ ಬದಲಾಗಿದ್ದಾಳೆ. ಆದರೆ ಆಕೆಯ ಗೆಳತಿ ದರ್ಶನ್ನನ್ನು ಮದುವೆಯಾಗಲು ನಿರಾಕರಿಸಿದ್ದು, ಈಗ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ಅರ್ಚನಾ ಎಂಬ ಯುವತಿ ಏರ್ ಪೋರ್ಟ್ ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೋಮಾ ಪಡೆದಿರುತ್ತಾಳೆ , ಕೇರಳದ ಪ್ರೈವೆಟ್ ಎಲೆಕ್ಟ್ರಾನಿಕ್ಸ್ ಕಂಪೆನಿಯಲ್ಲಿ ಸೆಲ್ಸ್ ಡಿವಿಶನ್ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ತನ್ನ ಗೆಳತಿ ಅನಾಗಾ(ಹೆಸರು ಬದಲಾಯಿಸಲಾಗಿದೆ) ಜೊತೆ ತುಂಬ ಸಲುಗೆಯಿಂದ ಇರುತ್ತಾರೆ.
ಅನಾಗಾ ಜೊತೆ ಗೆಳೆತನವಾದ ಬಳಿಕ ಅರ್ಚನಾ ಆಕೆಯ ಜೊತೆ ಒಟ್ಟಿಗೆ ಸಮಯ ಕಳೆಯುತ್ತಿದ್ದಳು. ಅಲ್ಲದೇ ಇಬ್ಬರು ಜೊತೆಯಲ್ಲೇ ಇರುತ್ತಿದ್ದರು. ಈ ವೇಳೆ ಅನಾಗಾ ನೀನು ಹುಡುಗ ಆಗಿದ್ದರೆ ನಾನು ನಿನ್ನನ್ನೇ ಮದುವೆಯಾಗುತ್ತಿದ್ದೆ ಮತ್ತು ಆಗ ನಾವು ಜೀವನದಲ್ಲಿ ಒಟ್ಟಿಗೆ ಇರಬಹುದು ಎಂದು ಹೇಳಿದ್ದಾಳೆ. ಅನಾಗಾ ಹೇಳಿದ ಈ ಮಾತು ಕೇಳಿದ ಅರ್ಚನಾ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾಳೆ.
ಇದಕ್ಕೆ ಮುನ್ನುಡಿಯಾಗಿ ಅರ್ಚನಾ ತನ್ನ ಅಂಕಲ್ ಬಳಿ ವಿಷಯ ಚರ್ಚೆ ಮಾಡಿದ್ದಾಳೆ. ಇದೇ ವೇಳೆ ಅನಾಗಾಗೆ ಮದುವೆ ಪ್ರಸ್ತಾಪಗಳು ಬರುತ್ತಿದ್ದವು. ಇತ್ತ ಅರ್ಚನಾ ಲಿಂಗ ಪರಿವರ್ತನೆ ಮಾಡಿಕೊಳ್ಳುವುದರ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದಳು. ಈ ವರ್ಷದ ಅಕ್ಟೋಬರ್ 25ರಂದು ಅರ್ಚನಾ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿ ತನ್ನ ಹೆಸರನ್ನು ದೀಪು ಆರ್ ದರ್ಶನ್ ಎಂಬುದಾಗಿ ಬದಲಾಯಿಸಿ ಕೊಂಡಿದ್ದಳು.
ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ದರ್ಶನ್ ತನ್ನ ಗೆಳತಿ ಅನಾಗಾಳನ್ನು ಭೇಟಿ ಮಾಡಲು ಹೋಗಿದ್ದಾನೆ. ಆದರೆ ಅನಾಗಾ ಮಾತ್ರ ಅರ್ಚನಾ ಕರೆಗೆ ಹಾಗೂ ಮೆಸೇಜ್ಗೆ ರಿಪ್ಲೈ ಮಾಡುತ್ತಿರಲಿಲ್ಲ. ಹೀಗಾಗಿ ದರ್ಶನ್ ನವೆಂಬರ್ 6 ರಂದು ಪೇರುವನ್ನಾಮುಜಿ ಪೆÇಲೀಸ್ ಠಾಣೆಯಲ್ಲಿ ಅನಾಗಾ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ.
ದರ್ಶನ್ ದೂರನ್ನು ಸ್ವೀಕರಿಸದ ಪೊಲೀಸರು ನೀವೆ ಎರಡು ಕುಟುಂಬಗಳು ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಬೇಸತ್ತ ದರ್ಶನ್ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದಾನೆ.
ಶಸ್ತ್ರಚಿಕಿತ್ಸೆ ಹಿಂದಿನ ದಿನ ಕೂಡ ನಾನು ಅನಾಗಾ ಜೊತೆ ಫೋನಿನಲ್ಲಿ ನಾನು ಮಾತನಾಡಿದ್ದೇ. ಈ ವೇಳೆ ಅನಾಗಾ ಶಸ್ತ್ರಚಿಕಿತ್ಸೆ ಬಳಿಕ ನಾವು ಮದುವೆಯಾಗಿ ತಮಿಳುನಾಡಿನ ತಿರುಪುರ್ ಗೆ ಓಡಿ ಹೋಗೋಣ ಎಂದು ಹೇಳಿದ್ದಳು ಎಂದು ಅರ್ಚನಾ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.
ಈ ವಿಚಾರದ ಬಗ್ಗೆ ಪೇರುವನ್ನಾಮುಜಿ ಎಸ್ಐ ಅನಾಗಾ ಬಳಿ ಮಾತನಾಡಿದ್ದಾರೆ. ಮಾತುಕತೆಯ ವೇಳೆ ಅನಾಗಾ, ನನ್ನ ಮತ್ತು ಅರ್ಚನಾ ಮಧ್ಯೆ ಯಾವುದೇ ಸಂಬಂಧವಿರಲಿಲ್ಲ. ಅರ್ಚನಾ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಕೊಂಡ ವಿಷಯ ನನಗೆ ಗೊತ್ತೇ ಇಲ್ಲ ಎಂದಿದ್ದಾಳೆ. ಅನಾಗಾಳ ಈ ಮಾತು ಕೇಳಿ ದರ್ಶನ್ ಹೈ ಕೋರ್ಟ್ ನಲ್ಲಿ ಹೇಬಿಸ್ ಕಾರ್ಪಸ್ ದಾಖಲಿಸಿದ್ದಾನೆ. ಕುಟುಂಬದವರ ಒತ್ತಡಕ್ಕೆ ಮಣಿದು ಆಕೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾಳೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾನೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ