ಸಮುದಾಯದ ಕಲ್ಯಾಣ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು.

ಹೊಸಪೇಟೆ :

         ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಸಂಸ್ಥೆಯ ಮೂಲಕ ಸಮುದಾಯದ ಕಲ್ಯಾಣ, ಗುಣಮಟ್ಟದ ಶಿಕ್ಷಣ, ಹಾಗು ಜನಸಂಖ್ಯೆಗನುಗುಣವಾಗಿ ವ್ಯವಹಾರ ಜ್ಞಾನ ಮೂಡಿಸುವ ನಿಟ್ಟಿನಲ್ಲಿ ಸಮುದಾಯಕ್ಕೆ ಜಾಗೃತಿ ಮೂಡಿಸಲು ಶ್ರಮಿಸಲಾಗುವುದು ಎಂದು ಜೆಐಟಿಒ 2018-20ರ ನೂತನ ಅಧ್ಯಕ್ಷ ವಿಜಯಶ್ರೀ ಹೆರಿಟೇಜ್ ರೆಸಾರ್ಟ್‍ನ ಮಾಲೀಕ ರಾಜು ಭೂರಟ್ ಹೇಳಿದರು.

         ತಾಲೂಕಿನ ಕೊಂಡನಾಯಕನಹಳ್ಳಿಯ ವಿಜಯಶ್ರೀ ಹೆರಿಟೇಜ್ ಸಭಾಂಗಣದಲ್ಲಿ ಭಾನುವಾರ ನಡೆದ ಜೆಐಟಿಒ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಇರುವ ಈ ಜೆಐಟಿಒ ಎಂಬ ಸಂಸ್ಥೆಯಲ್ಲಿ ಕೈಗಾರಿಕೋಧ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ಇತರರಿದ್ದು, ಅವರಿಗೆ ನಮ್ಮ ಸಂಸ್ಥೆಯ ಮೂಲಕ ಸೇವೆ ಸಲ್ಲಿಸಲಾಗುವುದು. ಸಂಸ್ಥೆಯಲ್ಲಿ ಈಗಾಗಲೇ ಯುವ ಹಾಗು ಮಹಿಳಾ ಘಟಕಗಳು ಸಕ್ರಿಯವಾಗಿವೆ. ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿವೆ ಎಂದರು.

        ಅಹಿಂಸಾ ತತ್ವದಡಿ ಕೆಲಸ ಮಾಡುವವರೆಲ್ಲರೂ ಜೈನರೇ. ಇಲ್ಲಿ ಯಾವುದೇ ಜಾತಿ, ಧರ್ಮ ಇಲ್ಲ. ನಮ್ಮ ಸಮುದಾಯದ ಬೆಂಗಳೂರು, ದೆಹಲಿ ಹಾಗು ಇಂದೋರ್‍ನಲ್ಲಿ ಐಎಎಸ್ ತರಬೇತಿ ಕೇಂದ್ರಗಳಿದ್ದು, ಅದರಲ್ಲಿ 138 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಹೊಸಪೇಟೆಯಲ್ಲಿ ಎಸಿ ಆಗಿದ್ದ ಗಾರ್ಗಿಜೈನ್ ಕೂಡ ಇದೇ ಸಂಸ್ಥೆಯಲ್ಲಿ ಐಎಎಸ್ ಪಡೆದಿದ್ದರು ಎಂದು ತಿಳಿಸಿದರು.
ಬಲ್ಡೋಟಾ ಸಂಸ್ಥೆಯ ನರೇಂದ್ರ ಬಲ್ಡೋಟಾ ಮಾತನಾಡಿ, ಹೊಸಪೇಟೆಯಲ್ಲಿ ಕೂಡ ಜೈನ್ ಇಂಟರ್‍ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಹಲವು ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದರು.

        ಕರ್ನಾಟಕ ಗೋವಾ ವಲಯದ ಅಧ್ಯಕ್ಷ ಓಂಪ್ರಕಾಶ್ ಜೈನ್, ಕಮಲೇಶ್ ಸೊಫಿಲಿಯನ್, ಜೆಐಟಿಒ 2018-20ರ ಅವಧಿಯ ಉಪಾಧ್ಯಕ್ಷ ನಿರ್ಮಲ್ ಬಿ.ಜೈನ್, ಹಿತೇಶ್ ಬರ್ಗೇಚ, ಸುಭಾಸ್ ಜಿ.ಜೈನ್, ಪ್ರ.ಕಾರ್ಯದರ್ಶಿ ಆನಂದ ಪಾಲ್ರೇಚಾ, ಜಂಟಿ ಕಾರ್ಯದರ್ಶಿ ವಿನಯ್ ಕನುಂಗ, ಖಜಾಂಚಿ ಮಹಾವೀರ್ ಕವಾಡ್ ಸೇರಿದಂತೆ ಇತರೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.ಮನೋಜ್ ಓಸ್ವಾಲ್, ಇಂದೇರ್ ಕುಮಾರ್ ಜೈನ್, ಕಾಂತಿಲಾಲ್ ಜಿ.ಜೈನ್, ಮಹೇಂದ್ರ ಪಿ.ಜೈನ್, ದಿನೇಶ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link